ಹುತಾತ್ಮರಾದ ವೀರ ಯೋಧರಿಗೆ ರಕ್ತದಾನದ ಶ್ರದ್ಧಾಂಜಲಿ

ಲೋಕದರ್ಶನ ವರದಿ    

ಅಂಕೋಲಾ 23: ನಾಡಿನ ಹೆಸರಾಂತ ಯುವ ಸಂಘಟನೆಯಾಗಿ ಗುರುತಿಸಿಕೊಂಡು ಹತ್ತಾರು ವಿದಾಯಕ ಚಟುವಟಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಲಕ್ಷ್ಮೇಶ್ವರದ ಚಿನ್ನದಗರಿ ಯುವಕ ಸಂಘ, ಬೃಹತ್ ರಕ್ತ ದಾನ ಮತ್ತು ಜಾಗೃತಿ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಂಡು ತನ್ನ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿಕೊಂಡಿದೆ. 

ಇತ್ತೀಚಿಗೆ ಕಾಶ್ಮೀರದಲ್ಲಿ ಹುತಾತ್ಮರಾದ ವೀರ ಯೋಧರನ್ನು ನೆನೆದು ರಕ್ತದಾನ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ಅಂಕೋಲಿಗರು ಸ್ವಾತಂತ್ರ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಬೆಳಿಗ್ಗೆ ಮಹತ್ವ ಪೂರ್ಣ ಸಾಮಾ ಜಿಕ ಚಿಂತನೆಗೆ ಕೈಜೋಡಿಸಿದರು. ಪ್ರಾರಂಭದಲ್ಲಿ ದೇಶ ಸೇವೆಗಾಗಿ ಪ್ರಾಣತೆತ್ತ ವೀರ ಸ್ವಾತಂತ್ರ್ಯ ಹೋರಾ ಟ ಗಾರರು ಮತ್ತು ವೀರ ಯೋಧರಿಗೆ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. 

ಪಿ.ಎಂ. ಪ್ರೌಢ ಶಾಲೆಯ ಪ್ರಾಚಾರ್ಯ ರವೀಂದ್ರ ಕೇಣಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಶುಭಲತಾ ಅಸ್ನೋಟಿಕರ್, ವಿಲಾಸ ನಾಯಕ (ಪುಟ್ಟು), ಕಾತರ್ಿಕ ನಾಯ್ಕ ಮತ್ತು ಗೆಳೆಯರ ಬಳಗ ಹಮ್ಮಿಕೊಂಡ ಉತ್ತಮ ಕಾರ್ಯ ಶ್ಲಾಘಿಸಿದರು. ಲಕ್ಷ್ಮೇಶ್ವರದ ಹಿರಿಯರಾದ ಆರ್.ಟಿ.ಮಿರಾಶಿ, ನ್ಯಾಯವಾದಿ ಉಮೇಶ ನಾಯ್ಕ, ಉತ್ತಮ ಎನ್.ಎಸ್.ಎಸ್. ಅಧಿಕಾರಿಯಾಗಿ ಪುರಸ್ಕೃತರಾಗಿರುವ ಡಾ.ಗೀತಾ ನಾಯಕ, ಕೆ.ಎಲ್. ಇ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ ಹೆಗಡೆ, ತಾ.ಪಂ. ಅಧ್ಯಕ್ಷೆ ಸುಜಾತ ಟಿ. ಗಾಂವ ಕರ, ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಮಂಜರ್ ಸೈಯದ್ ಸೇರಿದಂತೆ ಹಲವು ಪ್ರಮುಖರು ರಕ್ತ ದಾನ ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. 

ಡಾ.ಅರ್ಚನಾ ನಾಯ್ಕ ರಕ್ತದಾನದ ಕುರಿತು ಮಾಹಿತಿ ನೀಡಿದರು. ಎನ್.ಸಿ.ಸಿ. ಘಟಕದ ಅಧಿಕಾರಿ ಜಿ. ಆರ್.ತಾಂಡೇಲ್ ರಕ್ತದಾನ ಮತ್ತು ಜಾಗೃತಿ ಕುರಿತು ಪ್ರತಿಜ್ಞಾವಿಧಿ ಭೋಧಿಸಿದರು. ಕಲಾವಿದರಾದ ಶಂಕರ ಅಡ್ಲೂರು, ಶಿವಾನಂದ ಅಲಗೇರಿ, ಯೋಗೇಶ ಪೆಡ್ನಕರ್ ರಕ್ತದಾನ ಗೀತೆ ಹಾಡಿದರು. 

ಸಂಘಟಕ ಪ್ರಮುಖ ಮತ್ತು ರಕ್ತದಾನಿ ವಿಲಾಸ ನಾಯಕ (ಪುಟ್ಟು) ಸರ್ವರನ್ನೂ ಸ್ವಾಗತಿಸಿ, 'ಅಂದು ಸ್ವಾತಂತ್ರ್ಯಕ್ಕಾಗಿ ಹಿರಿಯರ ತ್ಯಾಗ-ಬಲಿದಾನ; ಇಂದು ದೇಶ ಸೇವೆಯಲ್ಲಿ ಮಡಿದ ವೀರ ಯೋಧರ ನೆನಪಿ ಗಾಗಿ ಕಿರಿಯರಿಂದ ರಕ್ತದಾನ' ಎನ್ನುವ ಘೋಷ ವಾಖ್ಯದೊಂದಿಗೆ ವಿಶೇಷ ಶಿಬಿರ ಆಯೋಜಿಸಿದ್ದು, ಅಂಕೋಲಾದಲ್ಲಿ ಬ್ಲಡ್ ಬ್ಯಾಂಕ್ ಆರಂಭಕ್ಕೆ ಒತ್ತಾಯಿಸಿ ಆರಂಭಿಸಿರುವ ಸಹಿ ಸಂಗ್ರಹಕ್ಕೂ ತಾಲೂಕಿನ ಎಲ್ಲಾ ಸ್ತರದ ಹಿರಿ-ಕಿರಿಯ ಹೃದಯವಂತ ಬಂಧುಗಳು ಸಹಕಾರ ನೀಡಿದ್ದಾರೆ ಎಂದರು. 

ರಕ್ತದಾನ ಮಾಡಲು 120ಕ್ಕೂ ಹೆಚ್ಚು ಜನ ಖುಷಿಯಿಂದ ಹೆಸರು ನೊಂದಾಯಿಸಿಕೊಂಡಿದ್ದರಾದರೂ ಹೆಚ್ಚಿನ ರಕ್ತ ಸಂಗ್ರಹಿಸಿ ತದನಂತರ ಉಪಯೋಗವಾಗದಿದ್ದರೆ ಎನ್ನುವ ಮುಂದಾಲೋಚನೆಯಿಂದ  ಇಲಾ ಖೆಯ ಕೋರಿಕೆಯಂತೆ 41 ಯುನಿಟ್ ರಕ್ತವನ್ನು ಜಿಲ್ಲಾ ಬ್ಲಡ್ ಬ್ಯಾಂಕ್ ಮೇಲ್ವಿಚಾರಕಿ ಡಾ.ರೀಜ್ವಾನ ಮತ್ತು ಸಿಬ್ಬಂದಿಗಳು ಸಂಗ್ರಹಿಸಿದರು. ತಾಲೂಕಾ ಆಡಳಿತಾಧಿಕಾರಿ ಡಾ. ಮಹೇಂದ್ರ ನಾಯಕ, ಸಿಬ್ಬಂದಿ ಗಳಾದ ಮಂಜು ಪಟಗಾರ, ಆದರ್ಶ ನಾಯಕ ಸಹಕರಿಸಿದರು.  

ವಿವಿಧ ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ಇಲಾಖೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರ ಪ್ರಮು ಖರು ಸೇರಿದಂತೆ ತಾಲೂಕಿನ ಎಲ್ಲಾ ಸ್ತರದ ಜನರು ಸಾವಿರ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರ ಯಶ ಸ್ವಿಗೊಳಿಸಿದಕ್ಕೆ ಚಿನ್ನದಗರಿ ಯುವಕ ಸಂಘದ ಅಧ್ಯಕ್ಷ ಕಾತರ್ಿಕ ನಾಯ್ಕ, ಸದಸ್ಯರಾದ ಮಾದೇವ ಗೌಡ, ಸಂದೇಶ ನಾಯ್ಕ, ಆನಂದು ನಾಯ್ಕ ಮತ್ತು ಗೆಳೆಯರು ಕೃತಜ್ಞತೆ ಸಲ್ಲಿಸಿದರು. 

ಹಿರಿಯರಾದ ಕಾಳಪ್ಪ ಮಾಸ್ತರ, ಶಾಂತರಾಮ ನಾಯಕ ಹಿಚ್ಕಡ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಲಾದ, ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ವಕೀಲರಾದ ಬಿ.ಡಿ.ನಾಯ್ಕ, ಉದ್ಯಮಿ ಮಂಗಲದಾಸ ಕಾಮತ್, ಡಾ.ಸಂಜು, ಪಿ.ಎಸ್.ಐ. ಶ್ರೀಧರ, ಪುರಸಭೆ ಸದಸ್ಯ ಪ್ರಕಾಶ ಗೌಡ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಡಿ. ನಾಯ್ಕ, ಹೂವಾ ಖಂಡೇಕರ್ ಸಣ್ಣಕೂಸ ಗೌಡ, ಜೇ.ಪ್ರೇಮಾನಂದ  ಸೇರಿ ದಂತೆ ಹಲವರು ಉಪಸ್ಥಿತರಿದ್ದರು.