ಬಳ್ಳಾರಿ; ವಿದ್ಯಾರ್ಥಿಗಳ ಭವಿಷ್ಯದ ಹಿನ್ನಲೆ ಐ.ಟಿ ಕಂಪನಿಯೊಂದಿಗೆ ಮಹಾವಿದ್ಯಾಲ ಒಡಂಬಡಿಕೆ

ಲೋಕದರ್ಶನ ವರದಿ

ಬಳ್ಳಾರಿ 01: ನಗರದ ಪ್ರತಿಷ್ಠಿತ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯವು ಬೆಂಗಳೂರಿನ ಹೆಸರಾಂತ ಐಟಿ ಕಂಪನಿಗಳಾದ ಮೆಡಿನಿ, ಎಜ್ಯುಕೇಶನ್ ಪ್ರೈವೇಟ್ ಲಿಮಿಟೆಡ್,  ಎಂಬೆಡೆಡ್ ಐ.ಟಿ ಕಂಪನಿಗಳೊಂದಿಗೆ ಒಡಂಬಡಿಕೆೆ ಮಾಡಿಕೊಳ್ಳಲಾಯಿತಿ. 

ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿ  ಮಾತನಾಡಿದ ಕಾಲೇಜಿನ ಅಧ್ಯಕ್ಷರಾದ ಜೆ.ಎಸ್.ಬಸವರಾಜ್, ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಎಲ್ಲಾ ತಾಂತ್ರಿಕ ವಿದ್ಯಾಥರ್ಿಗಳ ಭವಿಷ್ಯದ ದೃಷ್ಟಿಯಿಂದ ಇಂತಹ ಹಲವಾರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 

ಈ ಕಂಪನಿಗಳು ಮುಂದಿನ ದಿನಗಳಲ್ಲಿ ವಿದ್ಯಾಥರ್ಿಗಳ ತಾಂತ್ರಿಕ ನೈಪುಣ್ಯತೆ ಹೆಚ್ಚಿಸುವಲ್ಲಿ, ಹೊಸ ತಂತ್ರಜ್ಙಾನದ ಅಭಿವೃದ್ಧಿಯ ಬಗ್ಗೆ ನಿರಂತರ ಮಾರ್ಗದರ್ಶನ ನೀಡುತ್ತಾ, ಓದುವಾಗಲೇ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಳ್ಳಲು ನೆರವಾಗುತ್ತದೆ. ಈಗಾಗಲೇ  ಬಹುಪಾಲು ವಿದ್ಯಾರ್ಥಿಗಳು ಕಂಪನಿಗಳ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಪ್ರತಿಷ್ಠಿತ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಎಲ್ಲಾ ವಿದ್ಯಾರ್ಥಿಗಳ  ಭವಿಷ್ಯವನ್ನು ರೂಪಿಸುವ ಯೋಜನೆಯಿದೆ ಎಂದು ತಿಳಿಸಿದರು. 

ಈ ವೇಳೆ ಮೆಡಿನಿ ಕಂಪನಿಯ ಮುಖ್ಯಸ್ಥರಾದ ಪ್ರದೀಪ್ ಕಲ್ಲೂರ್ ಮಾತನಾಡಿ, ನಮ್ಮ ಕಂಪನಿಯು ಇಂತಹ ಹೆಸರಾಂತ ಎಂಜಿನಿಯರಿಂಗ್ ಕಾಲೇಜಿನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಅತ್ಯಂತ ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಙಾನದ ವ್ಯಾಪಕ ಅಭಿವೃದ್ಧಿಯಿಂದ,  ದೇಶಾದ್ಯಂತ ಲಕ್ಷಾಂತರ ಐಟಿ ಉದ್ಯೋಗಗಳು ಸೃಷ್ಟಿಯಾಗಲಿದ್ದು, ವಿದ್ಯಾರ್ಥಿಗಳು ಉದ್ಯೋಗಗಳಿಗೆ ಆಯ್ಕೆಯಾಗಲು ನಮ್ಮ ಕಂಪನಿಯು ಸದಾಕಾಲ ಶ್ರಮಿಸಲಿದೆ ಎಂದು ತಿಳಿಸಿದರು. 

  ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಹನುಮಂತರೆಡ್ಡಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ಎಲ್ಲಾ ವಿದ್ಯಾಥರ್ಿಗಳ ಜೀವನ ರೂಪಿಸುವ ಹೊಣೆ ನಮ್ಮ ಮೇಲಿದ್ದು, ಇದಕ್ಕಾಗಿ ನಿರಂತರವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದೆ. ಈ ದಿನ ಈ ಕಂಪನಿಗಳ ಜೊತೆಗಿನ ಒಡಂಬಡಿಕೆ,  ವಿದ್ಯಾರ್ಥಿಗಳ  ಮುಂದಿನ ಜೀವನಕ್ಕೆ ಅತ್ಯಂತ ಸಹಕಾರಿಯಾಗಲಿದೆ ಎಂದು ತಿಳಿಸಿದರು. 

ಕಾರ್ಯಕ್ರಮದ ಸಂಯೋಜಕರಾದ ಡಾ.ವೀರಗಂಗಾಧರ ಸ್ವಾಮಿ ಹಾಗೂ ತೇಜಸ್ವಿ ಕಟ್ಟಿಮನಿ ಒಡಂಬಡಿಕೆಯ ಮಾಹಿತಿಯನ್ನು ತಿಳಿಸಿದರು. ಕಂಪನಿಗಳ ಮುಖ್ಯಸ್ಥರಾದ ಪಾಂಡುರಂಗ, ಶ್ರೀವತ್ಸ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಕೋರಿ ನಾಗರಾಜ್, ಡಾ.ಶಿವಕುಮಾರ್ ಮೋದಿ, ಡಾ.ಎಸ್.ಬಿ.ಶಿವಕುಮಾರ್, ಡಾ.ನೇತ್ರಾವತಿ, ಡಾ.ಗಿರೀಶ್, ಗುರುರಾಜ್.ಕೆ.ಕೆ, ಶ್ರೀಶೈಲ, ಜೋಶಿ, ಜಗದೀಶ.ಜಿ.ಎಂ ಉಪಸ್ಥಿತರಿದ್ದರು.