ಲೋಕದರ್ಶನ ವರದಿ
ಬಳ್ಳಾರಿ 19: ಹಂಪಿಯ ಬಳಿ ಇರುವ ಆನೆಗುಂದಿಯ ನವ ಬೃಂದಾವನ ಗಡ್ಡೆಯಲ್ಲಿ ಶ್ರೀ ವ್ಯಾಸರಾಜ ತೀರ್ಥರ ಮೂಲ ಬೃಂದಾವನ ಪುನರ್ ನಿರ್ಮಾಣ ಕಾರ್ಯ ತಡರಾತ್ರಿಯಿಂದಲೇ ಆರಂಭವಾಗಿದೆ.
ನವ ಬೃಂದಾವನದ ಗಡ್ಡೆಯಲ್ಲಿದ್ದ ವ್ಯಾಸರಾಜ ತೀರ್ಥರ ಬೃಂದಾವನ ಅದೇ ಸ್ಥಳದಲ್ಲಿಯೇ ಮರು ನಿರ್ಮಾಣ ಕಾರ್ಯವಾಗಿದೆ. ವ್ಯಾಸರಾಜ ಮಠ. ರಾಯರ ಮಠ, ಉತ್ತರಾಧಿ ಮಠ, ವಾದಿರಾಜರ ಮಠ, ಮಾದವ ತೀರ್ಥ ಮಠ ಸ್ವಾಮಿಜೀಗಳ ನೇತೃತ್ವದಲ್ಲಿ ವ್ಯಾಸರಾಜ ತೀರ್ಥರ ಬೃಂದಾವನ ಮರು ನಿರ್ಮಾಣವಾಗಿದೆ.
ಈ ಹಿಂದೆ ಇದ್ದ ಮಾದರಿಯಲ್ಲಿಯೇ ನಿರ್ಮಾಣ ಮಾಡಿದ್ದು ತಜ್ಞ ಶಿಲ್ಪಿಗಳು ಅವಶೇಷಗಳನ್ನು ಸಂಗ್ರಹಿಸಿದ್ದಾರೆ. ಮರು ನಿರ್ಮಾಣಕ್ಕೆ ಬಳಕೆಗೆ ಬರಬಹುದಾದ ಕಲ್ಲುಗಳನ್ನು ಬಳಸಿದ್ದಾರೆ. ಉಳಿದಿರುವುದನ್ನು ಹೊಸದಾಗಿ ಕೆತ್ತನೆ ಮಾಡಬೇಕಾ.. ಅಥವಾ ಇರುವುದರಲ್ಲಿಯೇ ಬಳಸಿಕೊಂಡು ಮರು ಜೋಡಣೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದರು. ಸದ್ಯ ನಡುಗಡ್ಡೆಯಲ್ಲಿ ಮೂಲಕ ಬೃಂದಾವನ ಸ್ಥಳದಲ್ಲಿಯೇ ಪಾಣಿಪೀಠವನ್ನು ಸಿದ್ದಪಡಿಸಿಲಾಗಿದೆ. ಬೃಂದಾವನದ ಮೆಲ್ಭಾಗವನ್ನು ಪೂರ್ಣಗೊಳಿಸಿ ಬೃಂದಾವನ ಮರು ನಿರ್ಮಾಣದ ಬಳಿಕವೇ ಪುನರ್ ಪ್ರತಿಷ್ಟಾಪನೆ ಕಾರ್ಯ ಸೇರಿದಂತೆ ಇತರ ದಾರ್ಮಿಕ ಕಾರ್ಯಕ್ರಮಗಳು ನಡೆದಿವೆ ಎಂದು ಮಠದ ಮೂಲಗಳು ತಿಳಿಸಿವೆ.
ನಡುಗಡ್ಡೆಗೆ ಗುರುವಾರ ರಾತ್ರಿಪೇಜಾವರ ಮಠದ ಶ್ರೀಗಳು, ಶ್ರೀಪಾದ ರಾಜರಮಠದ ಶ್ರೀಗಳು, ಸೇರಿದಂತೆ ನಾನಾ ಮಠದ ಪೀಠಾದಿಪತಿಗಳು ಆಗಮಿಸಿದ್ದು. ನಡೆದ ಎಲ್ಲಾ ಗಟನೆಯನ್ನು ನೋಡಿ ಪುನರ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ನಿರ್ಮಾಣಕ್ಕೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ನಾನಾ ಕಡೆಗಳಿಂದ ಭಕ್ತರು ಆಗಮಸುತ್ತಿದ್ದಾರೆ. ಸ್ಥಳದಲ್ಲಿ ಸೂಕ್ತ ಪೋಲಿಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ.