ಬಸವರಾಜ ವೈ.ಎನ್ ಅವರಿಗೆ ಪಿಎಚ್‌ಡಿ ಪದವಿ

Basavaraja YN receives PhD degree

ಬಸವರಾಜ ವೈ.ಎನ್ ಅವರಿಗೆ ಪಿಎಚ್‌ಡಿ ಪದವಿ 

ಬಳ್ಳಾರಿ 09: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ  ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ ಬಸವರಾಜ ವೈ.ಎನ್ ಅವರಿಗೆ ಪಿಎಚ್‌ಡಿ ಪದವಿ ಲಭಿಸಿದೆ. ವಿವಿಯ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ವೀಣಾ.ಎಂ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದ ವ್ಯವಹಾರ ಅಧ್ಯಯನ ನಿಕಾಯದಡಿ ಕ್ವಾಲಿಟಿ ಆಫ್ ಫೈನಾನ್ಸಿಯಲ್ ರಿಪೋರ್ಟಿಂಗ್ ಬಿಫೋರ್ ಅಂಡ್ ಆಪ್ಟರ್ ಅಡಾಪ್ಷನ್ ಆಫ್ ಇನ್ಡ್‌ ಎ ಎಸ್‌-ಎ ಸ್ಟಡಿ ಆನ್ ಸೆಲೆಕ್ಟ್‌ ಐರನ್ ಅಂಡ್ ಸ್ಟೀಲ್ ಕಂಪನಿಸ್ ಆಫ್ ಇಂಡಿಯಾ  ಎಂಬ ಪ್ರೌಢ ಪ್ರಬಂಧ ಮಂಡಿಸಿದ್ದಕ್ಕೆ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.