ಬಸವನಬಾಗೇವಾಡಿ : ಸ್ಫರ್ಧಾಳುಗಳಲ್ಲಿ ಹುಮ್ಮಸ್ಸು: ಮಲ್ಲಿಕಾರ್ಜುನ ದೇವರಮನಿ

ಲೋಕದರ್ಶನ ವರದಿ

ಬಸವನಬಾಗೇವಾಡಿ 14: ಪುರಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಸ್ಫರ್ಧಾಳುಗಳಲ್ಲಿ  ಹಮ್ಮಸ್ಸು ಇಮ್ಮಡಿಗೊಂಡಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳ ಮುಖಂಡರು ಅಳೆದು ತೂಗಿ ಸೂಕ್ತ ಅಭ್ಯರ್ಥಿ  ಆಯ್ಕೆ ಕಸರತ್ತಿನಲ್ಲಿ ತಲ್ಲೀನವಾಗಿವೆ. ಏತನ್ಮಧ್ಯೆ ಕೆಲವು ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಫರ್ಧೆಗಿಳಿಯಲು  ಇನ್ನಿಲ್ಲದ ತಾಲೀಮು ನಡೆಸಿದ್ದಾರೆ. 

ಆಕಾಂಕ್ಷಿಗಳು ಬಿ ರಂ ತಮಗೆ ನೀಡಬೇಕೆಂದು ತಮ್ಮ ಪಕ್ಷದ ಮುಖಂಡರು ಹಾಗೂ ಪ್ರಭಾವಿಗಳಿಗೆ ದುಂಬಾಲು ಬಿದ್ದಿದ್ದಾರೆ. ಆಯಾ ವಾಡರ್್ಗಳ ಬಹುಸಂಖ್ಯಾತ ಸಮುದಾಯ ಜತೆಗೆ ನಿರ್ಣಾಯಕ  ಸಮುದಾಯಗಳ ಮತಗಳ ಓಲೈಕೆಯಲ್ಲಿ ಬಹುತೇಕ ಸ್ಪಧರ್ಾಳುಗಳು ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಈ ಹಿಂದೆ ಗೆಲುವು ಸಾಧಿಸಿದ ಬಹುತೇಕ ಸದಸ್ಯರ ವಾಡರ್್ಗಳ ಮೀಸಲಾತಿ ಬದಲಾವಣೆಯಾಗಿದ್ದು, ಅನಿವಾರ್ಯವಾಗಿ ಬೇರೊಂದು ವಾಡರ್್ನಲ್ಲಿ ಠಿಕಾಣಿ ಹೂಡಿ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ. 

ಪ.ಪಂಗಡದ ಸಮುದಾಯಕ್ಕೆ ಮೀಸಲಾದ 18ನೇ ವಾಡರ್್ ಸೇರಿ ಕೆಲವು ವಾರ್ಡಗಳಲ್ಲಿ  ಹೊರತುಪಡಿಸಿ ಬಹುತೇಕ ವಾಡರ್್ಗಳಲ್ಲಿ ಕಾಂಗ್ರೆಸ್, ಬಿಜೆಪಿ ಬಿ ರಂಗೆ ಕನಿಷ್ಠ ಮೂವರು ಲಾಬಿ ನಡೆಸಿದ್ದು ಪಕ್ಷದ ಮುಖಂಡರಿಗೆ ತಲೆ ನೋವಾಗಿದೆ. ವಾಡರ್್ ಜನತೆಯ ಅಭಿಪ್ರಾಯ ಕಲೆ ಹಾಕಿ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸಲು ಎಲ್ಲ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. 

ಮೂರೂ ಪಕ್ಷಗಳ ಸ್ಪರ್ಧೆ 

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಸವನಬಾಗೇವಾಡಿ ಪಟ್ಟಣದಲ್ಲಿ ಜೆಡಿಎಸ್ ಅಧಿಕ ಮತಗಳನ್ನು ಪಡೆದಿದ್ದರಿಂದ ಜೆಡಿಎಸ್ ಮುಖಂಡರು ಹಾಗೂಸ್ಪರ್ಧಾಳುಗಳಲ್ಲಿ  ಭರವಸೆ ಹೆಚ್ಚಾಗಿದೆ. ಈ ಬಾರಿ ಬಿಜೆಪಿ, ಕಾಂಗ್ರೆಸ್ ಜತೆಗೆ ಜೆಡಿಎಸ್ ಕೂಡ ಈ ಬಾರಿ ಪೈಪೋಟಿ ನಡೆಸುವ ಸಾಧ್ಯತೆ ಇದೆ.