ಬಿಜೆಪಿಯು ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸಿ ಗೆಲ್ಲಲಿದೆ

BJP will participate and win all the constituencies in the district

ಬಿಜೆಪಿಯು ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸಿ ಗೆಲ್ಲಲಿದೆ 

ಬಳ್ಳಾರಿ 29: ನಗರದಲ್ಲಿ   ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿರುವ ಅನಿಲ್ ಕುಮಾರ್ ಮೋಕಾ ನೇತೃತ್ವದಲ್ಲಿ ನಮ್ಮಲ್ಲಿ ಏನೇ ಸಣ್ಣ ಪುಟ್ಟ ವೈಮನಸ್ಸು ಇದ್ದರೂ ನಾವು ಸರಿ ಮಾಡ್ಕೊಳ್ತೇವೆ ಎಂದು ಗಂಗಾವತಿ ಶಾಸಕ ಜಿ.ಜನಾರ್ಧನರೆಡ್ಡಿ ಹೇಳಿದ್ದಾರೆ.ಅವರಿಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ. ಅನಿಲ್ ಕುಮಾರ್ ಮೋಕಾರವರು  ನಿಸ್ವಾರ್ಥ ಮನುಷ್ಯ. ಹೀಗಾಗಿ ಮತ್ತೊಮ್ಮೆ ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.  

ಮುಂದಿನ ದಿನಗಳಲ್ಲಿ ಬಿಜೆಪಿಯು ಬಳ್ಳಾರಿ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಸಂದರ್ಭದಲ್ಲಿ ನಾನು ಬೇರೆ ವಿಷಯ ಏನನ್ನೂ ಮಾತಾಡೊಲ್ಲ ಎಂದು ಹೇಳುತ್ತಲೇ. ಜೀವನದಲ್ಲಿ ಕಳೆದ 14 ವರ್ಷದಿಂದ ಅನೇಕ ಸವಾಲು ಎದುರಿಸಿದ್ದೇನೆ. ನಿನ್ನೆ ಹಲವು ಬಿಜೆಪಿ ಕಾರ್ಯಕರ್ತರು ಶ್ರೀರಾಮುಲು ಅವರು ಗ್ರಾಮಿಣ ಕ್ಷೇತ್ರ ಬಿಡಬಾರದು ಅಂತಾ ಹೇಳಿ  ಸುದ್ದಿ ಗೋಷ್ಟಿ ಮಾಡಿದರು.ಶ್ರೀರಾಮುಲು ಬೇಕು ಅಂತಾ ಪ್ರೀತಿಯಿಂದ , ಗೌರವದಿಂದ ಕ್ಷೇತ್ರ ಬಿಡಬಾರದು ಅಂತಾ ಮನವಿ ಮಾಡಿದ್ರು. ಆದ್ರೇ ಅದನ್ನು ಕೆಲವರು ಬೇರೆ ರೀತಿ ಯೋಚನೆ ಮಾಡ್ತಾರೆಂದರು.  

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಮಲಿಂಗಪ್ಪ, ಮಹಿಪಾಲ, ದಿವಾಕರ, ದರ​‍್ಪ ನಾಯಕ ಸಿರುಗುಪ್ಪ, ಮಾಜಿ ಶಾಸಕರಾದ ಸೋಮಲಿಂಗಪ್ಪ, ಮಹಾನಗರ ಪಾಲಿಕೆ 22ನೇ ವಾರ್ಡಿನ ಸದಸ್ಯರಾದ ಹನುಮಂತಪ್ಪ, ಉಮೇಶ್, ಕಪ್ಪಗಲ್  ತಿಮ್ಮಪ್ಪ, ಶ್ಯಾಮ  ಸುಂದರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ವಕೀಲರು  ವೈ ಅರುಣಾಚಲಂ, ಎಸ್ಸಿ ಮೋರ್ಚಾ ನಗರಧ್ಯಕ್ಷರು  ಷಣ್ಮುಖ ಮಹಾನಂದಿ ಕೊಟ್ಟಂ, ಯರಗುಡಿ ಶಂಕರ್, ಕಪ್ಪಗಲ್ ಹುಲುಗಪ್ಪ  ರಾಜಶೇಖರ್, ಇನ್ನು ಮುಂತಾದ ಬಿಜೆಪಿ ಮುಖಂಡರು ಕಾರ್ಯಕರ್ತರು ಸದಸ್ಯರು ಇತರರು ಆಗಮಿಸಿದ್ದರು.