ಆನಗೋಡಿ: ಬರಗಾಲದ ಬಿಸಿಯೂಟ

ಯಲ್ಲಾಪೂರ 16: ಬೇಸಿಗೆಯ ರಜೆಯು ಮಕ್ಕಳಿಗೆ ಕೇವಲ ಮೋಜಿನ ಚಟುವಟಿಕೆಯಲ್ಲಿ ವ್ಯರ್ಥವಾಗಿ ಹೋಗದೇ, ಸೃಜನಶೀಲ ವ್ಯಕ್ತಿತ್ವದ ಹೊಸ ತಿಳುವಳಿಕೆಗಳ ಕ್ಷಣಗಳಾಗಿ ಬಳಕೆ ಆಗಬೇಕು. ರಜೆಯ ವಿಶೇಷ ತರಗತಿಗಳು ಪಠ್ಯದಿಂದ ಹೊರತಾಗಿದ್ದು ಆದರೆ ಪಠ್ಯಕ್ಕೆ ಪೂರಕವಾಗಿ ನಡೆದರೆ ವಿದ್ಯಾಥರ್ಿಗಳ ಭವಿಷ್ಯಕ್ಕೆ ಉಪಯುಕ್ತವಾಗಬಲ್ಲದು. ವಿಶೇಷ ತರಗತಿಗಳ ಮೂಲಕ ಮಾದರಿಯಾಗಿ ಬೇಸಿಗೆಯ ಬಿಡುವನ್ನು ಸದುಪಯೋಗಪಡಿಸಿಕೊಂಡರೆ ಮುಂದಿನ ತರಗತಿಯ ಪ್ರವೇಶಕ್ಕೆ ಬೌದ್ದಿಕವಾಗಿ ಉತ್ತಮ ಜ್ಞಾನ ಪಡೆದುಕೊಳ್ಳಲು ಸಾಧ್ಯವಿದೆ. ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಯಾದ ಜಿ ಎಸ್ ಭಟ್ಟ ಅಭಿಪ್ರಾಯಪಟದಟರು. 

ಅವರು ತಾಲೂಕಿನ ಆನಗೋಡಿನ ಸಹಿಪ್ರಾ ಶಾಲೆಯಲ್ಲಿ ಬೇಸಿಗೆಯ ರಜೆಯ ಬರಗಾಲದ ಬಿಸಿಯೂಟ ಮತ್ತು ರಜಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ಶಿಕ್ಷಣಾಧಿಕಾರಿ ಎನ್ ಆರ್  ಹೆಗಡೆ ಮಾತನಾಡಿ ಬೇಸಿಗೆಯ ರಜೆಯ ಸದುಪಯೋಗಕ್ಕೆ ಬರಗಾಲದ ಬಿಸಿಯೂಟ ನೆರವಾಗುತ್ತಿದ್ದು  ಹೆಚ್ಚಿನ ಮಕ್ಕಳು ಇದರ ಪ್ರಯೋಜನ ಪಡೆಯಬೇಕಿದೆ. ಇಂತಹ ಮಾದರಿಯ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಕೆಯ ಎಲ್ಲಾ ಸಹಾಯ ಸಹಕಾರವಿದೆ ಎಂದರು.

ಅತಿಥಿಗಳಾಗಿ ತಾಲೂಕಾ ಬಿಸಿಯೂಟ ನೋಡೆಲ್ ಅಧಿಕಾರಿ ಶ್ರೀರಾಮ ಹೆಗಡೆ, ಬಿ ಆರ್ ಸಿ ಸಂತೋಷ ನಾಯ್ಕ, ಸಿ ಆರ್ ಪಿ ವಿಶಾಲ ನಾಯ್ಕ, ಮಧುರಾ ಆಚಾರಿ ಉಪಸ್ಥಿತರಿದ್ದರು. ಶಿಕ್ಷಕ ಹಾಗೂ ರಜಾ ಶಿಬಿರದ ಸಂಯೋಜಕ ಸುಧಾಕರ ನಾಯ್ಕ ಸ್ವಾಗತಿಸಿ ಶಿಬಿರದ ಬಗೆಗೆ ಪ್ರಾಸ್ತಾವಿಕ ಮಾತುಗಳ್ಳನ್ನಾಡಿದರು. ಸಂಪನ್ಮೂಲ ವ್ಯಕ್ತಿ ಸೌಮ್ಯಾ ಭಟ್ಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬೇಸಿಗೆಯ ಬರಗಾಲದ ಬಿಸಿಯೂಟ ಯೋಜನೆಯಲ್ಲಿ ವಿಶೇಷ ರಜಾ ಚಟುವಟಿಕೆಗಳ ಭಾಗವಾಗಿ ಕನ್ನಡ,ಹಿಂದಿ,ಇಂಗ್ಲೀಷ ಭಾಷಾ ಅಧ್ಯಯನದ ಚಟುವಟಿಕೆಗಳು ವಿಶೇಷ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಜರುಗಿದವು.