ಅಂಕೋಲಾದಲ್ಲಿ ಹೆಚ್ಚುವರಿ ನ್ಯಾಯಾಲಯ ಉದ್ಘಾಟನೆ


ಲೋಕದರ್ಶನ ವರದಿ   

ಅಂಕೋಲಾ: ಅಂಕೋಲಾ ವಕೀಲರ ಬಾರ್ ಅಸೋಸಿಯೇಶನ್ ರಾಜ್ಯದಲ್ಲಿಯೇ ಸ್ನೇಹಮಯ ವಾತಾವ ರಣಕ್ಕೆ ಮಾದರಿಯಾಗಿದೆ. ಬಾರ್ ಚಿಕ್ಕದಾಗಿದ್ದರೂ ಇಲ್ಲಿ ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸುವ ವಕೀಲರಿರುವುದರಿಂದ, ನಮಗೆ ತೀಪರ್ು ನೀಡಲಿಕ್ಕೆ ಸಂದಿಗ್ದತೆಯಾಗದಂತೆ ಉತ್ತಮ ಅನುಭವ ದೊರೆತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುಹೇಲ್ ಅಹಮ್ಮದ ಎಸ್. ಕುನ್ನಿಭಾವಿ ಹೇಳಿದರು. 

ಸೋಮವಾರ ಜೆ.ಎಂ.ಎಫ್.ಸಿ. ನ್ಯಾಯಾಲಯ ಸಂಕಿರ್ಣದಲ್ಲಿ ಹೆಚ್ಚುವರಿ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಹಿಂದೆ ಅಂಕೋಲಾದಲ್ಲಿ ಎರಡು ನ್ಯಾಯಾಲಯಗಳಿದ್ದವು. ಈ ಮೂಲಕ ಮೂರನೇ ನ್ಯಾಯಾಲಯ ಉದ್ಘಾಟಿಸಲು ಖುಷಿ ಎನ್ನಿಸುತ್ತದೆ. ತಮ್ಮ ಬಾರ್ ಅಸೋಸಿಯೇಶನ್ ಕೊಠಡಿ ಯನ್ನು ನ್ಯಾಯಾಲಯದ ಕಾರ್ಯ ಕಲಾಪ ನಡೆಸಲು ತೆರುವು ಮಾಡಿಕೊಟ್ಟ ವಕೀಲರ ಸಂಘದ ಸದಸ್ಯ ರಿಗೆ ಅನುಕೂಲವಾಗುವಂತೆ ಈ ಲೈಬ್ರರಿ, ನೂತನ ಕಟ್ಟಡ ಮತ್ತಿತರ ಸೌಲಭ್ಯ ಒದಗಿಸಲು ಇಚ್ಚಿಸಿದ್ದು, ಎಲ್ಲರ ಸಹಕಾರದಲ್ಲಿ ಶೀಘ್ರವೇ ಮಾಡಿ ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು ನೂತನ ನ್ಯಾಯಾ ಧೀಶರಿಗೆ ಸಹಕಾರ ನೀಡುವಂತೆ ವಕೀಲರು ಮತ್ತು ಸಿಬ್ಬಂದಿಗಳಿಗೆ ಸಲಹೆ ನೀಡಿದರು. 

ನೂತನ ನ್ಯಾಯಾಧೀಶ ಜೆ.ರಂಗಸ್ವಾಮಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಾಜು ಶೆಡಬಾಳಕರ್, ಕುಮಟಾ ನ್ಯಾಯಾಲಯದ ನ್ಯಾಯಾಧೀಶ ವಿಘ್ನೇಶಕುಮಾರ, ವಕೀಲರ ಸಂಘದ ಅಧ್ಯಕ್ಷ ಗಜಾನನ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು, ಮಾತನಾಡಿದರು. ವಕೀಲರ ಪರವಾಗಿ ನ್ಯಾಯವಾದಿ ಉಮೇಶ ಎನ್. ನಾಯ್ಕ ಮಾತನಾಡಿ ಹಿರಿಯ ನ್ಯಾಯಾಧೀಶರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.  ವಕೀಲರ ಸಂಘದ ಉಪಾಧ್ಯಕ್ಷೆ ಸಂಪದಾ ಗುನಗಾ ಸ್ವಾಗತಿಸಿದರು. ಕಾರ್ಯದಶರ್ಿ ಸುರೇಶ ಬಾನವಳಿಕರ ನಿರೂಪಿಸಿದರು. ಖಜಾಂಚಿ ಪ್ರತಿಭಾ ನಾಯ್ಕ ವಂದಿಸಿದರು. ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.