ಜಾನಪದ ಶೈಲಿಯನ್ನು ಉಳಿಸುವುದು ನಮ್ಮೇಲ್ಲರ ಹೊಣೆಯಾಗಿದೆ: ಬೆಳ್ಳಕಿ

ಧಾರವಾಡ 09: ಹೊಸ ಪೀಳಿಗೆ ಮೂಲ ಜಾನಪದ ಕಲಾ ಪ್ರಕಾರಗಳನ್ನು ಮರೆತು, ತಿರುಚಿ ತಾವು ಮಾಡಿದ್ದೇ ಜಾನಪದ ಕಲಾಪ್ರಕಾರ ಎಂದು ಬಿಂಬಿಸುತ್ತಿರುವುದು, ಮೂಲ ಜಾನಪದಕ್ಕೆ ಅಪಾಯ ತಂದಿಡುವಂಥ ಸಂಗತಿಯಾಗಿದೆ, ಮೂಲ ಜಾನಪದ ಯಾವುದೇ ಕಲಾಪ್ರಕಾರದಲ್ಲಿ ಹಾಡುಗಳನ್ನು ಹಾಡದೇ, ತಾವೇ ಸೃಷ್ಟಿಸಿದ ವಿಚಿತ್ರ ಬಗೆಯ ಹಾಡುಗಳನ್ನು ಹಾಡಿ ತಾವೇ ಜಾನಪದ ವಿದ್ವಾಂಸರು ಎಂದು ಕೆಲವರು ಪ್ರಚಾರ ಪಡಿಯುತ್ತಿರುವುದು ದುರದೃಷ್ಟಕರ ಎಂದು ಆಕಾಶವಾಣಿ ಧಾರವಾಡ ಕೇಂದ್ರದ ನಿವೃತ್ತ ನಿಲಯ ನಿದರ್ೇಶಕರಾದ ಸಿ.ಯು. ಬೆಳ್ಳಕ್ಕಿ ಹೇಳಿದರು.           

        ಅವರು ಕನರ್ಾಟಕ ವಿದ್ಯಾವರ್ಧಕ ಸಂಘವು ಡಾ. ದೇವೇಂದ್ರಕುಮಾರ ಹಕಾರಿ ದತ್ತಿ ಅಂಗವಾಗಿ ಆಯೋಜಿಸಿದ್ದ `ಆಕಾಶವಾಣಿ ಮತ್ತು ಜಾನಪದ' ವಿಷಯ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. 

ಉತ್ತರ ಕನರ್ಾಟಕ ಜಾನಪದ ಕಲೆಗಳ ತವರೂರಾಗಿದ್ದು, ಎಲ್ಲಪ್ರಕಾರಗಳ ಜಾನಪದ ಕಲಾವಿದರು ಇಲ್ಲಿ ಆಗಿ ಹೋಗಿದ್ದಾರೆ ಎಂಬುದು ಹೆಮ್ಮೆಯ ಸಂಗತಿ, ವಿನಾಶದ ಅಂಚಿನಲ್ಲಿರುವ ಮೂಲ ಜಾನಪದ ಕಲೆಗಳ ಸಂರಕ್ಷಣೆಗಾಗಿ ಆಕಾಶವಾಣಿ ಧಾರವಾಡ ಕೇಂದ್ರವು ಹಗಲಿರುಳು ಶ್ರಮಿಸಿ, ಸಾಧ್ಯವಿದ್ದಷ್ಟು ಕಲಾ ಪ್ರಕಾರಗಳನ್ನು ಸಂರಕ್ಷಿಸಿದೆ.

   ಈ ಬಗ್ಗೆ ಧಾರವಾಡ ಆಕಾಶವಾಣಿ ಕೇಂದ್ರದ ದಾಸ್ತಾನಿನಲ್ಲಿ ಈಗಲೂ ದಾಖಲೆಗಳು ಲಭ್ಯ ಇರುತ್ತವೆ, ಆಕಾಶವಾಣಿ ಕೇಂದ್ರಗಳಲ್ಲಿ ಜಾನಪದ ವಿಭಾಗ ಇರುವುದು ಕೇವಲ ಕೈಬೆರಳಣಿಕೆಯಷ್ಟು ಕೇಂದ್ರಗಳಲ್ಲಿ ಮಾತ್ರ, ಉತ್ತರ ಕನರ್ಾಟಕದಲ್ಲಿ ಜಾನಪದದ ಗಟ್ಟಿ ಬೇರುಗಳು ಮತ್ತು ಪ್ರಸಿದ್ಧ ಕಲಾವಿದರು ಇದ್ದುದರಿಂದ, ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಜಾನಪದ ವಿಭಾಗ ಕಾರ್ಯ ಮಾಡುತ್ತಿದೆ, ಆ ಮೂಲಕ ಆಕಾಶವಾಣಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಕಾರ್ಯನಿರ್ವಹಿಸಿದೆ ಎಂದು ಅವರು ಹೇಳಿದರು.  

      ನಶಿಸಿ ಹೋಗುತ್ತಿರುವ `ಬಸವಂತ, ಬಲವಂತ' ಗೀಗೀ, ಚೌಡಕಿ ಪದ ಹೀಗೆ ಮುಂತಾದ ಪ್ರಕಾರಗಳನ್ನು ಉಳಿಸುವ ಕೆಲಸವನ್ನು ಆಕಾಶವಾಣಿ ಮಾಡಿದೆ, ಈಗಲೂ ಸಹ ಮಾಡುತ್ತಿದೆ. 

   ಆದರೆ ಕೆಲ ಜನಪದ ಪ್ರಕಾರದ ಕಲಾವಿದರು ಈಗ ಇಲ್ಲದಿರುವುದು ಬೇಸರ ಮತ್ತು ಅದು  ಮರೆಯಾಗುತ್ತಿದೆ. ಆದರೆ ಹಾಡುಗಳ ಧ್ವನಿಯಿಂದ ಇಂಥ ಪ್ರಕಾರ ಇತ್ತು ಎಂದು ಹೇಳುವ ಪರಿಸ್ಥಿತಿ ಬಂದಿದೆ.  ನಮ್ಮ ಉತ್ತರ ಕನರ್ಾಟಕ ಜಾನಪದವು ತಾಳಬದ್ಧವಾಗಿದೆ, ಅದನ್ನು ಉಳಿಸಲು ಯಾರೂ ಮುಂದೆ ಬರುತ್ತಿಲ್ಲ. ವಿಶ್ವವಿದ್ಯಾಲಯ ಮತ್ತು ಅಕಾಡೆಮಿಗಳೂ ಸಹ ಮುಂದೆ ಬರದಿರುವುದು ಬೇಸರ ತಂದಿದೆ ಎಂದು ಅವರು ಹೇಳಿದರು.    

ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ) ಅಧ್ಯಕ್ಷತೆ ವಹಿಸಿದ್ದರು. ರವಿಶಂಕರ ಹಕಾರಿ, ಸತೀಶ ತುರಮರಿ  ಚೈತ್ರಾ ಮೋಹನ ಸೇರಿದಂತೆ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಶಿವಪುತ್ರ ಬೆಲ್ಲದ, ಕೃಷ್ಣ ಜೋಶಿ ಹಾಗೂ  ಡಾ. ಆನಂದ ಪಾಟೀಲ, ಕಸ್ತೂರಿದೇವಿ ಹಕಾರಿ, ಚಂದ್ರಿಕಾ ನಾಗಮ್ಮನವರ, ಮಧುಮತಿ ಸಣಕಲ್ಲ, ಪ್ರಭು ಹಂಚಿನಾಳ, ಮಾರ್ಕಂಡೇಯ ದೊಡಮನಿ, ಬಿ. ಕೆ. ಹೊಂಗಲ, ಬಿ. ಎಸ್. ಶಿರೋಳ, ಪ್ರೇಮಾನಂದ ಶಿಂಧೆ, ಚನಬಸಪ್ಪ ಅವರಾದಿ  ಮಂತಾದವರು  ಉಪಸ್ಥಿತರಿದ್ದರು. ಪ್ರಕಾಶ ಎಸ್. ಉಡಿಕೇರಿ ವಂದಿಸಿದರು, ಮಾತರ್ಾಂಡಪ್ಪ ಕತ್ತಿ ನಿರೂಪಿಸಿದರು.