'ಅಂತರ್ ಶಾಲಾ ಸಾಂಸ್ಕೃತಿಕ, ವಿಜ್ಞಾನ ಮೇಳ'

ಲೋಕದರ್ಶನ ವರದಿ

ಹುಲಕೋಟಿ 24:  ನನ್ನ ಜೀವನ ಅವಿಸ್ಮರಣಿಯ ದಿನಗಳಲ್ಲಿ ಇದು ಒಂದು ಎನ್ನುತ್ತಾ ಇಂದು ಶಿಕ್ಷಣ ಮಗುವಿನ ಹಕ್ಕಾಗಿದೆ, ಶಿಕ್ಷಣ ಮಗುವಿನಲ್ಲಿರುವ ಸುಪ್ತ ಚೇತನವನ್ನು ಜಾಗೃತಗೊಳಿಸುತ್ತದೆ. ಈ ಚೇತನ ತಂದೆ-ತಾಯಿಯಿಂದ ಮನೆಯಲ್ಲಿ, ಗುರುಗಳಿಂದ ಶಾಲೆಯಲ್ಲಿ ಸಿಗುತ್ತದೆ. ಮಕ್ಕಳಿಗೆ ವಿಜ್ಞಾನ ವಿದ್ಯೆಯ ಜೊತೆಗೆ ಬಾಂಧವ್ಯ ಬೇಕು. ಮನುಷ್ಯ ಹಕ್ಕಿಯಂತೆ ಹಾರುವುದನ್ನು ಕಲಿತ, ಮೀನಿನಂತೆ ಈಜುವುದನ್ನು ಕಲಿತ, ಆದರೆ ಮಾನವ ಮಾನವನಂತೆ ಬದುಕುವುದು ಕಲಿಯುವುದರ ಜೊತೆಗೆ ಹೆಚ್ಚು ಪುಸ್ತಕಗಳನ್ನು ಓದಿ, ಒಳ್ಳೆಯವರ ಗೆಳೆತನ ಮಾಡಿ, ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಸೂಡಿಯ ಸರಕಾರಿ ಪ್ರೌಢಶಾಲಾ ಶಿಕ್ಷಕರಾದ ಅಶೋಕ.ಆರ್.ಉಂಡಿ  ಅವರು ಹೇಳಿದರು. 

ಅವರು ಸ್ಥಳೀಯ ರಾಜೇಶ್ವರಿ ವಿದ್ಯಾನಿಕೇತನದಲ್ಲಿ ಜರುಗಿದ ಅಂತರ್ ಶಾಲಾ ಸಾಂಸ್ಕೃತಿಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನದ ಸಮಾರೋಪ  ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಲಕೋಟಿ ರೂರಲ್ ಇಂಜನೀಯರಿಂಗ್ ಏಜುಕೇಶನ್ ಸೊಸೈಟಿಯ ಕಾರ್ಯದಶರ್ಿಗಳಾದ ಸಚಿನ್. ಡಿ. ಪಾಟೀಲ್ ಅವರು "ನನ್ನ ಗುರು, ಶಿಕ್ಷಕ, ಮಾರ್ಗದರ್ಶಕ ಎಂದು ತಮ್ಮ ತಂದೆಯವರಾದ ಡಿ. ಆರ್.ಪಾಟೀಲ್ ಅವರನ್ನು ಸ್ಮರಿಸುತ್ತಾ, ಈ ಶಾಲೆಯು ಅವರ ಕನಸಿನ ಕೂಸು. ಇಂತಹ ಗ್ರಾಮಿಣ ಶಾಲೆಯಲ್ಲಿ ಓದಿದವರು ನಾವು ಇನ್ನೂ ಅನೇಕರು ಉನ್ನತ ಹುದ್ದೆಯಲ್ಲಿದ್ದೇವೆ. ಇಂದು ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಚಾಲಕ ರಹಿತ ವಾಹನಗಳನ್ನು ಹೊಂದಲಿದ್ದೇವೆ. ನಾವು ಏನನ್ನಾದರೂ ಒಳ್ಳೆಯದನ್ನು ಮಾಡುವ ಛಲ ಇರಬೇಕು. ಎಂದು ಹೇಳಿದರು.

ಕಾರ್ಯಕ್ರಮವು ಮೊದಲಿಗೆ ಕುಮಾರಿ ಸೃಷ್ಠಿ ಹಿರೇಮಠ ಹಾಗೂ ಸಂಗಡಿಗರ  ಪ್ರಾರ್ಥನೆ ಹಾಗೂ ಕುಮಾರ ಲಿಂಗರಾಜ ಹಿರೇಮಠ ಇವರ ಸ್ವಾಗತ ನಾಟ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ. ಕುಮಾರಿ ಶ್ರೀಯಾ ದೂಪದಹಳ್ಳಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರೆ, ಕುಮಾರಿ ದಿಶಾ ಪೂಜಾರ ಮುಖ್ಯ ಅತಿಥಿಗಳನ್ನು ಹಾಗೂ ಅಧ್ಯಕ್ಷರನ್ನು ಪರಿಚಯಿಸಿದರು. 'ಬಾಂಧವ್ಯ ಶೀಷರ್ಿಕೆಯ ಅಡಿಯಲ್ಲಿ ಜರುಗಿದ  ಜನಪದಗೀತೆ, ಭಕ್ತಿಗೀತೆ, ಭಾವಗೀತೆ ಹಾಗೂ ದೇಶಭಕ್ತಿಗೀತೆ, ಭರತನಾಟ್ಯ, ಏಕಪಾತ್ರಾಭಿನಯ ಸ್ಪಧರ್ೆಗಳು ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ  ವಿತರಿಸಲಾಯಿತು.

ವೇದಿಕೆಯ ಮೇಲೆ ಶಾಲಾ ಪ್ರಾಚಾ0ರ್ುರಾದ  ಬಿ.ಆರ್.ಮಂಗಳಾರವರು, ಶಾಲಾ ಆಡಳಿತಾಧಿಕಾರಿಗಳಾದ ಶಿವೈ.ಆರ್.ಶೆಟ್ಟಿಯವರು ರಮೇಶ  ಹೊನ್ನಿನಾಯ್ಕರ ಹಾಗೂ ಮಾಥರ್ಾ ಮಖೇಲರ್ಾ ಹಾಗೂ ಹಿರಿಯ ಶಿಕ್ಷಕರಾದ ಸಿ.ಬಿ.ಹೊಳೆಯಣ್ಣವರ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಪ್ರಾಚಾರ್ಯರು, ಶಿಕ್ಷಕ ಬಂಧುಗಳು ಹಾಗೂ ನಮ್ಮ ಶಾಲೆಯ ಹಿರಿಯ ಶಿಕ್ಷಕರು ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.  ಕಾರ್ಯಕ್ರಮವನ್ನು ಕುಮಾರಿ ನಂದಿನಿ ಹಿರೇಮಠ ಹಾಗೂ ಕುಮಾರ ಅಭಿಷೇಕ್ ಮುರಗೊಡ ನಿರೂಪಿಸಿದರೆ, ಕುಮಾರ ವಿವೇಕ ದೇಸಾಯಿ  ವಂದಿಸಿದರು.