'ಕಾನೂನು, ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಗಣೇಶ ಉತ್ಸವ ಆಚರಿಸಿ'

ಮರಿಯಮ್ಮನಹಳ್ಳಿ 25: ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಗಣೇಶ ಉತ್ಸವ ಆಚರಿಸಬೇಕೆಂದು ಕೂಡ್ಲಿಗಿ ಡಿ. ವೈಎಸ್ಪಿ ಹರೀಶ ಕರೆ ನೀಡಿದರು.

ಅವರು ಬುಧವಾರ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗಣೇಶಹಬ್ಬದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು.ಯಾವ ದೇಶದಲ್ಲಿ ಶಾಂತಿ-ಸಾಮರಸ್ಯ ಇರುತ್ತದೆಯೋ ಆ ದೇಶ ಅಭಿವೃದ್ಧಿ ಪಥದಲ್ಲಿ ಇರುತ್ತದೆ. ಇದಕ್ಕೆ ಭಾರತವೆ ಉತ್ತಮ ಮಾದರಿಯಾಗಿದೆ ಜಗತ್ತಿಗೆ ಗಣೇಶ ಉತ್ಸವ ಆಚರಿಸುವ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದರು. ಡಿಜೆ ಬಳಕೆಗೆ ನಿರ್ಬಂಧಿತ ನಿಯಮಗಳಿವೆ, ಇನ್ನೂ ಸರ್ಕಾರದ ಮಟ್ಟದಲ್ಲಿ ಇನ್ನೂ ಡಿ.ಜೆ.ಕುರಿತು ನಿದರ್ಾರವಾಗಿಲ್ಲ.ನಿಯಮಗಳನ್ನು ಸರ್ಕಾರ ಜಾರಿಗೊಳಿಸಿದ ನಂತರ ತಿಳಿಸಲಾಗುವುದು. ಗಣೇಶನ ಪ್ರತಿಷ್ಟಾಪನೆ ಸ್ಥಳದಲ್ಲಿ ನಿಗಧಿತ ಧ್ವನಿವರ್ದಕಗಳನ್ನು ಬಳಸಬೇಕು.ಯಾರು ಕಾನೂನುಗಳನ್ನು ಮೀರ ಬಾರದೆಂದರು. ಮುಖ್ಯವಾಗಿ ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸಬೇಕೆಂದು ಸಲಹೆ ಮಾಡಿದರು. 

ಹೊಸಪೇಟೆ ತಹಶೀಲ್ದಾರ್ ವಿಶ್ವಜೀತ ನೆಹೆತಾ, ಹ.ಬೊ.ಹಳ್ಳಿ ಸಿ.ಪಿ.ಐ.ಮಂಜಣ್ಣ, ಪಟ್ಟಣದ ಪಿಎಸ್ಐ ಹನುಮಂತಪ್ಪ ತಳವಾರ, ಮೀನಾಕ್ಷಿ, ಅಗ್ನಿಶಾಮಕದಳದ ಕೃಷ್ಣ ಸಿಂಗ್, ಪ.ಪಂ.ಮುಖ್ಯಾಧಿಕಾರಿ ಫಕೃದ್ದೀನ್ ಸಾಬ್,ಕಂದಾಯ ನಿರೀಕ್ಷಕ ಅಂದಾನಗೌಡ,     ಜೆಸ್ಕಾಂಅಧಿಕಾರಿ ವೆಂಕಟೇಶ, ಪ.ಪಂ.ಸದಸ್ಯರಾದ ಬೆಣಕಲ್ ಬಾಷ, ಕೆ.ಮಂಜುನಾಥ, ಪರಶುರಾಮ,ಸ್ಥಳೀಯ ಮುಖಂಡರಾದ ಗೋವಿಂದರ ಪರಶುರಾಮ, ಎಸ್.ಕೃಷ್ಣನಾಯ್ಕ, ಈ ನಾಗರಾಜ, ನಂದಿಬಂಡಿ ಸೊಮಪ್ಪ,ಎಂ.ಬದ್ರಿನಾಥಶೆಟ್ಟಿ,ಲಾಲ್ಯಾನಾಯ್ಕ,ತತಳವಾರ ಹುಲುಗಪ್ಪ, ಗುಂಡಾಸ್ವಾಮಿ,ರಮೇಶ್ ಬ್ಯಾಲಕುಂದಿ,ಬಂಗಾರಿ ಮಂಜುನಾಥ,ಎ.ರಹಿಮಾನ್, ಎಂ.ನಜೀರಸಾಬ್, ಗ್ರಾ.ಪಂ.ಸದಸ್ಯ ಸಿ.ಆರ್.ಗಾಳೇಶ, ಕಂಪಾಲೆಪ್ಪ, ಮೆಹಬೂಬ್ ಬಾಷ ಸೇರಿದಂತೆ ಇತರರಿದ್ದರು.