‘ಸದೃಢ ದೇಶ ನಿರ್ಮಾಣ ಮಾಡಲು ಸದೃಢ ಯುವಪಡೆ ನಿರ್ಮಾಣವಾಗಬೇಕು’
'A strong youth force must be built to build a strong country'
ಲೋಕದರ್ಶನ ವರದಿ
ಮಾಂಜರಿ 28: ತಂತ್ರಜ್ಞಾನದ ಯುಗದಲ್ಲಿರುವ ಪದವಿ ಯುವ ಸಮೂಹ ನಮ್ಮ ದೇಶದ ಸಂಪತ್ತಾಗಿದ್ದು, ಸದೃಢ ದೇಶ ನಿರ್ಮಾಣ ಮಾಡಲು ಸದೃಢ ಯುವಪಡೆ ನಿರ್ಮಾಣವಾಗಬೇಕು. ಸರ್ವತೋಮುಖ ಶಿಕ್ಷಣದಿಂದ ಆದರ್ಶ ವ್ಯಕ್ತಿತ್ವ ಸಾಧ್ಯವಿದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾಗಿರುವ ಡಾ ಪ್ರಭಾಕರ್ ಕೋರೆ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎ??? ಶಿಕ್ಷಣ ಸಂಸ್ಥೆಯ ಶಾರದಾದೇವಿ ಕೋರೆ ಪ್ರೌಢಶಾಲಾ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಈಚೆಗೆ ನಡೆದ ಪರೀಕ್ಷಾ ಕಾಲದಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.
ಪದವಿ ವಿದ್ಯಾರ್ಥಿಗಳ ತಮ್ಮ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ಉತ್ತಮ ನಡೆ ನುಡಿ, ಅನುಸರಿಸಿಕೊಂಡು ಸಮಾಜದಲ್ಲಿರುವ ಗುರು ಹಿರಿಯರಿಗೆ ತಂದೆ-ತಾಯಿಗೆ ಗೌರವ ತರುವ ವ್ಯಕ್ತಿತ್ವ ಕಟ್ಟಿಕೊಂಡು ಸಮಾಜದಲ್ಲಿ ಆದರ್ಶ ನಾಗರಿಕರ ಬದುಕು ಕಟ್ಟಿಕೊಳ್ಳಿ. ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದರ ಬದಲು ಸಮಾಜಕ್ಕೆ ನಾವೇನು ಕೊಡುತ್ತೇವೆ ಎಂಬುದನ್ನು ಅರಿತುಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಇಂದಿನ ಯುವ ಶಕ್ತಿಯಲ್ಲಿ ಅಪಾರವಾದ ಕೌಶಲ್ಯಅಡಗಿದೆ. ಅದನ್ನು ಸೂಕ್ತ ಸಂದರ್ಭದಲ್ಲಿ ಬಳಸಿಕೊಂಡು ಸಾಧನೆಯ ಗುರಿ ತಲುಪಿ, ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ಇರುವುದರಿಂದ ದೊರೆತಿರುವ ಸೌಲಭ್ಯ ಬಳಸಿಕೊಂಡು ಉನ್ನತ ಸ್ಥಾನಮಾನ ಪಡೆಯುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ನಮ್ಮ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಒದಗಿಸಿದ್ದೇವೆ.ಕಡು ಬಡತನದಲ್ಲಿ ತಂದೆ ತಾಯಿಗಳು ದುಡಿದು
ಬಂದು ಮನೆ ನಡೆಸುವ ಪರಿಯನ್ನೂ ಮನಗಂಡು ನಾವಾದರು ಉತ್ತಮವಾಗಿ ಓದಬೇಕು ನಮ್ಮ ಪಾಲಕರಿಗೆ,ಕಲಿಸಿದ ಗುರುಗಳಿಗೆ ಹೆಚ್ಚಿನ ಗೌರವವನ್ನು ನೀಡಬೇಕೆಂದು ತಾವು ಮಾಡಿದ ಸಾಧನೆ ಪ್ರೇರಣಾದಾಯಕ ವಾಗಿದೆ ಅವರುಬಡತನವು ಜೀವನದಲ್ಲಿ ದೊಡ್ಡ ಅಡೆತಡೆಯಾದರೂ, ಅದನ್ನು ಜಯಿಸುವ ಶಕ್ತಿ ಮನಸ್ಸಿನಲ್ಲಿದೆ. ಮನಸಿದ್ದರೆ ಮಾರ್ಗ ಎಂಬಂತೆ ಅನೇಕ ಮಹಾನ್ ವ್ಯಕ್ತಿಗಳು ಬಡತನದಲ್ಲಿಯೇ ತಮ್ಮ ಶಿಕ್ಷಣವನ್ನು ಮುಂದುವರಿಸಿ, ನಂತರ ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ. ಅದಕ್ಕಾಗಿ ಇಂದಿನ ಯುವಕರು ನಮ್ಮ ಭಾರತ ದೇಶದ ಬೆನ್ನೆಲುವಾಗಿ ಉನ್ನತ ಸ್ಥಾನ ಪಡೆದು ಸಮಾಜದಲ್ಲಿ ಒಬ್ಬ ಆದರ್ಶ ವ್ಯಕ್ತಿಯನ್ನು ಗುರಿ ಹೊಂದಿರಬೇಕೆಂದು ಮಲ್ಲಿಕಾರ್ಜುನ್ ಕೋರೆ ಹೇಳಿದರು.
ಈ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾದ ಡಾ ಪ್ರಭಾಕರ್ ಕೋರೆ ಮಲ್ಲಿಕಾರ್ಜುನ್ ಕೋರೆ ಇವರು ಸನ್ಮಾನಿಸಿದರು.
ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಅಜೀವ ಸದಸ್ಯರಾದ ಬಿಎಸ್ ಅಂಬಿ ಉಪರಾಚಾರ್ಯ ಜೆಎಸ್ ತಮ್ಮಗೌಡಾ ವಿ ಡಿ ನಾಯಕ್ ಸಿ ಬಿ ಚೌಗುಲೆ ಎ ಡಿ ಜಾಧವ್ ಎಂ ಆರ್ ನಾಗರಾಜ್ ವಿ ಜಿ ಪಾಟೀಲ್ ಹಾಗೂ ಇನ್ನಿತರರು ಹಾಜರಿದ್ದರು
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 