ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 
ನನ್ನ ಶಾಲಾ ದಿನಗಳಲ್ಲಿ ಮೇಷ್ಟ್ರು ಎಲ್ಲಾ ವಿದ್ಯಾಥರ್ಿಗಳಿಗೆ ಗದರಿಸುತ್ತಿದ್ದರು. ಬುಟ್ಟಿಯಲ್ಲಿರುವ ಒಂದು ಕೊಳೆತ ಸೇಬು-ಹಣ್ಣು ಉಳಿದ ಹಣ್ಣನ್ನು ಕೆಡಿಸಬಹುದು ಎಂದು ನನ್ನನ್ನು ಗುರಾಯಿಸುತ್ತಿದ್ದರು. ಇದು ಇಂದಿಗೂ ನನಗೆ ಯಕ್ಷ ಪ್ರಶ್ನೆ ಅಗಿದೆ. ನಾನು ಕೊಳೆತಿರುವ ಸೇಬು ಹಣ್ಣೊ? ಅಥವಾ ಕೆಡಬಹುದಾದಂತಹ ಹಣ್ಣೊ ಎಂದು ಬಹಳ ಬಾರಿ ತಲೆ ಕೆರೆಯುತ್ತೇನೆ. ಅದೇನೇ ಇರಲಿ, ನನ್ನ ಅಭಿಪ್ರಾಯದ ಪ್ರಕಾರ ಎಲ್ಲರೂ ಒಳ್ಳೆಯವರೇ... ಆದರೆ ಪರಿಸ್ಥಿತಿ ಕೆಲವರನ್ನು ಕೊಳೆತ ಸೇಬು ಹಣ್ಣನ್ನಾಗಿಸಿದರೆ, ಮತ್ತೇ ಹಲವರು ಆಸೆ ಎಂಬ ಬಿಸಿಲು ಕುದುರೆ ಏರಿ ತಮ್ಮನ್ನು ತಾವು ಕೊಳೆತು ಗಬ್ಬು ನಾರುವ ಸೇಬು ಹಣ್ಣಿನಂತೆ ಮಾಡಿಕೊಂಡಿರುವರು. ಇದರಿಂದ ನಾಣು ಅರ್ಥ ಮಾಡಿಕೊಂಡಿದ್ದೇನೆಂದರೆ ಮನಸೆಂಬ ಮಾಯೆ ಮಾವುತನಂತೆನಮ್ಮ ಹೆಗಲನ್ನೇರಿ ನಮ್ಮನ್ನು ನಿಯಂತ್ರಿಸುತ್ತಿರುವುದು. ಹಾಗಾದರೆ ಮನಸ್ಸಿಗೆ ಹೇಗೆ ತರಬೇತಿ ನೀಡುವುದು? ಮನಸ್ಸನ್ನು ನಿಯಂತ್ರಿಸಲು ಸದ್ಭಾವನೆ ಮತ್ತು ಸದ್ವಿಚಾರ ಬಹಳ ಮುಖ್ಯವಾದ ಗುಣಗಳು. ಇದರಿಂದ ನಾವು ಕೊಳೆತ ಬುಟ್ಟಿಯನ್ನು ಕೂಡಾ ಸರಿಪಡಿಸಬಹುದು ಎಂದು ನನ್ನ ವಾದ.
ಇದಕ್ಕೆ ಬಲ ನೀಡುವಂತಹ ಒಂದು ಘಟನೆ ಬುದ್ಧನ ಜೀವನದಲ್ಲಿ ನಡೆಯಿತು. ಆತ್ಮೀಯರೇ ಬಹಳಷ್ಟು ವಿಚಾರದದಲ್ಲಿ ಬುದ್ಧನ ನಡತೆ, ಮಾತುಗಳು ಜೀವನದಲ್ಲಿ ದಾರಿದೀಪವಾಗುವುದು ಸತ್ಯ. ಶ್ರದ್ಧೆ, ಭಕ್ತಿ, ದೃಢ ಸಂಕಲ್ಪ ಹಾಗೂ ನಂಬಿಕೆಯಿಂದ ಏನನ್ನು ಬೇಕಾದರೂ ಸಾಧಿಸಬಹುದೆಂದು ತೋರಿಸಿದ ಮಹಾಪುರುಷ ಈ ಗೌತಮ ಬುದ್ಧ. ಅಂತಹ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಕಾತುರನಾಗಿರುವೆ. ಬುದ್ಧನು ನಿರಂತರವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಪ್ರಯಾಣಿಸುತ್ತಿದ್ದ. ಸಹಜವಾಗಿ ಈತನ ಬಳಿ ದೊಡ್ಡದಾದಂತಹ ಭಕ್ತವೃಂದ ಹಾಗೂ ಅನುಯಾಯಿಗಳು ಇರುತ್ತಿದ್ದರು. ಬುದ್ಧನು ಎಲ್ಲರಿಗೂ ಒಂದು ನಿಯಮವನ್ನು ಪಾಲಿಸಲು ಕೇಳಿಕೊಂಡಿದ್ದನು. ಅದೇನೆಂದರೆ, ಇವರು ಪ್ರಯಾಣಿಸುವಾಗ ವಿಶ್ರಾಂತಿಗಾಗಿ ಒಂದು ಮನೆಯಲ್ಲಿ ಮೂರು ದಿನಕ್ಕಿಂತ ಹೆಚ್ಚು ಇರುವಂತಿಲ್ಲಾ. ಇದೇಕೆಂದರೆ ಮನೆಯವರರಿಗೆ ತೊಂದರೆಯಾಗಬಾರದೆಂದು. ಹೀಗೊಂದು ದಿನ ಚಲಿಸುತ್ತಿರುವಾಗ ಒಂದು ಹಳ್ಳಿಯಲ್ಲಿ ವಿಶ್ರಾಂತಿಗಾಗಿ ತಲುಪಿದರು. ಎಲ್ಲ ಅನುಯಾಯಿಗಳು ತಮ್ಮ ತಮ್ಮ ವಿಶ್ರಾಂತಿ ಮನೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿ ಒಂದು ಸನ್ಯಾಸಿಗೆ ಒಬ್ಬ ವೇಶ್ಯೆ ತನ್ನ ಮನೆಗೆ ಬರುವಂತೆ ಆಹ್ವಾನಿಸಿದಳು. ಗಾಬರಿಯಾದ ಸನ್ಯಾಸಿ, ತಾನು ಬುದ್ಧನಲ್ಲಿ ಅನುಮತಿ ಕೇಳುವೆ ಎಂದು ಓಡಿ ಬಂದ. ನಡೆದ ವಿಷಯದ ಬಗ್ಗೆ ಬುದ್ಧನಿಗೆ ವಿವರಿಸಿದ ಹಾಗೂ ತಾನು ಏನು ಮಾಡಬೇಕೆಂದು ಕೇಳಿದ.
ಧ್ಯಾನ ಮಗ್ನನಾದ ಬುದ್ಧ ತನ್ನ ತೇಜಸ್ವಿ ಕಣ್ಣುಗಳನ್ನು ತೆರೆದು ಮುಗುಳ್ನಗೆ ಬೀರಿದ. ತನ್ನ ಸೌಮ್ಯವಾದ ಮಾತಿನೊಂದಿಗೆ ಬುದ್ಧನು ಸನ್ಯಾಸಿಗೆ ಕೇಳಿದ "ಒಂದು ಮಹಿಳೆ ಯಾವುದೆ ಕಲ್ಮಶವಿಲ್ಲದೆ ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿದರೆ ನೀನೇಕೆ ಹೋಗಬಾರದು? ಇದನ್ನು ಕೇಳಿದ ಭಕ್ತವೃಂದ ಹಾಗೂ ಅನುಯಾಯಿ ಸನ್ಯಾಸಿಗಳು ತಬ್ಬಿಬ್ಬಾದರು.
ಅವಳು ವೇಶ್ಯೆ ಹಾಗೂ ಅತಿ ಸುಂದರವಾದವಳು. ನಾವು ಸನ್ಯಾಸಿಗಳು ಮತ್ತು ಆಸೆಯನ್ನು ತ್ಯಜಿಸಿದವರು. ಅವಳ ಮನೆಗೆ ಹೋಗಿ ಇರುವುದು ಎಷ್ಟು ಸರಿ ಎಂದು ಹಲವರು ಮಾತಾಡತೊಡಗಿದರು. ಮತ್ತೆ ಕೆಲವರು, ಅಂತವಳ ಮನೆಯಲ್ಲಿ ಸನ್ಯಾಸಿ ವಾಸ್ತವ ಹೂಡುವುದು ಸಮಂಜಸವಲ್ಲ ಎಂದರು. ಇದನ್ನು ಕೇಳಿದ ಬುದ್ಧ 3ದಿನಗಳ ನಂತರ ನಿಮಗೆಲ್ಲ ಅರ್ಥವಾಗುವುದು ಎಂದು ನಕ್ಕು ಸನ್ಯಾಸಿಗೆ ವೇಶ್ಯೆಯ ಮನೆಯಲ್ಲಿ ಇರಲು ಸೂಚಿಸಿದ. ಅಂತೆಯೆ ಸನ್ಯಾಸಿಯು ತೆರಳಿದ. ನಿಶ್ಕಲ್ಮಶವಾದ ಸದ್ಬಾವನೆಯಿಂದ ವೇಶ್ಯೆಯು ಸನ್ಯಾಸಿಯನ್ನು ಬರಮಾಡಿಕೊಂಡಳು.
ಇತ್ತ ಉಳಿದ ಸನ್ಯಾಸಿಗಳು ವೇಶ್ಯೆಯ ಮನೆಯ ಮೇಲೆ ಕಣ್ಣಿಟ್ಟರು. ಎಲ್ಲರೂ ಇವರಿಬ್ಬರೂ ಏನು ಮಾಡುತ್ತಿದ್ದಾರೆಂದು, ಮೈಯೆಲ್ಲಾ ಕಿವಿಯನ್ನಾಗಿಸಿಕೊಂಡು ಅನುಮಾನದಿಂದ ಅವಳ ಮನೆಯನ್ನು ಸುತ್ತುವರಿದಿದ್ದರು. ಮೊದಲನೇಯ ದಿನ ಸನ್ಯಾಸಿ ಹಾಗೂ ವೇಶ್ಯೆ ಹಾಡತೊಡಗಿದರು. ಅನುಮಾನದಿಂದ ನೋಡುತ್ತಿದ್ದ ಉಳಿದ ಸನ್ಯಾಸಿಗಳು ಬುದ್ಧನಲ್ಲಿ ಓಡಿಬಂದು ನಡೆಯುತ್ತಿರುವುದನ್ನು ವಿವರಿಸಿದರು. ಬುದ್ಧನು ಎಂದಿನಂತೆ ಮುಗುಳ್ನಕ್ಕು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ. ಎರಡನೇ ದಿನ ಸನ್ಯಾಸಿ ಹಾಗೂ ವೇಶ್ಯೆ ನತರ್ಿಸುತ್ತಿದ್ದರು. ಇದನ್ನು ನೋಡಿದ ಹಲವು ಅನುಯಾಯಿಗಳು ಸನ್ಯಾಸಿಯ ಮೇಲೆ ಅವಹೇಳನಮಾಡಲು ಪ್ರಾರಂಭಿಸಿದರು. ಬುದ್ಧ ಎಂದಿನಂತೆ ಮತ್ತೆ ಮುಗುಳ್ನಕ್ಕನು.
ಮೂರನೆ ದಿನ ಸನ್ಯಾಸಿ ಮತ್ತು ವೇಶ್ಯೆ ಇಬ್ಬರೂ ಹಾಡುತ್ತಾ ನರ್ತಿಸುತ್ತಿರುವುದು ಮತ್ತೆ ಉಳಿದ ಸನ್ಯಾಸಿಗಳ ಗಮನಕ್ಕೆ ಬಂತು. ಇವರೆಲ್ಲರು ವೇಶ್ಯೆಯ ಮನೆಯಲ್ಲಿದ್ದ ಸನ್ಯಾಸಿಗೆ ಛೀಮಾರಿ ಹಾಕಲು ಪ್ರಾರಂಭಿಸಿದರು. 3ನೇ ದಿನ ಕಳೆಯುತ್ತಲೆ ಎಲ್ಲರೂ ಪ್ರಯಾಣ ಬೆಳೆಸಲು ಊರಿನ ಹೊರಗೆ ಬಂದು ನಿಂತಿದ್ದರು. ಎಲ್ಲರೂ ಈ ವೇಶ್ಯೆಯ ಮನೆಯಲ್ಲಿದ್ದ ಸನ್ಯಾಸಿಗಾಗಿ ಕಾತುರದಿಂದ ಕಾದು ಕುಳಿತಿದ್ದರು. ಆಶ್ಚರ್ಯವೆಂದರೆ ಸನ್ಯಾಸಿಗಳ ತಂಡಕ್ಕೆ ಮತ್ತೊಬ್ಬ ಮಹಿಳಾ ಸನ್ಯಾಸಿ ಕೂಡಿಕೊಂಡಿದ್ದಳು. ಅಂದರೆ ಸನ್ಯಾಸಿಯ ವೇಶ್ಯೆಯನ್ನು ಪರಿವತರ್ಿಸಿ ಅವಳನ್ನು ಸಾಧನೆ ಮಾಡುವ ದಾರಿಗೆ ಎಳೆದಿದ್ದ. ಇದನ್ನು ನೋಡಿದ ಬುದ್ಧ ಹೇಳಿದ. "ಸದ್ಭಾವನೆ ಹಾಗೂ ಸದ್ವಿಚಾರ ಇಟ್ಟುಕೊಂಡವರು ಎಂತಹ ಕಲ್ಮಶವನ್ನೂ ಕೂಡಾ ಪರಿವತರ್ಿಸಿ ಒಳ್ಳೆಯ ದಾರಿಯತ್ತ ಎಳೆದುಕೊಂಡು ಬರಬಹುದು.
ಸ್ನೇಹಿತರೇ, ಈ ಕಥೆ ನಮ್ಮ ಜೀವನದಲ್ಲಿ ಬಹಳ ಸುಂದರವಾದ ಪಾಠವನ್ನು ಕಲಿಸುವುದು.ನಾವು ಮಾಡುವ ಕೆಲಸ ಒಳ್ಳೆಯದಿದ್ದರೆ ಯಾರನ್ನು ಬೇಕಾದರು ಎದುರಿಸಬಹುದು. ಹೀಗಾಗಿ ಒಂದು ಒಳ್ಳೆಯ ಸೇಬು ಹಣ್ಣು ಹಲವು ಕೆಟ್ಟ ಸೇಬುಹಣ್ಣನ್ನು ಸರಿಮಾಡುವುದು ಅಸಾಧ್ಯವಿರಬಹುದು. ಆದರೆ ಒಂದು ಒಳ್ಳೆಯ ನಡೆ ಅಥವಾ ನಡತೆ ಹಲವು ಕೆಟ್ಟ ಗುಣಗಳನ್ನು ತೆಗೆಯಬಹುದಲ್ಲವೆ