ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 
ಬಹುಶಃ ಹಿರಿಯ ತಲೆಮಾರಿನ ಸಿನಿಮಾಪ್ರಿಯರು ಯಾರೂ ಪ್ರೇಮದ ಪುತ್ರಿ, ಜಾತಕ ಫಲ, ಸ್ಕೂಲ ಮಾಸ್ಟರ್, ಮೊದಲ ತೇದಿ, ಹಣ್ಣೆಲೆ ಚಿಗುರಿದಾಗ ಮೊದಲಾದ ಸಿನಿಮಾಗಳನ್ನು ಇಂದಿಗೂ ಮರೆತಿರಲಾರರು. ಕನ್ನಡ ವಾಕಿ ಟಾಕಿ ಚಿತ್ರಗಳ ಆರಂಭದ ಕಾಲದ ಆ ಕಪ್ಪು ಬಿಳುಪು ಚಿತ್ರಗಳ ಸೊಗಸೇ ಬೇರೆ. ಆಧುನಿಕ ತಂತ್ರಜ್ಞಾನದ ಸೋಂಕಿಲ್ಲದೆಯೂ ಅವು ನೋಡುಗರ ಮನಸ್ಸನ್ನು ಸೆಳೆಯುತ್ತಿದ್ದುದು ಉತ್ತಮ ಅಭಿನಯ, ಹಾಡು, ಸಂಭಾಷಣೆ ಮೊದಲಾದವುಗಳಿಂದ. ಅಂದಿನ ಆರ್. ನಾಗೇಂದ್ರರಾವ್, ಬಿ. ಆರ್. ಪಂತುಲು, ಪಂಡರಿಬಾಯಿ ಮೊದಲಾದ ನಟನಟಿಯರನ್ನು ನಿಮರ್ಾಪಕ ನಿದರ್ೆಶಕರನ್ನು ನಾವು ಸ್ಮರಿಸಲೇಬೇಕಾಗಿದೆ.
ಆಗೆಲ್ಲ ಹೆಚ್ಚಾಗಿ ಕಲಾವಿದರು ನಾಟಕ ರಂಗಭೂಮಿಯಿಂದಲೇ ಬರುತ್ತಿದ್ದರು. ನಾಗೇಂದ್ರರಾಯರೂ ಹಾಗೇ. 1896 ಜೂನ್ 26 ರಂದು ಜನಿಸಿದ ಅವರು ಎಂಟನೇ ವಯಸ್ಸಿಗೇ ನಾಟಕಗಳಲ್ಲಿ ಮೊದಲು ಸ್ತ್ರೀ ಪಾತ್ರ ನಂತರ ಪುರುಷ ಪಾತ್ರ ವಹಿಸಲಾರಂಭಿಸಿದ್ದರು. ವರದಾಚಾರ್ಯರ ರತ್ನಾವಳಿ ನಾಟಕ ಮಂಡಳಿ, ಮೈಸೂರಿನ ಚಾಮುಂಡೇಶ್ವರಿ ನಾಟಕ ಕಂಪನಿಗಳಲ್ಲಿ ನಟರಾಗಿ ಪಳಗಿದ ಅವರು 1931 ರಿಂದ ವಾಕಿ ಸಿನಿಮಾ ಯುಗ ಆರಂಭವಾದಾಗ ಮುಂಬಯಿಗೆ ಹೋಗಿ ಅಲ್ಲಿ ಪಾರಿಜಾತ ಪುಷ್ಪಾಪಹರಣ, ನಾರದ ರಾಮದಾಸು ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿ ಅದರ ಅನುಭವ ಪಡೆದುಕೊಂಡರಾದರೂ ಅಲ್ಲಿಯ ವಾತಾವರಣ ಸರಿಯಾಗದೆ ಬೆಂಗಳೂರಿಗೆ ಬಂದು ಸುಬ್ಬಯ್ಯ ನಾಯ್ಡು ಜೊತೆ ಸತ್ಯಸಾಮ್ರಾಜ್ಯ ನಾಟಕ ಮಂಡಳಿ ಸ್ಥಾಪಿಸಿದರು. ಸಂಗಡ ಕನ್ನಡ ಸಿನಿಮಾ ನಿಮರ್ಾಣದ ಪ್ರಯತ್ನ ಆರಂಭಿಸಿದರು. ಶಾ ಚಮನಲಾಲ ಡೂಂಗಾಜಿ ಎಂಬವರಿಂದ ಹಣ ಹಾಕಿಸಿ ಸತಿ ಸುಲೋಚನಾ ಎಂಬ ಮೊದಲ ಕನ್ನಡ ವಾಕಿ ಸಿನಿಮಾ ನಿಮರ್ಿಸಿದರು. ಅದರ ನಿದರ್ೆಶಕರು ವೈ. ವರದರಾವ್(. 1934 ಮಾರ್ಚ 3). ನಾಗೇಂದ್ರರಾಯರು ರಾವಣನ ಪಾತ್ರ ನಿರ್ವಹಿಸಿದ್ದರಲ್ಲದೆ ಸಂಗೀತ ಸಂಯೋಜಿಸಿದ್ದರು. ಮುಂದೆ ಸತ್ಯ ಹರಿಶ್ಚಂದ್ರ, ಭೂಕೈಲಾಸ ಮೊದಲಾದ ಪೌರಾಣಿಕ, ಮತ್ತು ಇತರ ಸಾಮಾಜಿಕ ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮದೇ ಆರ್. ಎನ್. ಆರ್. ಸಂಸ್ಥೆ ಸ್ಥಾಪಿಸಿಕೊಂಡ ಅವರು ತಯಾರಿಸಿದ ಪ್ರೇಮದ ಪುತ್ರಿ (1957) ಭಾರೀ ಯಶಸ್ಸು ಕಂಡಿತು. ಅದು 5 ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪಡೆಯಿತು. ಹಣ್ಣೆಲೆ ಚಿಗುರಿದಾಗ ಚಿತ್ರದ ಅಭಿನಯಕ್ಕಾಗಿ ಶ್ರೇಷ್ಠ ನಟ ಪ್ರಶಸ್ತಿ ಬಂತು. ಪದ್ಮಶ್ರೀ ಗೌರವ ದೊರಕಿತು. ರಾಯರ ಮೂವರು ಮಕ್ಕಳೂ ಸಿನೆಮಾರಂಗಕ್ಕೆ ಬಂದರು. ಪ್ರಸಾದ್, ಜಯಗೋಪಾಲ ಮತ್ತು ಸುದರ್ಶನ. ಇವರಲ್ಲಿ ಸುದರ್ಶನ ನಾಯಕ ನಟರಾಗಿ ವಿಜಯನಗರದ ವೀರಪುತ್ರ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಜಯಗೋಪಾಲ ಚಿತ್ರಸಾಹಿತ್ಯ ರಚನೆ ಮಾಡಿದರು. ಪ್ರಸಾದ ತಾಂತ್ರಿಕ ಪರಿಣತಿ ಪಡೆದವರಾಗಿದ್ದರು.
ನೂರಕ್ಕೂ ಹೆಚ್ಚು ಕನ್ನಡ , ತಮಿಳು ತೆಲುಗು ಚಿತ್ರಗಳಲ್ಲಿ ನಟಿಸಿದ ರಾಯರು ಕನ್ನಡ ಸಿನಿಮಾ ರಂಗಕ್ಕೆ ತಳಹದಿಯನ್ನು ನಿಮರ್ಿಸಿದ ಹಿರಿಯ ಗೌರವಾನ್ವಿತ ವ್ಯಕ್ತಿಯಾಗಿ ಮನ್ನಣೆ ಗಳಿಸಿದವರು. ನಾವು ಎಂದೆಂದೂ ಸ್ಮರಿಸುವಂತಹ ಮಹಾನುಭಾವರು. 1977 ಫೆಬ್ರವರಿ 9 ರಂದು ರಾಯರು ನಿಧನ ಹೊಂದಿದರು.