ವಾಲೈಂಟೆನ್‌ಡೇ ಹದಿಹರೆಯದವರಿಗೆ ಮಾತ್ರವಲ್ಲ..ಜೀವನ ಪ್ರೀತಿಸುವ ಎಲ್ಲರಿಗೂ...

ಫೆಬ್ರವರಿ 14 ಎಲ್ಲೆಡೆಪ್ರೇಮಿಗಳ ದಿನದಆಚರಣೆ. ಆದರೆ ಪ್ರೇಮಿಗಳು ಎಂದರೆಬರೀಹದಿಹರೆಯದವರುಮಾತ್ರವಲ್ಲ..ಜೀವನದಲ್ಲಿ ನೀರೀಕ್ಷಿತಗುರಿಇಟ್ಟುಕೊಂಡು ಆ ಗುರಿಯನ್ನು ಸಾಧಿಸಿ , ಆ ಸಾಧನೆಯದಾರಿಯಲ್ಲಿಇನ್ನಷ್ಟುಉತ್ಸಾಹದಿಂದ ಮುನ್ನುಗ್ಗುತ್ತಿರುವವವರು, ಜೀವನದ ಸಂಧ್ಯಾಕಾಲದಲ್ಲಿದ್ದುತಮ್ಮಗತಕಾಲವನ್ನು ನೆನೆದು, ಆಗ ತಾವು ಮಾಡಿದತಮ್ಮ ನಿಷ್ಕಲ್ಮಷ ಕಾರ್ಯಗಳ ಮೂಲಕ ಆತ್ಮತೃಪ್ತಿಯಿಂದಜೀವಿಸುತ್ತಿರುವವರು.. ದೈಹಿಕ ವೈಫಲ್ಯ ಮತ್ತುಇತರೇಎಲ್ಲಾರೀತಿಯ ಸಾಮಾಜಿಕ,ಅರ್ಥಿಕಕಷ್ಟಗಳನ್ನು ಮೆಟ್ಟಿನಿಂತು ನೆಮ್ಮದಿಯಜೀವನ ನಡೆಸುತ್ತಿರುವಎಲ್ಲರಿಗೂ ಪ್ರತಿದಿನವೂ ವಾಲೈಂಟೇನ್‌ಡೇ.. 

ಹದಿಹರೆಯುವಯುವಜನತೆತಮ್ಮ ಹುಚ್ಚುಕೋಡಿ ಮನಸ್ಸಿನಿಂದ ಕೇವಲ ಬಾಹ್ಯ ಸೌಂದರ್ಯಗೆ ಮರುಳಾಗದೇ, ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು,ತಮ್ಮ ವಿಧ್ಯಾಭ್ಯಾಸದಲ್ಲಿ , ಶೈಕ್ಷಣಿಕ ಚಟುವಟಿಕೆಗಳಲ್ಲಿ ತನ್ಮಯರಾಗಿ, ಬದುಕಿನಲ್ಲಿಉನ್ನತ ಗುರಿಗಳನ್ನು ಇಟ್ಟುಕೊಂಡು ಆ ಗುರಿ ಸಾಧನೆಯಕಡೆಗೆತಮ್ಮ ಮನಸ್ಸನ್ನುಕೇಂದ್ರೀಕರಿಸಬೇಕು. ಸರ್ಕಾರವುಯುವಜನತೆಯ ಸಮಗ್ರಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಜಾರಿಗೆತಂದಿದ್ದು ಅವುಗಳನ್ನು ತಿಳಿದುಕೊಂಡು, ಆ ಯೋಜನೆಗಳ ಸಂಪೂರ್ಣ ಪ್ರಯೋಜನ ಪಡೆಯಬೇಕು. 

ಸರ್ಕಾರವುಯುವಜನತೆಯ ವಿದ್ಯಾಭ್ಯಾಸಕ್ಕೆ ಅನುಕೂಲವಾಗುಂತೆ ನೀಡಲಾಗುವ ವಿದ್ಯಾರ್ಥಿ ವೇತನ, ಪೇಲೋಶಿಫ್ ಗಳು, ಪಿ.ಹೆಚ್‌.ಡಿ ವ್ಯಾಸಾಂಗಕ್ಕೆ ನಿಡುವ ವಿದ್ಯಾರ್ಥಿ ವೇತನಗಳು, ಕಾನೂನು ಪಧವೀಧರರಿಗೆ ನೀಡುವ ಸಹಾಯಧನ, ವಿದೇಶದಲ್ಲಿಉನ್ನತ ವ್ಯಾಸಂಗಕ್ಕೆ ನೀಡುವ ವಿದ್ಯಾರ್ಥಿ ವೇತನಗಳು ಮಾತ್ರವಲ್ಲದೇಉದ್ಯೋಗದೊರಕಿಸುವಉದ್ದೇಶದಿಂದ ಭಾರತೀಯ ನಾಗರೀಕ ಸೇವೆಗಳು , ಕರ್ನಾಟಕ ನಾಗರೀಕ ಸೇವೆಗಳು , ಬ್ಯಾಂಕಿಂಗ್‌ಸೇವೆಗಳು ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡುವಉಚಿತ ತರಬೇತಿಗಳು, ಸಶಸ್ತ್ರ ಪಡೆಗಳಲ್ಲಿ , ಯೂನಿಫಾರ್ಮ್‌ ಸೇವೆಗಳಲ್ಲಿ ಉದ್ಯೋಗವಕಾಶ ಪಡೆಯಲು ನೀಡುವತರಬೇತಿ, ವಿವಿಧಕೌಶಲ್ಯಾಭಿವೃದ್ದಿತರಬೇತಿ ಯೋಜನೆಗಳ ಸದುಪಯೋಗವನ್ನು ಪಡೆಯಬೇಕು. 

ಸಾರ್ವಜನಿಕ ಸೇವೆಯಲ್ಲಿಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರೂ ಸಹ ತಮ್ಮಕಚೇರಿಗೆ ಆಗಮಿಸುವ ನಾಗರೀಕರನ್ನು ಸೌಹಾರ್ದಯುತವಾಗಿ ಮಾತನಾಡಿಸಿ, ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಅವುಗಳಿಗೆ ತಮ್ಮ ಹಂತದಲ್ಲಿ ಸೂಕ್ತ ಪರಿಹಾರ ಒದಗಿಸಿದಲ್ಲಿ , ಸಾರ್ವಜನಿಕರುತಮಗೆನೀಡುವಪ್ರೀತಿ, ಗೌರವ ಅಭಿಮಾನಗಳು,  ಪ್ರತಿ ನಿತ್ಯದತಮ್ಮಕೆಲಸ ಕಾರ್ಯಗಳನ್ನು ಹೆಚ್ಚಿನಸಂತೋಷದಿಂದ ಮಾಡುವ ಹುಮ್ಮಸ್ಸು ನೀಡುತ್ತವೆಅಲ್ಲದೇ ನಿತ್ಯದ ಕೆಲಸ ಕಾರ್ಯಗಳನ್ನು ಅಂದೇ ಮುಕ್ತಾಯಗೊಳಿಸಿದ್ದಲ್ಲಿ ಸಂಜೆ ಮನೆಗೆ ತೆರಳಿದಾಗ ಕುಟುಂಬದೊಂದಿಗೆಸಂತೋಷದಿಂದ ಬೆರೆತುನಿರಾಳವಾಗಿ ಕಾಲಕಳೆಯಬಹುದಾಗಿದೆ.. 

ವೆಲೈಂಟೆನ್‌ಡೇಯಂದು ಮೊದಲಿಗೆ ನಮ್ಮನ್ನು ನಾವು ಪ್ರೀತಿಸೋಣ, ನಮ್ಮ ಗುರಿಗಳನ್ನು , ಸಾಧನೆಗಳನ್ನು ಪ್ರೀತಿಸೋಣ, ನಮ್ಮ ಬದುಕಿನಲ್ಲಿಯಶಸ್ಸು ಪಡೆಯಲು ಸಹಕರಿಸಿದವನ್ನು, ಕಷ್ಟದಲ್ಲಿದ್ದಾಗ ಬೆಂಬಲ ನೀಡಿದ ಸ್ನೇಹಿತರನ್ನು, ಸದಾ ನಮ್ಮ ಯಶಸ್ಸಿಗೆ ಹಾರೈಸುವ ಪೋಷಕರನ್ನು, ನಮ್ಮ ವೈಫಲ್ಯಗಳಿಗೆ ಸಾಂತ್ವನ ನೀಡುವ, ಸಾಧನೆಗೆ ಬೆನ್ನುಲುಬಾಗಿ ನಿಲ್ಲುವಜೀವನ ಸಂಗಾತಿಗಳನ್ನು , ನಮಗಾಗಿ ಈ ಸುಂದರ ಪ್ರಕೃತಿಯನ್ನು ನಿರ್ಮಿಸಿದ ಭಗವಂತನನ್ನುಪ್ರತಿದಿನವು ತಪ್ಪದೇ ನೆನಯೋಣ, ಪ್ರೀತಿಸೋಣ. ವಾಲೈಂಟೈನ್‌ಡೇಯ ಸಂಭ್ರಮಒಂದು ದಿನಕ್ಕೆ, ಒಂದು ವಯೋಮಾನಕ್ಕೆ ಸೀಮಿತವಾಗದೇ ಪ್ರತೀ ದಿನವೂ, ಪ್ರತಿಯೊಬ್ಬರಿಗೂ, ಪ್ರತೀ ಕೆಲಸದಲ್ಲೂಕಂಡುಬರಲಿ.. 

ಗುಡಿಸಲಾಗಲಿ ಅರಮನೆಯಾರಲಿ.. 

ಬಡವನಾಗಲಿ ಶ್ರೀಮಂತನಾಗಲಿ.. 

ಯಾವುದೇದೇಶವಾಗಲಿ, ಭಾಷೆಯಾಗಲಿ.. 

ಜಾತಿಯಾಗಲಿ ಧರ್ಮವಾಗಲಿ.. 

ಸಕಲ ಜೀವಾತ್ಮಗಳಲ್ಲಿ ಪ್ರೇಮನಿತ್ಯ ನೂತನವಾಗಿರಲಿ..ನಿರಂತರವಾಗಿರಲಿ.. ಶಾಶ್ವತವಾಗಿರಲಿ.. 



ಲೇಖನ: ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿಗಳು, ಉತ್ತರಕನ್ನಡಜಿಲ್ಲೆ.