ಲಾಕ್ಡೌನಲ್ಲಿ, ಅಡುಗೆ ಮಾಡುತ್ತ, ಚಿತ್ರ ಬಿಡಿಸುತ್ತ ಹಾಗೂ ಸ್ಕ್ರೀಪ್ಟ್ ಬರೆಯುತ್ತ ಕಂಡು ಬರುವ ರಮೇಶ ಅರವಿಂದ


ಭಾರತೀಯ ಸೆಲೆಬ್ರಿಟಿಗಳ ಪಟ್ಟಿ ಇದ್ದರೆ, ವಯಸ್ಸಾಗಿರುವುದನ್ನು ಮುಚ್ಚಿಡುವ ಚಿರಯೌವನದ ದೇಹವನ್ನು ಹೊಂದಿರುವ ಸೆಲೆಬ್ರಿಟಿಗಳಲ್ಲಿ  ಬಹುಮುಖ ಪ್ರತಿಭೆಯುಳ್ಳ ನಟ ರಮೇಶ ಅರವಿಂದ ಮೊದಲ ಸ್ಥಾನದಲ್ಲಿರುತ್ತಿದ್ದರೆನೋ. ಅವರ ಈ ಚಿರಯೌವನಕ್ಕೆ ಕಾರಣ ಅವರ ಆಶಾವಾದಿ ವರ್ತನೆ ಹಾಗೂ ಲಘು ಆಹಾರ ಪದ್ಧತಿ. ಇದೇ ಸೆಪ್ಟೆಂಬರ್ 11 ರಂದು ರಮೇಶ ಅರವಿಂದ 56ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅವರು ನನಗೆ ತಿಳಿಸಿದ ಪ್ರಕಾರ ಅವರ ಜನ್ಮದಿನ ಸಂಕ್ಷಿಪ್ತ. ಆದರೆ ಅಭಿಮಾನಗಳ ಪ್ರೀತಿ, ಮಾಧ್ಯಮಗಳು ಹಾಗೂ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ತಮ್ಮ ಹುಟ್ಟುಹಬ್ಬವನ್ನು ದೊಡ್ಡ ಕಾರ್ಯಕ್ರಮವನ್ನಾಗಿಸುತ್ತಿವೆ.

ನನಗೆ ಈಗಲೂ ನೆನಪಿದೆ. ರಮೇಶ ಅರವಿಂದ ಅವರ ಅಮೃತ ವಷರ್ಿಣಿ ಚಲನಚಿತ್ರವನ್ನು ನೋಡಿದ್ದಾಗ ನನಗೆ ಬಹುಶಃ 10 ವರ್ಷ. ದೊಡ್ಡ ಹಾಗೂ ಮೋಹಕ ಕಣ್ಣುಗಳಿಂದ ನಟಿಸಿದ ಅಪರೂಪದ ನಟರೊಬ್ಬರಲ್ಲಿ ರಮೇಶ ಅರವಿಂದ ಎಂದು ನಾನು ಭಾವಿಸಿದ್ದೆ. ಪಾತ್ರಗಳು ಗಂಭೀರವಾಗಿರಲಿ, ಪ್ರಣಯಭರಿತವಾಗಿರಲಿ ಅಥವಾ ಹಾಸ್ಯಮಯವಾಗಿರಲಿ ಅವರು ವೀಕ್ಷಕರ ಮನಸ್ಸನ್ನು ಗೆದೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನಾನು ಅವರನ್ನು ಸಂದರ್ಶನ ಮಾಡಿದಾಗ ದೂರವಾಣಿ ಸಂದರ್ಶನದ ಕೊನೆಯಲ್ಲಿ ಅವರ ಧ್ವನಿ ಸಮತೋಲನ, ಸೊಬಗು, ಹಾಗೂ ಅವರ ವಿನಯತೆಯನ್ನು ತೋರಿಸಿತು.

* ಪ್ರಶ್ನೆ: ನಿಮ್ಮ ಹವ್ಯಾಸಗಳ ಬಗ್ಗೆ ತಿಳಿಸುತ್ತೀರಾ? 

ಹವ್ಯಾಸಗಳು ಹಲವು ಅದರಲ್ಲಿ ಚಿತ್ರ ಬಿಡಿಸುವುದು ಒಂದು. ಲಾಕ್ಡೌನ್ನಲ್ಲಿ ದೊರೆತ ಅಧಿಕ ಸಮಯದಲ್ಲಿ ತಮ್ಮಲ್ಲಿರುವ ಹವ್ಯಾಸಗಳನ್ನು ಹೊರ ಹಾಕಲು ಸೂಕ್ತ ಸಮಯ. ನಾನು ಚಿತ್ರ ಬಿಡಿಸಿದ್ದು 7ನೇ ತರಗತಿಯಲ್ಲಿದ್ದಾಗ. ಪ್ರಾರಂಭದಲ್ಲಿ ಒಂದು ಸಮೀತಿಯ ರೇಖೆ ಬಿಡುಸುವುದು ಸಹ ಕಷ್ಟವೆನಿಸಿತ್ತು. ಆದರೆ ಈಗದು ಮೋಜು. ನನ್ನ ಹೆಚ್ಚಿನ ಬೆಳಗಿನ ಸಮಯ ಚಿತ್ರ ಹಾಗೂ ಆಕೃತಿಗಳನ್ನು ಬಿಡಿಸುವುದರಲ್ಲದೇ ಕಳೆದಿತ್ತು ಎಂದು ರಮೇಶ ತಮ್ಮ ಬಾಲ್ಯದ ವಿಷಯನ್ನು ಮೆಲುಕು ಹಾಕಿದರು.

ನನ್ನ ಪ್ರಕಾರ ಲಾಕ್ಡೌನ್ ಸಮಯದಲ್ಲಿ ಅಡುಗೆ ಮನೆಯಲ್ಲಿ ತಮ್ಮ ಕೈಚಳಕ ತೋರಿಸದವರು ಯಾರೂ ಇಲ್ಲ. ರಮೇಶ ಅರವಿಂದ ಕೂಡ ಇದಕ್ಕೆ ಹೊರತಾಗಿಲ್ಲ. ನಾನು ಅಡುಗೆ ಮನೆ ಪ್ರವೇಶಿಸಿ 20-25 ದಿನಗಳು ಕಳೆದಿವೆ. ನಾನು ಈ ಮೊದಲು ಯಾವತ್ತೂ ಅಡುಗೆ ಮಾಡಿಲ್ಲ, ಆದ್ದರಿಂದ ಈಗಿನ ಪ್ರತಿ ದಿನ ಒಂದು ಪ್ರಯೋಗ. ಕೆಲವೊಂದು ಸಲ ನಾನು ಮಾಡಿರುವ ಅಡುಗೆ ಚೆನ್ನಾಗಿಲ್ಲದಿದ್ದರೆ ಅದನ್ನು ತಿರಸ್ಕರಿಸಲಾಗುತ್ತಿತ್ತು, ಆದರೆ ಅದರಿಂದ ನಾನು ಕಲಿಯುತ್ತಿದ್ದೆ. ನಾನು ಸಾಮಾನ್ಯವಾಗಿ ಬೆಳಗಿನ ಉಪಹಾರ ಮಾಡುತ್ತೇನೆ.

* ಪ್ರಶ್ನೆ: ಈಗ ಕಥೆ, ನಿರ್ದೇಶನ ಏನಾದರೂ ಮಾಡುತ್ತಿದ್ದೀರಾ?  

    ನಾನು ಹಿಂದೆಂದೂ ಬರೆಯದ ಒಂದು ನೂತನ ಪ್ರಕಾರದಲ್ಲಿ ಕಥೆ ಬರೆಯುತ್ತಿದ್ದು,  ಅದು ಹೇಗೆ ರೂಪ ತಾಳುತ್ತದೆಂದು ನೋಡಲು ನಾನು ಉತ್ಸುಕನಾಗಿದ್ದೇನೆ. ಈಗ ನಾನು ಅದರ ಯಾವುದೇ ವಿವರಗಳನ್ನು ನೀಡುವುದಿಲ್ಲ. ಅದು ಪೂರ್ಣವಾಗಿ ಸಿದ್ಧಗೊಂಡ ನಂತರ ಪ್ರಕಟ ಮಾಡುತ್ತೇನೆಂದು, ಅವರು ಲಾಕ್ಡೌನ್ ಅವಧಿಯಲ್ಲಿ ತಾವು ಬರೆಯುತ್ತಿರುವ ಹೊಸ ಸ್ಕ್ರಿಪ್ಟ್ ಬಗ್ಗೆ ತಿಳಿಸಿದರು.

ಓಟಿಟಿ ವೇದಿಕೆ ಮೂಲಕ ..

ಚಿತ್ರಮಂದಿರಗಳು ಮುಚ್ಚಿ ಈಗಾಗಲೇ ಆರು ತಿಂಗಳುಗಳು ಕಳೆದಿವೆ. ಸ್ಟ್ರೀಮೀಂಗ್ ಮೂಲಕ ಚಲನಚಿತ್ರಗಳು ಪ್ರದರ್ಶಿಸಲಾಗುತ್ತಿದ್ದು, ಇಡೀ ಕುಟುಂಬ ಒಟ್ಟಾರೆಯಾಗಿ  ಕುಳಿತು ತಮ್ಮ ಮನೆಗಳಿಂದಲೇ ಚಿತ್ರಗಳನ್ನು ವೀಕ್ಷಿಸಿ ಆನಂದಿಸುತ್ತಿರುವದರ ಕುರಿತು ನಾನು ರಮೇಶ ಅವರ ಅಭಿಪ್ರಾಯ ಕೇಳಿದಾಗ, ಅವರ ಧ್ವನಿಯಲ್ಲಿ ರೋಮಾಂಚನವಿತ್ತು ಹಾಗೂ ಅವರು ಓಟಿಟಿ ವೇದಿಕೆಯನ್ನು ಸಂಪೂರ್ಣವಾಗಿ ಸ್ವಾಗತಿಸಿದರು.

* ಈಗ ಪ್ರೇಕ್ಷಕರ ಚಿಲನಚಿತ್ರಗಳ ಸದಭಿರುಚಿ ಬಗ್ಗೆ ನಿಮ್ಮ ಅನಿಸಿಕೆ?

   ಓಟಿಟಿ ವೇದಿಕೆಯು ಮುಖ್ಯ ವೇದಿಕೆಗೆ ಬರಲು ಸಿದ್ಧಗೊಂಡಿದ್ದು, ಜನರಿಗೆ ಯಾವುದು ಅನುಕೂಲಕರವಾಗಿರುತ್ತೋ ಅದು ಯಾವಾಗಲು ಜನಪ್ರೀಯವಾಗುತ್ತದೆ. ಸೂಕ್ತ ವಿಷಯವುಳ್ಳ, ಉತ್ತಮ ಸಾರವನ್ನು ಸಾರುವ ಹಾಗೂ ಒಳ್ಳೆಯ ಚಿತ್ರಗಳಿಗೆ ಯಾವತ್ತೂ ಅವಕಾಶ ಇದ್ದೇ ಇರುತ್ತದೆ. ಈ ವೇದಿಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದ ಹಾಗೂ ಯಾವಾಗಲೂ ಗಮನಕ್ಕೆ ಬರದ ವಿಷಯಗಳ ಮೇಲೆ ಹೆಚ್ಚಿನ ಲಕ್ಷ್ಯವಹಿಸುತ್ತಿದೆ. ಕಪ್ಪು ಕನ್ನಡಿ ಅಪಾರ ಪ್ರೀತಿ ಗಳಿಸುತ್ತದೆಯೋ ಎಂಬುದು ಯಾರಿಗೆ ಗೊತ್ತು! ಪ್ರೇಕ್ಷಕರ ಸದಭಿರುಚಿ ಈಗ ಬದಲಾಗಿದೆ, ಅವರು ಬಯಸುವ, ನೋಡುವ ದೃಷ್ಟಿಕೋನ ಬದಲಾಗಿದೆ. ಈಗ ಚಿತ್ರದ ಬಗ್ಗೆ ಜ್ಞಾನ ಮೊದಲಿಗಿಂತಲೂ ಹೆಚ್ಚಾಗಿದೆ ಎಂದು ಅವರು ಹೆಮ್ಮೆಯಿಂದ ನುಡಿದರು.

* ಚಿತ್ರಮಂದಿರಗಳು ಹಾಗೂ ಓಟಿಟಿ ವೇದಿಕೆಗಳಲ್ಲಿನ ಅಂತರ? 

ಚಿತ್ರಮಂದಿರಗಳು ಹಾಗೂ ಓಟಿಟಿ ವೇದಿಕೆಗಳು ಅವುಗಳದೇ ಆದ ವೈಶಿಷ್ಟ್ಯತೆ ಹೊಂದಿವೆ. ಅವುಗಳೆರಡನ್ನು ಹೋಲಿಕೆ ಮಾಡುವುದೆಂದರೆ  ಸೇಬು ಹಾಗೂ ಕಿತ್ತಳೆ ಹಣ್ಣನ್ನು ಹೋಲಿಸಿದ ಹಾಗೆ ಎಂದು ರಮೇಶ ಅಭಿಪ್ರಾಯಪಟ್ಟರು. ಬದಲಾಗುತ್ತಿರುವ ಸಮಯದೊಂದಿಗೆ ವಿಕಸನಗೊಳ್ಳುವುದು ರಮೇಶ ಅವರು ಕರಗತ ಮಾಡಿಕೊಂಡಿದ್ದಾರೆ. 

* ಪ್ರಶ್ನೆ: ಹಿಂದಿನ ಕಾಲದ ಚಿತ್ರ ನಿರ್ಮಾ ಣವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ? ನಟನೆ ಪ್ರಾರಂಭಿಸಿದ ದಿನಗಳಿಂದ ಏನೇನು ಬದಲಾವಣೆಗಳಾಗಿವೆ? 

ಅವರು,  ಇಲ್ಲವೇ ಇಲ್ಲ, ನಾನು ಏನನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ. ನಾವು ಅಭಿವೃದ್ಧಿ ಹೊಂದುವುದನ್ನು ಕಲಿಯಲೇಬೇಕು. ಖಂಡಿತವಾಗಿ ನನಗೆ ಹಳೆಯ ಕೆಲ ಸುಮಧುರ ನೆನಪುಗಳಿವೆ. ಚಲನಚಿತ್ರ ನಿರ್ಮಾ ಣ ಕೇವಲ ಉಪಕರಣ ಮತ್ತು ಪ್ರಕ್ರಿಯೆಗಳನ್ನೊಳಗೊಂಡಿಲ್ಲ. ಇದು ಕಥೆಯನ್ನು ಹೇಳುವ, ಅದರಲ್ಲೂ ಈಗ ಕಥೆ ತಲುಪುವ ವೇಗವನ್ನೊಳಗೊಂಡಿದೆ.

ಪರದೆಯ ಹಿಂದಿನ ಕಥೆ

ಅವರ ನಿರ್ದೇ ಶನದ 100ನೇ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸೈಬರ್ ಮತ್ತು ಪೋಲಿಸ್ ಸಹಾಯವಾಣಿ ಸಂಖ್ಯೆ 100ರ ಸುತ್ತ ಈ ಚಿತ್ರ ನಿಮರ್ಾಣವಾಗಿದೆ. ಈ ವರ್ಷ ನಾನು ಮೂರು ಚಿತ್ರಗಳಲ್ಲಿ ಪೋಲಿಸ್ ಪಾತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಅಪರಾಧ ಹಾಗೂ ತನಿಖೆಯನ್ನು ಬಿಂಬಿಸುತ್ತವೆ ಎಂದು ಅವರು ಹೇಳಿದರು.

* ಪ್ರಶ್ನೆ: ಪಾತ್ರಗಳಿಂದ ಅದರಲ್ಲೂ ಗಂಭೀರ ಪಾತ್ರಗಳಿಂದ ಬೇರೆ ಪಾತ್ರಗಳಿಗೆ ಬದಲಾಗುವುದು ಕಷ್ಟವೆನಿಸುತ್ತದೆಯೇ?

ಅದಕ್ಕೆ ಅವರಿಂದ ಬಂದ ಉತ್ತರ,  ಇಲ್ಲ, ನಾನು ಅತೀ ಸುಲಭವಾಗಿ ಬದಲಾಗುತ್ತೇನೆ ಎಂದರು. ಆದರೆ ಕೇವಲ ಒಂದು ಚಿತ್ರ ಅದು ಅಮೃತ ವರ್ಷಿಣಿ, ಅದರಲ್ಲಿ ಬರುವ ಕೊಲೆಯ ಒಂದು ದೃಶ್ಯ ನನನ್ನು ಕದಡಿತ್ತು. ಆ ಒಂದು ದೃಶ್ಯದಿಂದ ಹೊರ ಬರಲು ನನಗೆ ಬಹಳ ಸಮಯ ಬೇಕಾಯಿತು ಎಂದರು.

* ನೀವು ಪಾತ್ರಗಳಲ್ಲಿ ಅಭಿನಯಿಸಲು ಯಾವುದನ್ನು ಅನುಸರಿಸುತ್ತೀರಿ? 

ನನಗೆ ಯಾವುದೇ ಅನುಕರಣೆಯ ಅಗತ್ಯವಿಲ್ಲ. ಅಭಿನಯ ನನಗೆ ಸ್ವಾಭಾವಿಕವಾಗಿ ಬರುತ್ತದೆ. ಸ್ಕ್ರಿಪ್ಟ್ ಓದಿದ ನಿಮಿಷದಲ್ಲಿ, ಸಂಭಾಷಣೆಯನ್ನು ಹೇಗೆ ಹೇಳಬೇಕೆಂಬುದು ನನಗೆ ಬಂದು ಬಿಡುತ್ತದೆ. ಕೇವಲ ಒಂದು ಚಿತ್ರ, ಅದು ಮಹಾ ಶರಣ ಹರಳಯ್ಯದಲ್ಲಿ ನಾನು ಬಸವಣ್ಣನ ಪಾತ್ರ ನಿರ್ವಹಿಸುತ್ತಿದ್ದೆ. ಆ ಸಮಯದಲ್ಲಿ ಮಾತ್ರ ಬಸವಣ್ಣನವರ ವಿಚಾರ ಧಾರೆಗಳ ಬಗ್ಗೆ ಅನ್ವೇಷಣೆ ಮಾಡಬೇಕಾಗಿತ್ತು. ಇತಿಹಾಸದ ಮೇಲೆ ನಿಮರ್ಾಣಗೊಳ್ಳುವ ಚಿತ್ರಗಳಲ್ಲಿ ನಟಿಸಬೇಕಾದರೆ ಸಂಶೋಧನೆ ಹಾಗೂ ಪೂರ್ವಸಿದ್ಧತೆ ಅಗತ್ಯ. ಮಿಕ್ಕಿದ ಚಿತ್ರಗಳಲ್ಲಿ ಸಮಯ, ಸಂದರ್ಭವನ್ನರಿತು ನಟಿಸಬೇಕಾಗುತ್ತದೆ.

* ಪ್ರಶ್ನೆ: ಪ್ರಾದೇಶಿಕ ಚಿತ್ರ ಹಾಗೂ ಮಾತೃಭಾಷೆಯ ಬಗ್ಗೆ ನಿಮ್ಮ ಅಭಿಪ್ರಾಯ?

ರಮೇಶ ಅವರು ಮಾತೃಭಾಷೆ ನಮಗೆ ಎಲ್ಲರಿಗೂ ಸುಲಭವಾಗಿ ಲಭಿಸುವ ನಿಧಿ ಇದ್ದ ಹಾಗೆ. ಮಾತೃ ಭಾಷೆಯನ್ನು ಕರಗತ ಮಾಡಿಕೊಳ್ಳುವುದು ಜೀವನೋಪಾಯದ ಸಾಧನವಾಗಬಹುದು. ಇದು ನಿಮ್ಮ ಆದಾಯವನ್ನು ದ್ವಿಗುಣ ಗೊಳಿಸುತ್ತದೆ. ಇದು ಕೇವಲ ಮಾತೃಭಾಷೆಯ ಮೇಲಿನ ಅಭಿಮಾನವಷ್ಟೇ ಅಲ್ಲ, ಇದು ನಿಮ್ಮ ಜೀವನವನ್ನರಿತು ಕೊಳ್ಳಲು ಸಹ ಸಹಾಯಮಾಡುತ್ತದೆ ಎಂದು ಮಾತೃಭಾಷೆಯ ಮೇಲಿರುವ ಪ್ರೀತಿಯನ್ನು ರಮೇಶ ಅರವಿಂದ ಹೊರಹಾಕಿದರು.

 

User profile picture

ಸೋನಾಲಿ ದೇಸಾಯಿ