ಲಿಂಗಾಯತ ಧರ್ಮ ರಕ್ಷಣೆಗೆ ಯುವಕರು ಮುಂದಾಗಬೇಕು: ಓಲಿ ಮಠ ಆನಂದ ಸ್ವಾಮಿಜಿ
ಯಮಕನಮರಡಿ, 03 : ಸಮೀಪದ ಹತ್ತರಗಿ ಗ್ರಾಮದಲ್ಲಿ ದಿ 2ರಂದು ಹತ್ತರಗಿ ಗ್ರಾಮದ ಪರಮೇಶ್ವರ ದೇವಸ್ಥಾನದ ಯುವಕಮಿತ್ರರು ಆಯೋಜಿಸಿದ 893 ನೇ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಬಸವ ಜಯಂತಿ ಹಾಗೂ ಆದ್ಯಾತ್ಮಿಕ ಪ್ರವಚನಕ್ಕೆ ಜಮಖಂಡಿ ಓಲಿ ಮಠದ ಪೂಜ್ಯರಾದ ಆನಂದ ಮಹಾಸ್ವಾಮಿಗಳು ಆದ್ಯಾತ್ಮಿಕ ಪ್ರವಚನ ಉದ್ದೇಶಿಸಿ ಮಾತನಾಡುತ್ತಾ 12 ನೇ ಶತಮಾನದಲ್ಲಿ ಸಮಾನತೆಯ ಹರಿಕಾರ ಜಗಜ್ಯೋತಿ ಬಸವಣ್ಣನವರು ಲಿಂಗಾಯತ ದರ್ಮಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಲಿಂಗಾಯತ ದರ್ಮವನ್ನು ಜಾಗೃತಿಗೋಳಿಸಲು ಯಶಸ್ವಿಯಾಗಿದ್ದರು ಅಂತಹ ಪವಿತ್ರವಾದ ದರ್ಮವು ಇತ್ತಿಚಿನ ದಿನಗಳಲ್ಲಿ ಎಲ್ಲದರ್ಮಗಳು ಛಿದ್ರ ಛಿದ್ರವಾಗುತ್ತಿರುವುದು ನೋವಿನ ಸಂಗತಿಯಾಗಿದೆ ಕಾರಣ ಲಿಂಗಾಯತ ದರ್ಮ ರಕ್ಷಣೆ ಮಾಡಲು ಮುಂದಾಗವಬೇಕೆಂದು ಆನಂದ ಮಹಾಸ್ವಾಮಿಗಳು ಹೇಳಿದರು. ಅದರಂತೆ ಯಮಕನಮರಡಿ ಶೂನ್ಯ ಸಂಪಾದನಾ ಹುಣಸಿಕೊಳ್ಳಮಠದ ಪೂಜ್ಯರಾದ ಸಿದ್ದಬಸವ ದೇವರು ಬಸವಣ್ಣನವರ ಸಮಕಾಲಿನ ಆಚಾರ ವಿಚಾರಗಳನ್ನುೆಲ್ಲರೂ ಅಳವಡಿಸಿಕೊಂಡು ಪ್ರತಿಯೊಬ್ಬರು ಲಿಂಗದಿಕ್ಷೇ ಪಡೆಯಬೆಕೆಂದು ಹೆಳಿದರು. ಕಾರ್ಯಕ್ರಮದ ಧಿವ್ಯಸಾನಿದ್ಯವನ್ನು ಹತ್ತರಗಿ ಕಾರಿಮಠದ ಪೂಜ್ಯರಾದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಲಿಂಗಾಯತ ಧರ್ಮ ಕುರಿತು ಮಾರ್ಮಿಕ ವಾಗಿ ಮಾತನಾಡಿ ಯುವಕರು ದುಶ್ಚಟಗಳಿಂದ ದೂರವಿದ್ದು ದರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಹೆಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯುವಧುರಿಣರಾದ ರವೀಂದ್ರ ಜಿಂಡ್ರಾಳಿ ಆಗಮಿಸಿದ್ದರು. ಜಯಂತಿ ಅಂಗವಾಗಿ ಮಹಾಪ್ರಸಾದ ಆಯೋಜಿಸಲಾಗಿತ್ತು.