ದುಡಿಯೋಣ ಬಾ ಅಭಿಯಾನದ ನಿಮಿತ್ತ ಆಯೋಜಿಸಿದ್ದ ಮಹಿಳಾ ಕೂಲಿಕಾರರ ಕಾಮಗಾರಿ
ಗದಗ 5: ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದರವನ್ನು ಏಪ್ರಿಲ್ 1 ರಿಂದ 370 ರೂ. ಗೆ ಏರಿಕೆ ಮಾಡಲಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ದುಡಿಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಹಾಯಕ ನಿರ್ದೇಶಕರಾದ (ಉಖಾ) ಕುಮಾರ ಪೂಜಾರ ಅವರು ಸಲಹೆ ನೀಡಿದರು.
ಸೋಮವಾರ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನದ ನಿಮಿತ್ತ ಆಯೋಜಿಸಿದ್ದ ಮಹಿಳಾ ಕೂಲಿಕಾರರ ಕಾಮಗಾರಿ ಪರೀಶೀಲಿಸಿ ಅವರು ಮಾತನಾಡಿದರು.ಉದ್ಯೋಗ ಖಾತ್ರಿಯಲ್ಲಿ ಶೇ.50 ರಷ್ಟಿರುವ ಮಹಿಳಾ ಕೂಲಿಕಾರ್ಮಿಕರ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ. ಮಾತ್ರವಲ್ಲದೆ ಎಂದರು. ಮಹಿಳಾ ಸಬಲೀಕರಣವನ್ನು ನರೇಗಾ ಯೋಜನೆ ಮೂಲಕ ಕೈಗೊಳ್ಳುವುದು ಅಭಿಯಾನದ ಉದ್ದೇಶವಾಗಿದೆ. ಮಹಿಳೆ0ುರ ಅನಕೂಲಕ್ಕಾಗಿ ಕೂಸಿನ ಮನೆಯನ್ನು ತೆರೆಯಲಾಗಿದ್ದು. ಮೂರು ವರ್ಷದೊಳಗಿನ ಮಕ್ಕಳನ್ನು ಅಲ್ಲಿಗೆ ಸೇರಿ ಬಹುದಾಗಿದೆ ಎಂದರು. ಉದ್ಯೋಗ ಖಾತ್ರಿ ಗ್ರಾಮೀಣ ಭಾಗದ ಅಕುಶಲ ಕಾರ್ಮಿಕರ ಅಗತ್ಯತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಬೇಸಿಗೆಯಲ್ಲಿ ಕೂಲಿಕಾರ್ಮಿಕರಿಗೆ ಕೆಲಸದ ಅಭಾವವಿರುತ್ತದೆ. ಇದರ ಪರಿಹಾರಕ್ಕಾಗಿ ಉದ್ಯೋಗ ಖಾತ್ರಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ. ಇದರ ಸದ್ಬಳಕೆ ಎಲ್ಲ ಗ್ರಾಮೀಣರ ಕೈಯಲ್ಲಿ ಇದೆ. ಗ್ರಾಮೀಣ ಪ್ರದೇಶದ ಮಹಿಳೆ0ುರು ಸ್ವ-ಸಹಾ0ು ಸಂಘಗಳ ಮೂಲಕ ಒಟ್ಟಾಗಿ ಸೇರುವ ಪ್ರಯತ್ನವಾಗುತ್ತಿದೆ. ಇದೆ ಮಾದರಿಯಲ್ಲಿ ಮಹಿಳೆಯರೆಲ್ಲರೂ ಒಟ್ಟಾಗಿ ಸೇರಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಪಡೆದುಕೊಂಡು ಗ್ರಾಮೀಣ ಸಮುದಾಯ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ನಂತರ ಕೂಸಿನ ಮನೆಗೆ ಭೇಟಿ ನೀಡಿ ಆರೈಕೆದಾರರಿಗೆ ಮತ್ತು ಪಿಡಿಒ ಅವರಿಗೆ ಅಗತ್ಯ ಸಲಹೆ ಸೂಚನೆ ನೀಡಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಲೀಲಾ ಗೂಳಪ್ಪನವರ, ತಾಲೂಕು ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಟಿಎಇ ನವೀನ ಬಸರಿ, ಬಿಎಫಟಿ ಮೈಲಾರ್ಪ ಸೋಮನಕಟ್ಟಿ, ಜಿಕೆಎಂ ಪವಿತ್ರಾ ಯತ್ನಟ್ಟಿ, ಕಾಯಕ ಬಂಧುಗಳು ಇತರರಿದ್ದರು.