ಜಮಖಂಡಿ 02: ಮುಧೋಳ ತಾಲೂಕಿನ ಮುಗಳಖೊಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮ ಕೊಡ ಮಾಡುವ ರಾಜ್ಯ ಮಟ್ಟದ ಪ್ರಶಸ್ತಿಯಾದ ಗುರು ಸೇವಾ ರತ್ನ ಪ್ರಶಸ್ತಿಗೆ ಮುಧೋಳದ ಬಾಲಕರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಿವಯೋಗಿ ಮೆಲಿಕೇಂದ್ರ ಹಾದಿಮನಿ ಆಯ್ಕೆಯಾಗಿದ್ದಾರೆ. ಇಂದು ನಡೆಯಲಿರುವ ಅಖಿಲ ಭಾರತ ಸತ್ಸಂಗ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಸಿದ್ಧಾರೂಢ ಭಾರತಿ ಆಶ್ರಮದ ಆಡಳಿತ ಮಂಡಳಿಯವರು ಪ್ರಕಟನೆಗೆ ತಿಳಿಸಿದ್ದಾರೆ.