ಶಿರಗುಪ್ಪಿ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಾಧನೆ
ಕಾಗವಾಡ 03: ತಾಲೂಕಿನ ಶಿರಗುಪ್ಪಿ ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಈ ಬಾರಿ ಉತ್ತಮ ಫಲಿತಾಂಶದೊಂದಿಗೆ ಶಾಲೆ ಕೀರ್ತಿ ಹೆಚ್ಚಿಸಿದ್ದಾರೆ. ಕುಮಾರಿ ದಿವ್ಯಾ ನೀತೀನ ಪಾಟೀಲ 606 ಅಂಕಗಳೊಂದಿಗೆ ಶೇ. 96.96 ಪ್ರತಿಶತ ಪಡೆಯುವ ಮೂಲಕ ಶಾಲೆಗೆ ಪ್ರಥಮ. ಕುಮಾರ ಧರ್ಮರಾಜ ಸಚೀನ ಚೌಗುಲೆ, 601 ಅಂಕಗಳೊಂದಿಗೆ ಶೇ. 96.16 ಪ್ರತಿಶತದೊಂದಿಗೆ ದ್ವಿತೀಯ ಮತ್ತು ಕುಮಾರ ನಿಖಿಲ ಉದಯ ಮಹಾಡಿಕ 598 ಅಂಕಗಳೊಂದಿಗೆ ಶೇ. 95.68 ಪ್ರತಿಶತ ತೃತಿಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಒಟ್ಟು 48 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು 90+ ಅಂಕಗಳನ್ನು ಹಾಗೂ 9 ವಿದ್ಯಾರ್ಥಿಗಳು 80+ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಶಾಲೆಯ ಒಟ್ಟು ಫಲಿತಾಂಶ ಶೇ. 88 ಪ್ರತಿಶತ ಆಗಿದ್ದು, ಉತ್ತಮ ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಎಲ್ಲ ಶಿಕ್ಷಕರ ಅಭಿನಂದಿಸಿದ್ದಾರೆ.