ಬಿ ವಿ ಎಸ್‌ಗೆ ರೂಪಾ ಪ್ರಥಮ
ರನ್ನ ಬೆಳಗಲಿ 03: ರನ್ನ ಬೆಳಗಲಿಯ ಬಿಎಸ್ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 69.80 ಫಲಿತಾಂಶ ಬಂದಿದೆ. ರೂಪಾ ಹಳ್ಳೂರ 619(ಶೇ 99.04) ಪ್ರಥಮ, ಪಲ್ಲವಿ ಭದ್ರಶೆಟ್ಟಿ 615(ಶೇ 98.4)ದ್ವಿತೀಯ, ಪದ್ಮಾ ಸನಹಟ್ಟಿ 613 (ಶೇ 98) ತೃತೀಯ ಸ್ಥಾನ ಗಳಿಸಿದ್ದಾರೆ. ಡಿಸ್ಟಿಂಕ್ಷನ್ 32, ಪ್ರಥಮ ದರ್ಜೆ 50, ದ್ವಿತೀಯ ದರ್ಜೆ 28, ಸಾಮಾನ್ಯ ದರ್ಜೆ ಒಂದು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಮತ್ತು ಎಸ್ ಬಿ ರಡ್ದೆರಟ್ಟಿ ಅವರು ತಿಳಿಸಿದ್ದಾರೆ.