ಮಕ್ಕಳ ಪ್ರತಿಭೆ ಬಾಲ್ಯದಿಂದಲೇ ಗುರುತಿಸಿ: ಡಾ. ಪವಾರ

ಲೋಕದರ್ಶನವರದಿ

ರಾಣೇಬೆನ್ನೂರು29: ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಜೊತೆಗೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಬೇಕು  ಎಂದು ಡಾ|| ಎಸ್.ಎಲ್. ಪವಾರ ಹೇಳಿದರು. 

     ನಗರದ ಸ್ನೇಹಲೋಕ ಶಿಕ್ಷಣ ಸಂಸ್ಥೆಯ ಪರಿಣಿತಿ ವಿದ್ಯಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಾಲಾ ವಾಷರ್ಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವು ಮಕ್ಕಳಿಗೆ ತಿವಿತವಾಗದೆ ಹಿತಕರವಾದ ಅನುಭವವೆನಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಅಂಕ ಗಳಿಕೆಗಿಂತ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. 

    ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಕ್ರಾಂತ ಸಿ.ಎ. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆಯ ಸದಸ್ಯರು, ಶಿಕ್ಷಕ ವರ್ಗ ಉಪಸ್ಥಿತರಿದ್ದರು. ನಂತರ ನಡೆದ ಶಾಲಾ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಮತ್ತು ಪಾಲಕರ ಗಮನ ಸೆಳೆದವು.