ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ಶ್ಲಾಘನೀಯ: ನಡಹಳ್ಳಿ

Prime Minister Narendra Modi's work is commendable: Nadahalli

ಮುದ್ದೇಬಿಹಾಳ 02: ದೇಶಕ್ಕೆ ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಜನ ಗಣತಿ ಜತೆಯಲ್ಲಿ ಜಾತಿ ಗಣತಿ ನಡೆಸಲು ತಿರ್ಮಾನಿಸಿದ್ದು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೇಲೆಯಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸದ್ದಲ್ಲದೆ ದೇಶದ  ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ನಿರ್ಧಾರ ಮಾಡಲು ಮತ್ತು ಭವಿಷ್ಯದ ಅನೇಕ ನಿರ್ಧಾರಕ್ಕೆ ಇದು ಸಹಾಯಕವಾಗಿದೆ ಕಶಾರಣ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸುತ್ತೇನೆ ಎಂದು ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು. 

ಪಟ್ಟಣದ ತಮ್ಮ ದಾಸೋಹ ನಿಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿನರುವ ಹಲವು ವರ್ಷಗಳಿಂದ ಹಿಂದೂ ಸಮಾಜದಲ್ಲಿರುವ ಆರ್ಥಿಕ,  ಸಾಮಾಜಿಕ, ಶೈಕ್ಷಣಿಕ, ಅಸಮತೋಲನವನ್ನು ಸಂಪೂರ್ಣ ಕಿತ್ತೇಸೆದು ನಿಜವಾದ ಹಿಂದುಳಿದ ಹಿಂದೂ ಸಮಾಜ ಪ್ರತಿಯೊಬ್ಬ  ನಾಗರಿಕನಿಗೂ ಕೂಡ ದೇಶದ ಸಂವಿದಾನ ಬದ್ಧ  ಶೈಕ್ಷಣಿಕವಾಗಿ ಆರ್ಥಿಕವಾಗಿ, ಸಾಮಾಜಿಕ ವಾಗಿ, ರಾಜಕೀಯವಾಗಿ ಸಮನಾದ ಹಕ್ಕು ದೊರಕಿಸುವ ಮೂಲಕ ಸಶಕ್ತರನ್ನಾಗಿ ಮಾಡುವ ಉದ್ದೇಶದಿಂದ ಅಳೆದು ತೂಗಿ ಸಂಪೂರ್ಣ ವೈಜ್ಞಾನಿಕವಾದ  ಜಾತಿ ಗಣತಿ ನಡೆಸಲು ನಿರ್ಧರಿಸಿದ್ದು ಕೇಂದ್ರದ  ಈ ಮಹತ್ವದ ನಿರ್ಧಾರವನ್ನು ಇಡೀ ದೇಶದ ಜನರಿಗೆ ಖುಸಿಯನ್ನುಂಟು ಮಾಡಿದೆ ಮಾತ್ರವಲ್ಲದೇ  ಎಂಟನೂರು ವರ್ಷಗಳ ಹಿಂದೇ ಜಗಜ್ಯೋತಿ ಬಸವಣ್ಣನವರು ಜಾತಿ ಬೇದ ಲಿಂಗ ಬೇದ ಮಾಡದೆ ಸರ್ವ ಸಮಾಜಗಳನ್ನು ಒಗ್ಗೂಡಿಸಿ ಸಮಸಮಾಜಕ್ಕಾಗಿ ಹೋರಾಡಿದ ಬಸವಣ್ಣನವರ ಬಸವ ಜಯಂತಿ ದಿನದನ್ನು ಪ್ರದಾನಿ ನರೇಂದ್ರ ಮೋದಿಯವರು ಈ ನಿರ್ಣಯ ಕೈಗೊಂಡಿರುವುದಕ್ಕೆ  ನಾನು ಸ್ವಾಗತಿಸುತ್ತೇನೆ. 

ಕಳೇದ 60 ವರ್ಷಗಳಿಂದ ದೇಶದಲ್ಲಿ ಕಾಂಗ್ರೇಸ್ ಪಕ್ಷ ಜಾತಿ ವ್ಯವಸ್ಥೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿತು ಮಾತ್ರವಲ್ಲದೇ ಜಾತಿ ಉಪಜಾತಿಗಳ ಸಮೀಕ್ಷೆ ನೆಪದಲ್ಲಿ ಹಿಂದೂ ಹಿಂದೂಗಳಲ್ಲಿ ಒಡಕನ್ನು ಸೃಷ್ಠಿಸುವ ಮೂಲಕ ಕುತಂತ್ರ ಬುದ್ಧಿಯನ್ನು ಪ್ರಯೋಗಿಸಿದೆ. 1881 ರಲ್ಲಿ ಬ್ರೀಟಿಷರು ಜನ ಗಣತಿ ನೆಪದಲ್ಲಿ ಜಾತಿ ನಡೆಸಿ ನಮ್ಮ ನಮ್ಮೋಳಗೆ ಇದ್ದ ಹಿಂದೂಗಳ ಒಗ್ಗಟ್ಟು ಮುರಿಯುವ ತಂತ್ರ ರೂಪಿಸಿದ್ದರೂ. ನಂತರ 1931 ರಲ್ಲಿ ಮತ್ತೋಮ್ಮೇ ಜಾತಿ ಗಣತಿ ನಡೆಸುವ ಮೂಲಕ ಒಡೆದಾಳುವ ನೀತಿ ಅನುಸರಿಸದ್ದಲ್ಲದೇ ತಮ್ಮ ಆಡಳಿತ ನಡೆಸಲು ಬಳಸಿಕೊಂಡರು ಎಂಬುದು ಇತಿಹಾಸವೇ ಸಾಕ್ಷೀಯಾಗಿದೆ. ಅದಾದ ನಂತರ ಭಾರತ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರೆತ ಬಳಿಕ ಹಿಂದೂ ಸಮಾಜದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ನಡೆಯುತ್ತಿರುವ ನಿರಂತರ ಧೌರ್ಜನ್ಯ ಹಾಗೂ ಅನ್ಯಾಯದ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಾಣದ ಗುರಿ ಹೊಂದಿದ ಸಂವಿದಾನ ಶಿಲ್ಪಿ ಡಾ, ಬಿ ಆರ್ ಅಂಬೇಡ್ಕರವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮಾತ್ರ ಜನಗಣತಿಯಲ್ಲಿ ಜಾತಿ ಗಣತಿ ಮಾಡಲು ಅವಕಾಶ ನೀಡುವ ಮೂಲಕ ಸಂವಿದಾನ ಬದ್ಧ ಹಕ್ಕು ನೀಡಿಲಾಯಿತು. ಆದರೇ ಭಾರತದ ಪ್ರಥಮ ಪ್ರಧಾನಿ ಜವಾಹಾರಲಾಲ್ ನೇಹರುರವರು ಈ ಹಕ್ಕನ್ನು ವಿರೋಧಿಸಿದರು ಮಾತ್ರವಲ್ಲದೇ ಕಾಂಗ್ರೇಸ್ಸಿನ ಮುಖಂಡರು ಪ್ರತಿಪಾದನೆ ಮಾಡಿದರು 1961 ರವರೆಗೆ  ಇನ್ನುಳಿದ ಹಿಂದುಳಿದ ವರ್ಗಗಳಿಗೆ ಸಬಲಿಕರಣಕ್ಕೂ ಕೂಡ ಅವಕಾಶ ನೀಡಲಿಲ್ಲ ಕಾರಣ ದೇಶದ ಏಕತೆ ಅವರಿಗೆ ಇಷ್ಟವಿರಲಿಲ್ಲ ಜತೆಗೆ ಮಂಡಲ ಕಮಿಷ ವರದಿಗೂ ಕೂಡ ಅನುಮತಿಗೆ ಒಪ್ಪಲಿಲ್ಲ ಆದರೇ ಮುಂದೆ ವಿ ಪಿ ಸಿಂಗ್ ಅವರು ಪ್ರಧಾನ ಮಂತ್ರಿಗಳಾದ ಸಂದರ್ಭದಲ್ಲಿ ಮಂಡಲ ಕಮೀಷನ್ ವರದಿ ಬಿಲ್ಲ ಪಾಸ ಮಾಡಲಾಯಿತು ಜತೆಗೆ ಶೇಕಡಾ 27ರಷ್ಟು ಹಿಂದೂಳಿದ ವರ್ಗಗಳ ಕಲ್ಯಾಣಕ್ಕೆ ಮೀಸಲಾತಿ ನೀಡಲು ಅನುಷ್ಠಾನ ತರಲಾಯಿತು ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ. 

ಕಾಂಗ್ರೇಸ್ ಪಕ್ಷ ಜಾತಿಯಾಧಾರಿತ ಗಣತಿಯನ್ನು ಯಾವಾಗಲೂ ವಿರೋಧಿಸುತ್ತಲೆ ಬಂದಿದೆ ಆದರೇ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ದೇಶದ ಹಿಂದೂಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿಗೆ ಒತ್ತು ನೀಡಿದರು. 2010ರಲ್ಲಿ ಡಾ, ಮನಮೋಹರಸಿಂಗ್ ಪ್ರಧಾನಿಯವರ ನೇತ್ರತ್ವದಲ್ಲಿ 2011 ರಲ್ಲಿ ಜನ ಗಣತಿ ಜತೆಗೆ ಜಾತಿಗಣತಿ ನಡೆಸಲಾಗುವುದು ಎಂದು ತಿರ್ಮಾನಿಸಿ ಗಣತಿಯನ್ನು ನಡೆಸಲಾಯಿತು ಆದರೇ ಕಾಂಗ್ರೇಸ್ ಸರಕಾರ ಜಾತಿಯಾದಾರಿತ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ದತ್ತಾಂಶವನ್ನು ಬಿಡುಗಡೆ ಗೊಳಿಸದೇ ಹಿಂದೂ ಸಮಾಜಕ್ಕೆ ಬಹುದೊಡ್ಡ ದ್ರೋಹ ಮಾಡಿತು. ಇತ್ತಿಚಿಗೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ ಕಾಂಗ್ರೇಸ್ ಸರಕಾರ ಜಾತಿ ಸಮೀಕ್ಷೆ ನಡೆಸುವ ಹೆಸರಲ್ಲಿ ತಮ್ಮ ರಾಜಕೀಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಮೀಕ್ಷೆ ನಡೆಸುವ ಮೂಲಕ ಅಲ್ಪ ಸಂಖ್ಯಾತರ ತುಷ್ಠಿಕರಣ ಹಾಗೂ ಹಿಂದೂ ಸಮಾಜಗಳನ್ನು ಒಡೆದು ರಾಜಕೀಯವಾಗಿ ಬಳಸಿಕೊಳ್ಳುವ ಉದ್ದೇಶಹೊಂದೆ. ಆದರೇ ಅವೈಜ್ಞಾನಿಕ ಜಾತಿ ಸಮೀಕ್ಷೆಯಿಂದ ನಿಜವಾದ ಹಿಂದೂಳಿದ ಸಮಾಜಗಳಿಗೆ ನ್ಯಾಯಕೊಡಲು ಸಾಧ್ಯವಿಲ್ಲ ಆದರೇ ವೈಜ್ಞಾನಿಕ ಜಾತಿಗಣತಿಯಿಂದ ಮಾತ್ರ ಹಿಂದೂಳಿದ ಸಣ್ಣ ಅತಿ ಸಣ್ಣ ವರ್ಗಗಳನ್ನು ಗುರ್ತಿಸಿ  ಶೈಕ್ಷಣಿಕ, ಆರ್ಥಿಕ, ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ ಆದರೇ ಅದನ್ನು ಕಾಂಗ್ರೇಸ್ ತಿರುಚಿ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ.  

ಕಾಶ್ಮೀರದ ಪಲಹ್ಗಾಮನಲ್ಲಿ 26 ಪ್ರವಾಸಿಗರ ಮೇಲೆ ಉಗ್ರವಾದಿಗಳು ಗುಂಡಿನ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ರಾಮಯ್ಯನವರು ಇವರೇನು ಭಾರತದವರೂ ಪಾಕಿಸ್ಥಾನಿಗಳಾ ಎಂಬ ಸಂಶಯ ವ್ಯಕ್ತವಾಗುವುವಂತೆ ಮಾಡಿದ್ದರು ಆದರೇ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿರುವ ಜನಗಣತಿ ಜತೆಗೆ ಜಾತಿ ಗಣತಿ ನಡೆಸುವ ತಿರ್ಮಾನಕ್ಕೆ ರಾಹುಲ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ರಾಮಯ್ಯನವರು ಸ್ವಾಗತಿದ್ದು ಒಳ್ಳೆಯ ವಿಚಾರ ಆದರೇ ಮುಂದೆ ಯಾರ ರೀತಿ ಈ ಕಾಂಗ್ರೇಸ್ ನಾಯಕರ ಬದಲಾಗುತ್ತಾರೆ ಎಂಬುದನಬ್ನು ಕಾದು ನೋಡಬೇಕಷ್ಟೇ. ಸದಾ ಉಗ್ರರ ಅಟ್ಟಹಾಸದಿಂದ ಕಂಗೆಟ್ಟಿದ ಜಮ್ಮು ಕಾಶ್ಮೀರದಲ್ಲಿ ವಿಶೇಷ ಕಾಯ್ದೆ ತರುವ ಮೂಲಕ ಅಲ್ಲಿನ ಜನರು ನೆಮ್ಮದಿಯಿಂದ ಜೀಚವನ ನಡೆಸುವಂತೆ ಮಾಡಿದ್ದರಿಂದ ಮೊನ್ನೆ ಅಚಾತುರ್ಯದಿಂದ ನಡೆದ ಉಗ್ರರ ದಾಳಿ ಘಟನೆಯನ್ನು ಅಲ್ಲನ ಮುಖ್ಯಮಂತ್ರಿ ಮಹಮ್ಮದವರು ಇಡಿ ದೇಶದ ಜನ ಮನಕಲಕುವಂತೆ ಮಾತನಾಡಿದ್ದಾರೆ ಮಾತ್ರ ಅಲ್ಲಿನ ಬಹುತೇಕ ಎಲ್ಲ ಮುಸ್ಲಿಂ ಬಾಂಧವರು ಕೂಡ ಈ ಉಗ್ರರ ಕೃತ್ಯವನ್ನು ಸಂಪೂರ್ಣ ವಿರೋಧಿಸಿದ್ದು ಮಾತ್ರವಲ್ಲದೇ ಪ್ರದಾನಿ ಮೋದಿಯವರೆ ನಾವು ನಿಮ್ಮ ಜೊತೆಗಿದ್ದೇವೆ ಪಾಕಿಸ್ಥಾನದ ಭಯೋತ್ಪಾದಕತೆಯನ್ನು ಹುಟ್ಟಡಗಿಸಲು ಸದಾ ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಬೀದಿಗಳಿದು ಹೋರಾಟ ನಡೆಸಿದ್ದೂ ಕೂಡ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಈ ದೇಶದಲ್ಲಿರುವ ಪ್ರತಿಯೊಬ್ಬ ಮುಸ್ಲೀರೂ ಕೂಡ ಈಕೃತ್ಯವನ್ನು ಬೀದಿಗಳಿದು ವಿರೋಧಿಸಬೇಕು ಅಂದಾಗ ಮಾತ್ರ ದೇಶದಲ್ಲಿ ಏಕತೆ ಮತ್ತು ಒಗ್ಗಟ್ಟು ಪ್ರದರ್ಶನಕ್ಕೆ ಶಕ್ತಿ ತುಂಬಿದಂತಾಗುತ್ತದೆ ಎಂದರು. ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ರಾಮಯ್ಯನವರು ಸೇರಿದಂತೆ ಸಚಿವ ಸಂತೋಷ ಲಾಡ್, ಬಿ ಕೆ ಹರಿಪ್ರಸಾದ, ಆರ್ ಬಿ ತಿಮ್ಮಾಪೂರ ಮಾತುಗಳನ್ನು ಮುಸ್ಲೀಮ್ ಬಾಂಧವರು ಕೇಳಬೇಡಿ, ಸಧ್ಯ ರಾಜ್ಯದಲ್ಲಿ ಇಡಿ ದೇಶದಲ್ಲಿ ಕಾಂಗ್ರೇಸ್ ಪಕ್ಷ ಭಾರತದ್ದಾಗಿಲ್ಲ ಪಾಕಿಸ್ಥಾನ ಕಾಂಗ್ರೇಸ್ ಪಕ್ಷವಾಗಿದೆ ಎಂದರು. ಮುಖ್ಯಮಂತ್ರಿ ಸಿದ್ರಾಮಯ್ಯನವರಂತಹ ಹಿರಿಯರು ಹೇಳಿಕೆ ನೀಡುತ್ತಿರುವುದು ದೇಶದ್ರೋಹದ ಹೇಳಿಕೆಯಾಗುತ್ತದೆ ಎಂಬುದನ್ನು ಆಲೋಚಿಸಬೇಕು. 

ತಾಲೂಕಾ ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಮುನ್ನಾ ಧಣಿ ನಾಡಗೌಡ, ಹರೀಷ ನಾಟಿಕಾರ, ಶಂಕರಗೌಡ ಶಿವಣಗಿ, ಪ್ರಭು ಕಡಿ, ಪರುಶುರಾಮ ಮುರಾಳ, ಎಂ ಆರ್ ಪಾಟೀಲ, ಸೋಮನಗೌಡ ಪಾಟೀಲ, ರಾಜು ಬಳ್ಳೋಳಿ, ಅಶೊಕ ಚಿನಿವಾರ, ಎಂ ಆರ್ ಪಾಟೀಲ, ಹಣಮಂತ ನಲವಡೆ, ರಾಜಶೇಖರ ಹೊಳಿ, ಪುನಿತ ಹಿಪ್ಪರಗಿ, ಕಾವೇಋರಿ ಕಂಬಾರ, ಪ್ರಥಿ ಕಂಬಾರ, ಕೆಂಚಪ್ಪ ಬಿರಾದಾರ, ನಾಗರಾಜ ಕವಡಿಮಟ್ಟಿ, ಅಶೊಕ ರಾಠೋಡ, ಲಕ್ಷ್ಮಣ ಬಿಜ್ಜೂರ, ಸಂಜು ಬಾಗೇವಾಡಿ ಸೇರಿದಂತೆ ಹಲವರು ಇದ್ದರು.