ಹೊಸ ಕಲಾವಿದರಿಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ: ಚಲನಚಿತ್ರ ಸಾಹಿತಿ ಡಾ,ಎಂ.ಮಲ್ಲನಗೌಡ್ರ

New artists need audience encouragement: Film writer Dr. M. Mallanagoudra

ಕೊಪ್ಪಳ 02: ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹೊಸ ಹೊಸ ಕಲಾವಿದರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ ಅವರ ಕಲೆ ಪ್ರತಿಭೆಗಳಿಗೆ ಪ್ರೇಕ್ಷಕರಾದ ನಾವುಗಳು ಪ್ರೋತ್ಸಾಹಿಸಬೇಕು ಪ್ರೇಕ್ಷಕರ ಸಹಕಾರ ಮತ್ತು ಪ್ರೋತ್ಸಾಹ ಅಗತ್ಯವಾಗಿದೆ ಎಂದು ಕೊಪ್ಪಳದ ಚಲನಚಿತ್ರ ಸಾಹಿತಿ ನಿರ್ಮಾಪಕ ಡಾ, ಎಂ.ಮಲ್ಲನಗೌಡ್ರು ಹೇಳಿದರು. 

 ಅವರು ಶುಕ್ರವಾರ ನಗರದ ಶಾರದಾ ಚಿತ್ರಮಂದಿರದಲ್ಲಿ ತೆರೆ ಗೊಂಡಿರುವ ಫೈಜು ಮತ್ತು ಹುಂಜ ಎಂಬ ಕನ್ನಡ ಚಲನಚಿತ್ರ ಪ್ರದರ್ಶನದ ವೇಳೆ ಪಾಲ್ಗೊಂಡು ಹೊಸ ಚಿತ್ರಗಳಿಗೆ ಹೊಸ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಅವರು ಶುಭ ಕೋರಿದರು, ಉತ್ತರ ಕರ್ನಾಟಕ ಭಾಗದ ಚಲನಚಿತ್ರ ನಿರ್ಮಾಪಕ ನಿರ್ದೇಶಕ ಕೊಪ್ಪಳದ ಬಸವರಾಜ್ ಕೊಪ್ಪಳ ರವರು ಕನ್ನಡ ಚಿತ್ರ ಗಳಲ್ಲಿರುವ ಉತ್ತಮ ಸಂದೇಶ ನಾವು ಅಳವಡಿಸಿಕೊಳ್ಳಬೇಕು ಉತ್ತಮ ಸಂದೇಶ ಸಾರುವ ಚಿತ್ರಗಳಿಗೆ ಪ್ರೇಕ್ಷಕರು ಚಿತ್ರ ನೋಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು, 

 ಈ ಸಂದರ್ಭದಲ್ಲಿ ಚಿತ್ರಮಂದಿರದ ವ್ಯವಸ್ಥಾಪಕ ಶಿವು ಅಗಡಿ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.