ಮೇ 3ರಿಂದ 7ರವರೆಗೆ ಮಾಟ ಬಸವಣ್ಣ ಯಾತ್ರಾ ಮಹೋತ್ಸವ

Mata Basavanna Yatra Festival from May 3rd to 7th

ಯಮಕನಮರಡಿ, 01 : ಹುಕ್ಕೇರಿ ತಾಲೂಕಿನ ಗಡಿ ಬಾಗದಲ್ಲಿರುವ ಉ ಖಾನಾಪುರ ಪುಣ್ಯ ಕ್ಷೇತ್ರದ ಶ್ರೀ ಮಾಟ ಬಸವೇಶ್ವರ ಯಾತ್ರಾ ಮಹೋತ್ಸವವು 5 ದಿನಗಳವರೆಗೆ ಜರುಗುವ ಯಾತ್ರಾ ಮಹೋತ್ಸವವು ಶ್ರೀ ಪ ಪೂ ಷ ಬ್ರ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬ್ರಹನ್ಮಠ ಉ-ಖಾನಾಪುರ ಇವರ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ

 ಶ್ರೀ ಮಾಟ ಬಸವಣ್ಣ ಭಕ್ತರ ಅಪೇಕ್ಷೇಯ ಮೇರೆಗೆ ದಿ3 ರಂದು ಮುಂಜಾನೆ ದ್ವಜಾರೋಹಣ, ಜ್ಯೋತಿ ಆಗಮನ ಹಾಗೂ ಕಳಶದ ಮೇರವಣಿಗೆ ಅದೇ ದಿವಸ ಸಾಯಂಕಾಲ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಮ.ನಿ.ಪ್ರ ಜಗದ್ಗುರು ಪಂಚಮ ಶೀವಲಿಂಗಮಹಾಸ್ವಾಮಿಗಳು ಸಿದ್ದಸಂಸ್ಥಾನ ಮಠ ನಿಡಸೋಸಿ ಇವರು ವಹಿಸಲಿದ್ದು ಅಧ್ಯಕ್ಷತೆಯನ್ನು ಮನಿಪ್ರ ಗುರುಸಿದ್ದ ಮಹಾಸ್ವಾಮಿಗಳು ಕಾರಂಜಿಮಠ ಬೆಳಗಾವಿ, ನೇತೃತ್ವ ಮ.ನಿ.ಪ್ರ ಶಿವಾನಂದ ವಮಹಾಸ್ವಾಮಿಗಳು ವೀರಕ್ತಮಠ ಬೆಲ್ಲದ ಬಾಗೆವಾಡಿ ಸಮ್ಮುಖ ಮ.ನಿ.ಪ್ರ ಅಡವಿ ಸಿದ್ದೇಶ್ವರ ಮಹಾಸ್ವಾಮಿಗಳು ಅಡವಿ ಸಿದ್ದೇರ್ಶವರ ಮಠ ಸುರಪೂರ ಕೇರವಾಡ ಹಿಡಕಲ್ ಹಾಗೂ ಪ.ಪೂ ಶ್ರೀ ಮಲ್ಲಿಕಾರ್ಜುನ ದೇವರು ಓಂ ಗೂರೂಜಿ ಸುಕುಮಾರ ಯೋಗಾಶ್ರಮ ಕಿತ್ತೂರ ವಿಶೇಷ ಆಮಂತ್ರಿತರಾಗಿ ಪೂಜ್ಯರು ಶ್ರೀ ಅನ್ನದಾನ ಶಾಸ್ರ್ತಿಗಳು ಹಿರೆಮಠ ಇಳಕಲ್ ಮತ್ತು ಪ.ಪೂ ಗವಿಸಿದ್ದೇಶ್ವರ ಅಪ್ಪಾಜಿ ಗವಿಮಠ ಬಸ್ಸಾಪುರ ಅದರಂತೆ ವಿಶೇಷ ಆಮಂತ್ರಿತರಾಗಿ ಸನ್ಮಾನ್ಯ ಸತೀಶ ಲ ಜಾರಕಿಹೊಳಿ ಲೋಕೊಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಅದರಂತೆ ಸನ್ಮಾನ್ಯ ಮಾಜಿ ಸಂಸದರಾದ ರಮೇಶ ವ್ಹಿ ಕತ್ತಿ ಆಗಮಿಸಲಿದ್ದು ರಾತ್ರಿ 10.30 ಕ್ಕೆ ಉ-ಖಾನಾಪುರ ಗ್ರಾಮದ ಸಕಲ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ.