ಜನರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 13 ರಂದು ಬೆಳಗಾವಿಯ ಸುರ್ವಣಸೌಧ ಮುಂದೆ ಬೃಹತ್ ಪ್ರತಿಭಟನೆ-ಇಮ್ತಿಯಾಜ ಮಾನ್ವಿ
ಗದಗ-10 : ರಾಜ್ಯದಲ್ಲಿರುವ ಸ್ಲಂ ಜನರಿಗೆ ಹಕ್ಕುಪತ್ರ ವಿತರಣೆ ಮತ್ತು ಇದರ ನೋಂದಣೆ ಕಾರ್ಯ ಚುರುಕಗೊಳಿಸಿ ಇ.ಖಾತಾ ನೀಡಲು, ಖಾಸಗಿ ಭೂ ಮಾಲಿಕತ್ವದಲ್ಲಿರುವ ಸ್ಲಂ ಪ್ರದೇಶಗಳ ಘೋಷಣೆ, ಮುಂಬರುವ 2025-2026 ಸಾಲಿನ ರಾಜ್ಯದ ಬಜೇಟನಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆ ಅನುಗುಣವಾಗಿ ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗೆ ಅನುದಾನ ನೀಡಲು, ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಡಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸ್ಲಂ ಜನರ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ವಸತಿ ಇಲಾಖೆ ಸಚಿವ ಹಾಗೂ ಕಾರ್ಯದರ್ಶಿಯನ್ನು ಕೈಬಿಟ್ಟು ವಸತಿಯಲ್ಲಿ ಅನುಭವ ಇರುವ ಸಚಿವರನ್ನು ನೇಮಕ ಮಾಡಲು ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯಿಂದ 13-12-2024 ರಂದು ಬೆಳಗಾವಿಯ ಸುರ್ವಣ ಸೌಧ ಮುಂದೆ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಕುರಿತು ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಪತ್ರಿಕಾ ಗೋಷ್ಠಿ ನಡೆಸಲಾಗಿದೆ, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ ಆರ್ ಮಾನ್ವಿ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯಾದ್ಯಾಂತ ಬಿಬಿಎಂಪಿ ಸೇರಿದಂತೆ, ಮಹಾನಗರ ಪಾಲಿಕೆ, ನಗರ ಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 709ಕ್ಕೂ ಹೆಚ್ಚು ಸ್ಲಂಗಳು ಖಾಸಗಿ ಒಡೆತನದಲ್ಲಿದ್ದು ಅಂದಾಜು 1.5ಲಕ್ಷ ಸ್ಲಂ ನಿವಾಸಿಗಳ ಕುಟುಂಬಗಳು ಕಳೆದ 50 ವರ್ಷಗಳಿಂದ ತಮ್ಮ ಸುಸ್ಥಿರವಾದ ಜೀವನವನ್ನು ನಗರಗಳಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಖಾಸಗಿ ಗುಡಿಸಲು ಪ್ರದೇಶಗಳನ್ನು ಗುರುತಿಸಿ ರಾಜ್ಯ ಸರ್ಕಾರ ತಕ್ಷಣ ಸ್ಲಂ ಕಾಯ್ದೆ 1973 ರ ಪ್ರಕಾರ ಘೋಷಣೆ ಮಾಡಿ ಸ್ಥಳೀಯ ನಿವಾಸಿಗಳಿಗೆ ನಾಗರಿಕರ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು, 2023 ಸೆಪ್ಟಂಬರ್‌ನಲ್ಲಿ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕರ್ನಾಟಕ ರಾಜ್ಯಾದ್ಯಾಂತ, ಕರ್ನಾಟಕ ಕೊಳಚೆ ಪ್ರದೇಶಗಳ, ಅಭಿವೃದ್ಧಿ ಮತ್ತು ನಿರ್ಮೂಲನೆ ಕಾಯಿದೆ 1973ರ ಸೆಕ್ಷನ-3ರಡಿ ಮತ್ತು 11ರಡಿಯಲ್ಲಿ ಖಾಸಗಿ ಭೂ ಮಾಲೀಕತ್ವದ ಸ್ಲಂಗಳನ್ನು “ಕೊಳಚೆ ಪ್ರದೇಶ”ವೆಂದು ಘೋಷಣೆ ಮಾಡುವಾಗ ಸರ್ಕಾರದ ಅನುಮೋದನೆ ಪಡೆದು ತದನಂತರ ಘೋಷಣೆಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಹೊರಡಿಸಿದ 2 ವರ್ಷಗಳಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡುವುದನ್ನೇ ನಿಲ್ಲಿಸಿದೆ. 1973ರ ಕರ್ನಾಟಕ ಕೊಳಚೆ ನಿರ್ಮೂಲನ ಮತ್ತು ಮೇಲ್ಪಾಟು ಕಾಯಿದೆ ಕಲಂ 3ರಲ್ಲಿ ಉಲ್ಲೇಖಿಸಿರುವಂತೆ ನಗರ ಪ್ರದೇಶದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮತ್ತು ಮನುಷ್ಯ ವಾಸ ಯೋಗ್ಯವಲ್ಲದ ಅಥವಾ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುವ ಯಾವುದೇ ಜನವಸತಿ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಆದ್ದರಿಂದ ಈ ಸುತ್ತೋಲೆ ಸಂವಿಧಾನ ಬದ್ಧವಾಗಿ ಜಾರಿಯಾಗಿರುವ ಸ್ಲಂ ಕಾಯಿದೆಗೆ ವಿರುದ್ಧವಾಗಿದೆ. ಆದ್ದರಿಂದ ಬೇರೆಲ್ಲ ಉದ್ದೇಶಗಳಿಗೆ ಸಾವಿರಾರೂ ಕೋಟಿ ರೂಗಳನ್ನು ಭೂ ಸ್ವಾಧೀನಕ್ಕೆ ನೀಡುವ ಸರ್ಕಾರ ಸ್ಲಂ ನಿವಾಸಿಗಳ ಭೂಸ್ವಾಧೀನಕ್ಕೆ ಹಣ ನೀಡುತ್ತಿಲ್ಲ. ಹಾಗಾಗಿ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶದ ಘೋಷಣೆಗೆ ತೊಡಕಾಗಿರುವ ಸುತ್ತೋಲೆಯನ್ನು ಈ ಕೂಡಲೇ ಸಾರ್ವಜನಿಕ ಹಿತದೃಷ್ಠಿಯಿಂದ ಹಿಂಪಡೆಯಬೇಕೆಂದು ಆಗ್ರಹಿಸಿದರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸ್ಲಂ ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು, ಗದಗ ಜಿಲ್ಲಾ ಸ್ಲಂ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ಮೌಲಾಸಾಬ ಗಚ್ಚಿ, ಮಕ್ತುಮಸಾಬ ಮುಲ್ಲಾನವರ, ಮಂಜುನಾಥ ಶ್ರೀಗಿರಿ, ಖಾಜಾಸಾಬ ಇಸ್ಮಾಯಿಲನವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.