ಲೋಕದರ್ಶನ ವರದಿ
ರಸ್ತೆ ಡಾಂಬರಿಕರಣ ಕಾಮಗಾರಿಗಿ ಚಾಲನೆ ನೀಡಿದ ಶಾಸಕರಾದ ರಾಜು ಕಾಗೆ
ಸಂಬರಗಿ, 05 : ಗಡಿ ಗ್ರಾಮಗಳಲ್ಲಿ ನೀರಾವರಿ ರಸ್ತೆ, ಶಾಲಾ ಕೊಠಡಿ ಸೇರಿದಂತಹ ಹಲವಾರು ಕಾಮಗಾರಿ ಕೈಗೊಂಡಿದ್ದು, ಬರಗಾಲ ಪೀಡಿತ ಗ್ರಾಮಗಳಿಗೆ ಜುಲೈ ತಿಂಗಳ ಒಳಗಾಗಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಎರಡನೇ ಹಂತದ ನೀರು ಸರಬರಾಜು ಹಾಗೂ ಕೆರೆ ತುಂಬುವ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ ಹೇಳಿದರು.
ಜಂಬಗಿ ಗ್ರಾಮದಲ್ಲಿ ಜಂಬಗಿ-ಶಿವನೂರ ರಸ್ತೆ ಡಾಂಬರಿಕರಣ ಕಾಮಗಾರಿ ಚಾಲನೆ ನೀಡಿ ಮಾತನಾಡಿ ಅವರು ಚುನಾವಣೆಯಲ್ಲಿ ಹೇಳಿದ ಪ್ರಕಾರ ನಾನು ಅಭಿವೃದ್ಧಿ ಮಾಡತ್ತಿದ್ದೆನೆ. ಯಾವುದೇ ಪಕ್ಷಪಾತ ಇಲ್ಲದೆ ಕೆಲಸ ನಡೆಯುತ್ತಿದೆ. ಈ ರಸ್ತೆಗೆ 25 ಲಕ್ಷ ರೂ. ಅನುದಾನ ಮಂಜುರಾತಿ ಆಗಿದ್ದು, ಒಳ್ಳೆಯ ಗುಣಮಟ್ಟದ ರಸ್ತೆ ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿ ಮಾತನಾಡಿ ಅವರು ಈಗಾಗಲೆ ಮಹಾರಾಷ್ಟ್ರದ ಗಡಿಯ ವರೆಗೆ ಕರ್ನಾಟಕ ಸಂಪರ್ಕ ರಸ್ತೆಗಳು ಡಾಂಬರಿಕರಣ ಮಾಡಲಾಗಿದೆ. ಆದ ಕಾರಣ ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿಸಲು ಈಗಾಗಲೇ ಕರ್ನಾಟಕ ಸರಕಾರದ ವತಿಯಿಂದ ಮಹಾರಾಷ್ಟ್ರದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅದೇ ಪ್ರಕಾರ ಅಗ್ರಾಣಿ ನದಿಗೆ ತಾಕಾರಿ-ಮಹಿಶಾಳ ಕಾಲುವೆ ಕರ್ನಾಟಕದ ಗಡಿಯಿಂದ ಜತ್ತ ಹಾಗೂ ಸಾಂಗೋಲಾಕ್ಕೆ ಹೋಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಅವರು ಮಾನವಿಯತೆಯ ದೃಷ್ಟಿಯಿಂದ ನೀರು ಹರಿಸಬೇಕೆಂದು ಅವರು ವಿನಂತಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಬದ್ಧವಾಗಿದ್ದೇನೆ. ಜನರ ಸಮಸ್ಯೆ ಪರಿಹಾರಗೊಳಿಸುವುದು ನಮ್ಮ ಜವಾಬ್ದಾರಿ. ಎಲ್ಲರ ಸಹಕಾರದಿಂದ ಕ್ಷೇತ್ರವು ಅಭಿವೃದ್ಧಿಯಲ್ಲಿ ಮುಂಚುನೆಯಲ್ಲಿದೆ.
ಈ ವೇಳೆ ಕಾಂಗ್ರೇಸ್ ಮುಖಂಡ ವಿನಾಯಕ ಬಾಗಡಿ, ಗ್ರಾಮ ಪಂಚಾಯತ ಅಧ್ಯಕ್ಷ ರವಿ ವಾಘಮಾರೆ, ಪಿ.ಕೆ.ಪಿ.ಎಸ್. ಅಧ್ಯಕ್ಷರಾದ ರಾಜೇಂದ್ರ ಪಾಟೀಲ, ರಾವುಬಾ ಸಂಕಪಾಳ ಪಾಟೀಲ, ಜಿಲ್ಲಾ ಪಂಚಾಯತ ಅಭಿಯಂತರರಾದ ವೀರಣ್ಣ ವಾಲಿ, ಬಸು ಮಾಳಿ, ಪ್ರಕಾಶ ಜಾಧವ, ಮೋಹನ ರಣದೇವಿ, ಪೀನು ಸೋನಕರ, ಗೋಪಾಲ ಕೋಳೆಕರ, ಬಾಬುಜಿ ಪೂಜಾರಿ, ಅನಿಕೇತ ಪಾಟೀಲ, ಬಂಡು ಸೂರ್ಯವಂಶಿ, ಗುತ್ತಿಗೆದಾರರು ಶಿವಾನಂದ ಭುಯಿವಡ್ಡರ, ವಾಯ್.ಆರ್. ಪಾಟೀಲ, ಸೇರಿಂದತಹ ಕಾರ್ಯಕರ್ತರು ಮುಖಂಡರು ಉಪಸ್ಥಿತ ಇದ್ದರು.
ಬಾಕ್ಸ್: ಸಚೀವರಾದ ಶಿವಾನಂದ ಪಾಟೀಲ ರಾಜಿನಾಮೆ ನೀಡಿ ಚುನಾವಣೆಗೆ ಸೆಡ್ಡು ಹೊಡೆದಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜಿನಾಮೆ ನೀಡಿ ಚುನಾವಣೆಗೆ ಸೆಡ್ಡು ಹೊಡೆಯಬೇಕು. ಯಾರೆಂಬುದು ಚುನಾವಣೆಯಲ್ಲಿ ಗೊತ್ತಾಗುತ್ತಿದೆ. ವಯಕ್ತಿಕ ರಾಜಕಾರಣ ಮಾಡಬಾರದು. ಜನರಿಂದ ಆಯ್ಕೆಯಾಗಿದ್ದಿರಿ, ಜನರಿಗಾಗಿ ಒಳ್ಳೆಯ ಕೆಲಸ ಮಾಡಬೇಕು ಹೊರತು ದ್ವೇಷದ ರಾಜಕೀಯ ಮಾಡಬಾರದು.