ರೋಣ ತಾಲೂಕಿನ್ಯಾದಂತ ದುಡಿಯೋಣ ಬಾ ಅಭಿಯಾನ : ಚಂದ್ರಶೇಖರ ಬಿ ಕಂದಕೂರ ನಮ್ಮ ಬಾಗದ ಜನರ ಗುಳೆ ತಪ್ಪಿಸಲು ತಾಲೂಕ ಪಂಚಾಯತ ದಿಟ್ಟ ಹೆಜ್ಜೆ

Let's work like a taluk girl: Chandrashekar B Kandakura Taluk Panchayat takes bold step to avoid the

ರೋಣ ತಾಲೂಕಿನ್ಯಾದಂತ ದುಡಿಯೋಣ ಬಾ ಅಭಿಯಾನ : ಚಂದ್ರಶೇಖರ ಬಿ ಕಂದಕೂರ  ನಮ್ಮ ಬಾಗದ ಜನರ ಗುಳೆ ತಪ್ಪಿಸಲು ತಾಲೂಕ ಪಂಚಾಯತ ದಿಟ್ಟ ಹೆಜ್ಜೆ   

ರೋಣ 29 :- ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಪ್ಪಿಸುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ ಗದಗ ಮೇ 1 ರಿಂದ ಒಂದು ತಿಂಗಳ ಕಾಲ (ನರೇಗಾ) ಯೋಜನೆಯಡಿ ‘ದುಡಿಯೋಣ ಬಾ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಇದನ್ನು ರೋಣ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ ಕಂದಕೂರ ತಿಳಿಸಿದರು.. ತಾಲೂಕಿನ ಸಭಾ ಭವನದಲ್ಲಿ ಗ್ರೂಪ ಟಾಕ್ ಮೂಲಕ ಮಾತನಾಡಿದ ಅವರು ತಾಲೂಕಿನ 22 ಗ್ರಾಮ ಪಂಚಾಯಿತಿ ಗಳಲ್ಲಿ ಈ ಅಭಿಯಾನ ವನ್ನು ಹಮ್ಮಿಕೊಳ್ಳಲು ಪಂಚಾಯಿತಿ ವತಿಯಿಂದ ಸಿದ್ಧತೆ ಮಾಡಿಕೊಳ್ಳಿ ಇದರಿಂದ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಗ್ರಾಮೀಣ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು ದುಡಿಯೋಣ ಬಾ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಪ್ರತಿ ಗ್ರಾಮ ಪಂಚಾಯಿತಿ ಯಲ್ಲಿ ದುಡಿಯೋಣ ಬಾ ಅಭಿಯಾನದ ಕುರಿತು ಐಇಸಿ ಚಟುವಟಿಕೆಗಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು ಉದ್ಯೋಗ ಚೀಟಿ ಹೊಂದಿರದ ಕುಟುಂಬ ಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆಯಬೇಕು. ನಿರುದ್ಯೊ?ಗ, ಆರ್ಥಿಕ ಸಂಕಷ್ಟ ಮತ್ತು ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ಈ ಅಭಿಯಾನ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಂತಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದ ಅಕುಶಲ ಕರ್ಮಿಗಳಿಗೆ ಬೇಸಿಗೆಯಲ್ಲಿ ನಿರಂತರ ಉದ್ಯೊ?ಗ ಒದಗಿಸುವ ಉದ್ದೆ?ಶದಿಂದ ದುಡಿಯೋಣ ಬಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ ಒಟ್ಟು 29,467 ಜಾಬ್ ಕಾರ್ಡಗಳು ಇವೆ ಅದರಲ್ಲಿ 22,320 ಸಕ್ರಿಯವಾದ ಜಾಬ್ ಕಾರ್ಡಗಳು ಇವೆ. ತಾಲೂಕಿನ ಒಟ್ಟು ಕೂಲಿ ಕಾರ್ಮಿಕರು 73,021 ಅದರಲ್ಲಿ ಸಕ್ರಿಯ ಕೂಲಿ ಕಾರ್ಮಿಕರು 48,523 ಜನ ಇದ್ದಾರೆ ಎಂದರು. ಸಕ್ರಿಯವಾಗಿ ಇರದೆ ಇರುವ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ತರುವ ಉದ್ದೇಶ ನಮ್ಮ ಮೇಲಿದೆ, ತಾಲೂಕಿನಲ್ಲಿ ಕೆಲಸ ನಿರ್ವಹಿಸುವ ಟಿಐಇಸಿ,ಜಿಕೆಎಂ, ಬಿಎಫಟಿ, ಕಾಯಕ ಬಂಧು, ಮಹಿಳಾ ಸ್ವ ಸಹಾಯ ಗುಂಪುಗಳು ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಇವರನ್ನು ಕೆಲಸಕ್ಕೆ ತರುವ ಕೆಲಸ ನಾವು ಮಾಡಬೇಕಿದೆ ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಿ ಎಂದರು..ನರೇಗಾ ಕೂಲಿ ದರವನ್ನು ಎಪ್ರೀಲ್ 1 ರಿಂದ 349 ರಿಂದ 370 ರೂ.ಗೆ ಹೆಚ್ಚಳ ಮಾಡಲಾಗಿದೆ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು, ಬೇಸಿಗೆ ಅವಧಿಯಲ್ಲಿ 60 ದಿನಗಳು ಕೆಲಸ ನಿರ್ವಹಿಸಿ ದಲ್ಲಿ  22,200 ರೂ ಗಳು ರೈತರ ಖಾತೆಗೆ ಜಮಾ ಆಗಲಿವೆ ಎಂದರು. ರೈತರು ತಮ್ಮ ಜಮೀನುಗಳಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ, ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮಗ್ರ ಕೆರೆ ಅಭಿವೃದ್ದಿ ಕಾರ್ಯಕ್ರಮದಡಿ ಕಾಲುವೆಗಳ ಪುನಶ್ಚೇತನ, ಕೆರೆಗಳ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಲಿದೆ. ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ತೋಟಗಾರಿಕೆ ಬೆಳೆ ಬೆಳೆಯಲು ಕಾಮಗಾರಿ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು..ತಾಲೂಕಿನ ಎಲ್ಲಾ ಪಿಡಿಓ ಗಳು, ಡಿಇಓಗಳು,ಇಂಜನಿಯರಿ​‍್ಬಎಫಟಿ,ಜಿಕೆಎಂ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು..