ಕೂಡ್ಲಿಗಿ: ಕರಡಿ ದಾಳಿ ಮೃತ ರೈತ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡಲು ಮನವಿ

ಲೋಕದರ್ಶನ ವರದಿ

ಕೂಡ್ಲಿಗಿ 27: ಇತ್ತಿಚೆಗೆ ಕರಡಿ ದಾಳಿಯಿಂದ ಮೃತ ಪಟ್ಟ ತಾಲ್ಲೂಕಿನ ಬಣವಿಕಲ್ಲು ಗ್ರಾಮದ ರೈತ ಇಬ್ರಾಯಿಂ ಕುಟುಂಬಕ್ಕೆ 20 ಲಕ್ಷ ಪರಿಹಾರ ಹಾಗೂ ಅತನ ಮಗನಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರರ ಮುಖಾಂತರ ಮುಖ್ಯ ಮಂತ್ರಿ ಹಾಗೂ ವಲಯ ಆರಣ್ಯಾಧಿಕಾರಿಯ ಮುಖಾಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹುಚ್ಚವ್ವನಹಳ್ಳೀ ಮಂಜುನಾಥ ಬಣದ ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ್ ಮಾತನಾಡಿ, ಕೂಡ್ಲಿಗಿ, ಹೊಸಪೇಟೆ, ಸಂಡೂರು ತಾಲ್ಲೂಕುಗಳಲ್ಲಿ ರೈತರು ಜಮೀನುಗಳಲ್ಲಿ ಕೆಲಸ ಮಾಡುವಾಗ, ಜಾನುವಾರುಗಳನ್ನು ಮೇಯಿಸುವಾಗ ಕರಡಿ, ಚಿರತೆಗಳು ದಾಳಿಯಿಂದ ಅನೇಕ ರೈತರು ಮೃತ ಪಟ್ಟಿದ್ದಾರೆ. ಅದರಲ್ಲೂ ಕೂಡ್ಲಿಗಿ ತಾಲ್ಲೂಕಿನಲ್ಲಿ ಕರಡಿ ದಾಳಿಯಿಂದ ಅನೇಕರು ಅಂಗವಿಕಲರಾಗಿ, ಅವರ ಜೀವನ ಸಂಕಷ್ಟದಲ್ಲಿದೆ ಎಂದು ದೂರಿದರು.

ಕಾಡು ಪ್ರಾಣಿಗಳಿಂದ ದಾಳಗೋಳಗಾದ ರೈತರು ಅದರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು  ಮಾಡಿದ್ದರೂ, ಆರಣ್ಯ ಇಲಾಖೆ ಕೇವಲ 30 ಸಾವಿರ ರೂಪಾಯಿಗಳನ್ನು ಮಾತ್ರ ನೀಡಿ ಕೈತೊಳಿದುಕೊಳ್ಳುತ್ತಿದೆ. ಅದ್ದರಿಂದ ಕರಡಿ ದಾಳಿಯಿಂದ ಮೃತಪಟ್ಟ ಇಬ್ರಾಯಿಂ ಸೇರಿದಂತೆ ಎಲ್ಲಾ ರೈತರಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 20 ಲಕ್ಷ ರೂಪಾಯಿ ನೀಡುವುದರ ಜೊತೆಗೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ, ಹಾಗೂ ಗಾಯಾಳುಗಳಿಗೆ 10 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು. 

ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಪರುಶುರಾಮ, ಹೋಸಪೇಟೆ ತಾಲ್ಲೂಕು ಆಧ್ಯಕ್ಷ ಎಂ.ಪ್ರಕಾಶ, ಸಂಡೂರು ತಾಲ್ಲೂಕು ಅಧ್ಯಕ್ಷ ಡಿ.ಹನುಮಂತಪ್ಪ, ಮುಖಂಡರಾದ ಬಿ.ಹಾಲಸ್ವಾಮಿ, ಕೆ.ಶಿವಕುಮಾರ, ಎಚ್.ಎಂ.ಮಲ್ಲಿಕಾರ್ಜುನಯ್ಯ, ಎ.ಷಣ್ಮುಖಪ್ಪ, ಚನ್ನಬಸಪ್ಪ ಬಣಕಾರ, ಡಿ.ಯಮನೂರು,  ಡಿ.ಈರಪ್ಪ, ಬಸಯ್ಯ ಮುಂತಾದವರು ಇದ್ದರು.