ಲೋಕದರ್ಶನ ವರದಿ
ಗದಗ 26: ಜಿಲ್ಲೆ ರೋಣ ತಾಲ್ಲೂಕಿನ ಹುನಗುಂಡಿ ಗ್ರಾಮದಲ್ಲಿ ಬಾಗಲಕೋಟ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಬೂತಮಟ್ಟದ ಪ್ರಚಾರ ಸಭೆ ನಡೆಯಿತು.ಕಾರ್ಯಕ್ರಮದಲ್ಲಿ ರಾಜಶೇಖರ ಶೀಲವಂತ ಪಕ್ಷದ ವಿಸ್ತಾರಕರಾಗಿ ಆಗಮಿಸಿದ್ದರು ಹುನಗುಂಡಿ, ಬೆನಹಾಳ, ಅಮರಗೋಳ,ಬಿ ಎಸ್ ಬೇಲೇರಿ,ಹೊಳೆಹಡಗಲಿ, ಕುರುವಿನಕೊಪ್ಪ, ಗಾಡಗೋಳಿ, ಹೊಳೆಮಣ್ಣೂರ, ಮಾಗೂರ, ಬೊಪಳಾಪುರ, ಗ್ರಾಮಗಳಿಂದ ಆಗಮಿಸಿದ್ದ ಬೂತಮಟ್ಟದ ಅಧ್ಯಕ್ಷರು, ಕಾರ್ಯದಶರ್ಿಗಳು ಸದಸ್ಯರಿಗೆ ಮಾಹಿತಿ ನೀಡಿದರು. ಚುನಾವಣೆಯಲ್ಲಿ ಮತದಾರರನ್ನು ಕರೆದುಕೊಂಡು ಬರುವದು ಪೇಜ್ ಪ್ರಮುಖರ ಕಾರ್ಯ ಪ್ರಮುಖವಾಗಿದೆ ಎಲ್ಲರೂ ಕೂಡಿಕೊಂಡು ಹೆಚ್ಚಿನ ಮತದಾನ ಆಗುವಂತೆ ಮಾಡಿಸಬೇಕೆಂದು ಸಭೆಯಲ್ಲಿ ಹೇಳಿದರು. ಗದಗ ಜಿಲ್ಲಾ ಬಿಜೆಪಿ ಪಕ್ಷದ ಎಸ್ ಟಿ ಮೊಚರ್ಾ ಅದ್ಯಕ್ಷರು ಹಾಗು ಮಹಷರ್ಿ ವಾಲ್ಮೀಕಿ ನಾಯಕ ಸಂಘದ ಅದ್ಯಕ್ಷರಾದ ಬಸವಂತಪ್ಪ. ಎಚ್.ತಳವಾರ ಶಕ್ತಿ ಕೇಂದ್ರದ ಪ್ರಮುಖರು ಮಾತನಾಡಿ ಹುನಗುಂಡಿ ಗ್ರಾಮದಲ್ಲಿ ಈಗಾಗಲೇ ಎರಡು ಬೂತಗಳಿದ್ದು ಈ ಬೂತಗಳಲ್ಲಿ ಯಶಸ್ವಿಯಾಗಿ ಮತದಾರರನ್ನು ಮನವೊಲಿಸುವುದು ನಡೆದಿದೆ ಪ್ರತಿದಿನ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷಕ್ಕೆ ಮತಹಾಕಬೇಕೆಂದು ಪ್ರಚಾರ ಮಾಡಿದ್ದೇವೆ ಎಂದರು.ಶಿವಕುಮಾರ ನೀಲಗುಂದ ರಾಮನಗೌಡ ಪಾಟೀಲ ಅಶೋಕ ಹೆಬ್ಬಳ್ಳಿ ಮುತ್ತಣ್ಣ ಜಂಗಣ್ಣವರ ಹುನಗುಂಡಿ ಗ್ರಾಮದ ಹಾಗೂ ಬೆನಾಳ ಗ್ರಾಮದ ಯುವಕರು, ಹಿರಿಯರು ಸಭೆಯಲ್ಲಿ ಹಾಜರಿದ್ದರು.