ಉಚಿತ ಆರೋಗ್ಯ ತಪಾಸಣಾ ಶಿಬಿರ

ಲೋಕದರ್ಶನ ವರದಿ

ಬೆಳಗಾವಿ 02:  ಬೆಳಗಾವಿಯಲ್ಲಿ ಬೇಸಿಗೆಯ ಕಾಲ ಪ್ರಾರಂಭವಾಗಿದೆ. ಕೋಲ್ಡಡ್ರಿಂಕ್ಸ, ಐಸಕ್ರೀಮ್ ಮುಂತಾದವುಗಳನ್ನು ಕಂಡರೆ ಸೇವಿಸುವ ಬಯಕೆ ಹೀಗೆ ಬಿಸಿಲಿನ ಬೇಯ್ಗೆಯಿಂದ ತಪ್ಪಿಸಿಕೊಳ್ಳಲು ನಾವು ಅನುಸರಿಸುವ ವಿಧಾನ ಅಷ್ಟಿಸ್ಟಲ್ಲ. ಆದರೆ ಈ ಬವನೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅನಾರೋಗ್ಯಕರವಾದ, ರಾಸಾಯನಿಕಗಳಿಂದ ಮಿಶ್ರಿತ ವಿವಿಧ ಪಾನೀಯಗಳು ದುಬಾರಿಯಷ್ಟೇ ಅಲ್ಲದೇ ಆರೋಗ್ಯಕ್ಕೂ ಹಾನಿಕರವಾಗಿವೆ. ಆದ್ದರಿಂದ ಹಣ್ಣುಗಳು, ಪಾನಕಗಳನ್ನು ಸೇವಿಸುವದರ ಮೂಲಕ ಬಿಸಿಲಿನ ಧಗೆಯಿಂದ ಪರಿಹಾರ ಕಂಡುಕೊಳ್ಳಿರಿ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ಮಾತನಾಡುತ್ತಿದ್ದರು. ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವತಿಯಿಂದ ನಗರದ ಅಲಾರವಾಡ ಗ್ರಾಮದ ಲಕ್ಷ್ಮೀ ಮಂದಿರದಲ್ಲಿ  ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಂಗವಾಗಿ  ಮಾತನಾಡುತ್ತಿದ್ದರು. 

ಈ ಸಂದರ್ಭದಲ್ಲಿ ಸುಮಾರು 140 ಕ್ಕೂ ಅಧಿಕ ರೋಗಿಗಳಿಗೆ ಉಚಿತವಾಗಿ ತಪಾಸಣೆ ಮಾಡಿ ಔಷಧಿ ವಿತರಿಸಲಾಯಿತು. ಅದರಲ್ಲಿ 105 ನಾಗರಿಕರಿಗೆ ಮಧುಮೇಹ ತಪಾಸಣೆ ಮಾಡಲಾಗಿ ಅವರಲ್ಲಿ 25 ಜನರಿಗೆ ತೀವ್ರ ಮಧೂಮೇಹದ ರೋಗ ಕಂಡುಬಂದಿತು, 65 ಜನರಿಗೆ ಎಲುಬು ಕೀಲು ತಪಾಸಣೆ ಮಾಡಲಾಗಿ ಅವರಲ್ಲಿ 15 ಜನರಿಗೆ ಮೊಣಕಾಲು ಹಾಗೂ ಚಪ್ಪೆಗೆ ಸಂಬಂಧಿಸಿದ ವಿವಿಧ ರೋಗಗಳು ಕಂಡು ಬಂದಿದ್ದು ಅವರಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಆಸ್ಪತ್ರೆಯ ನಿದರ್ೇಶಕರಾದ ಡಾ. ಎಸ್ ಸಿ ಧಾರವಾಡ ಸೂಚಿಸಿದ್ದಾರೆ. 

ಈ ಶಿಬಿರದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ವೈದ್ಯರಾದ ಡಾ. ಬಿ ಎಸ್ ಮಹಾಂತಶೆಟ್ಟಿ, ಡಾ. ಜೊಯೆಲ್ ಜಾರ್ಜ ಹಾಗೂ ಪ್ರಸಿದ್ದ ಎಲುಬು ಕೀಲು ತಜ್ಞರಾದ ಡಾ. ಅಮಿತ ಪಿಂಗಟ್ ಹಾಗೂ ಅಲಾರವಾಡ ಭಾಗದ ನಗರಸೇವಕ ಬಾಹುಬಲಿ ಜಿನಗೌಡಾ  ಮತ್ತು ಅಲಾರವಾಡ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.