ನೀರಾವರಿ ಅಧಿಕಾರಿಗಳಿಗೆ ರೈತರಿಂದ ತರಾಟೆ

ಅಥಣಿ: ತಾಲೂಕಿನ ಐನಾಪೂರ ಯಾತ ನೀರಾವರಿ ಯೋಜನೆ ಉಪಕಾಲುವೆಗಳಿಂದ ಇಲ್ಲಿಯವರೆಗೂ ಒಂದು ಹನಿ ನೀರು ನಮ್ಮ ಜಮೀನಿಗೆ ಬಂದಿಲ್ಲಾ ಎಂದು ಅಧಿಕಾರಿಗಳನ್ನು ಕವಲಗುಡ್ಡ ಗ್ರಾಮದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಘಟನೆ ನಡೆದಿದೆ.

  ಸಮೀಪದ ಕವಲಗುಡ್ಡ ಹಾಗೂ ಸಿದ್ದೇವಾಡಿ ಗ್ರಾಮದಲ್ಲಿ ಸರಿಯಾಗಿ ಮಳೆಯಾಗದ ಕಾರಣ ರೈತರು ನೀರಾವರಿ ಯೋಜನೆಯ ಕಾಲುವೆ ಮೂಲಕ ನೀರು ಹರಿದು ಬರುತ್ತದೆ ಎಂಬ ಆಶಾಭಾವನೆಯಿಂದ ಹೊಲಗಳಲ್ಲಿ ಬಿತ್ತನೆ ಕಾರ್ಯಮಾಡಿ ಉಪಕಾಲುವೆಗಳಿಂದ ನೀರು ಬರುವಿಕೆಗಾಗಿ ಕಾಯುತ್ತಿದ್ದರು ಆದರೆ ತಿಂಗಳಾನುಗಟ್ಟಲೆ ಕಾದರು ನೀರು ಬರದಿರುವದನ್ನು ಆಕ್ರೋಶಗೊಂಡು ಹಿರಿಯ ಅಕಾರಿಗಳಿಗೆ ಕರೆಮಾಡಿ ಕೇಳಿದಾಗ ನೀರು ಬಿಟ್ಟಿರುವದಾಗಿ ಹೇಳಿದರು ಕೂಡಲೆ ರೈತರು ಖುದ್ದಾಗಿ ನೀವೆ ಬಂದು ಪರಿಶೀಲನೆ ಮಾಡಿ ಎಂದು ಹೇಳಿದಾಗ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ರೈತರು ನಿಜ ದರ್ಶನ ಮಾಡಿಸಿದರು. 

  ಉಪಕಾಲುವೆಗಳ ಮೂಲಕ ಯಾವಾಗಲು ನೀರು ಬಿಟ್ಟರು ಕೆಲವು ಪ್ರಭಾವಿಗಳು ತಮ್ಮ ಖಾಸಗಿ ಕೃಷಿ ಹೊಂಡಗಳನ್ನು ತುಂಬಿಕೋಳ್ಳುತ್ತಿದ್ದು ಇದನ್ನು ತಡೆದು ಮುಂದೆ ಹರಿಸಬೇಕಾದ ಅಧಿಕಾರಿಗಳು ತಡೆಯುವ ಕೆಲಸ ಮಾಡುತ್ತಿಲ್ಲಾ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲಾ ಎಂದು ಸಿದ್ದೇವಾಡಿ ಗ್ರಾಮ ಪಂಚಾಯತ ಸದಸ್ಯ ರಮೇಶ ವಾಘಮೋಡೆ ಆಕ್ರೋಶ ವ್ಯಕ್ತಪಡಿಸಿದರು  

   ಅಧಿಕಾರಗಳೊಂದಿಗೆ ವಾಗ್ವಾದಕಿಳಿದ ರೈತರನ್ನು ಸಮಾಧಾನಪಡಿಸಿದ ಐನಾಪೂರ ಯಾತ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಅರುಣ ಯಲಗುದ್ರಿ ನಾಳೆಯಿಂದ ಉಪ ಕಾಲುವೆಗಳಿಗೆ ನೀರು ಹರಿಸುವದಾಗಿ ಹೇಳಿದರು. ಇದಕ್ಕೆ ಸುಮ್ಮನಾಗದ ರೈತರು ಪ್ರತಿ ವರ್ಷ ನಮಗೆ ಇದೆ ರೀತಿ ಸಮಸ್ಯ ಆಗುತ್ತದೆ ಯಾರು ನಮ್ಮಗೋಳು ಕೇಳುವದಿಲ್ಲಾ ನೀರು ಬರದಿದ್ದರೆ ನಮ್ಮ ಜಮೀನಲ್ಲಿ ಇರುವ ನಿಮ್ಮ ಕಾಲುವೆಗಳು ಯಾಕೆ ಮಾಡಿದ್ದಿರಿ ತೆಗೆದು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಈ ವೇಳೆ ರೈತರಾದ ದೇವಪ್ಪ ಮಾನಗಾಂವೆ, ನಿಂಗಪ್ಪ ಕುಳ್ಳೋಳ್ಳಿ, ಬಾಳಪ್ಪ ನರೋಟ್ಟಿ, ರಾಜಕುಮಾರ ಮಾನಗಾಂವೆ ನಿಂಗಪ್ಪ ನರೋಟ್ಟಿ ಸುತ್ತಮುತ್ತಲಿನ ರೈತರು ಇದ್ದರು.