ಸಂಶೋಧನೆ, ಸಂಪಾದನೆ ಕ್ಷೇತ್ರಕ್ಕೆ ಡಾ.ಬಿ.ವಿ ಮಲ್ಲಾಪೂರ ಕೊಡುಗೆ ಅಪಾರ: ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ

ಲೋಕದರ್ಶನ ವರದಿ

ಗದಗ: ಕನ್ನಡ ಸಾರಸ್ವತ ಲೋಕದಲ್ಲಿ  ಸಂಶೋಧನೆ ಮತ್ತು ಸಂಪಾದನೆ ಕ್ಷೇತ್ರಕ್ಕೆ ಗದಗ ಜಿಲ್ಲೆಯವರೇ ಆದ  ಡಾ ಬಿ.ವಿ. ಮಲ್ಲಾಪೂರರವರ ಕೊಡುಗೆ ಅಪಾರವಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಅಭಿಪ್ರಾಯಪಟ್ಟರು.

ಅವರು ಗದುಗಿನ ಬಸವೇಶ್ವರ ನಗರದಲ್ಲಿರುವ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿ ವಾರ ಆಯೋಜಿಸುವ ವಾರದ ಸಾಹಿತ್ಯ ಚಿಂತನದಲ್ಲಿ ಡಾ. ಬಿ.ವಿ. ಮಲ್ಲಾಪೂರ- ಒಂದು ಸ್ಮರಣೆ  ವಿಷಯದ ಮೇಲೆ ಉಪನ್ಯಾಸವನ್ನು ನೀಡುತ್ತಾ, ಮಲ್ಲಾಪೂರರವರು ರೋಣ ತಾಲೂಕಿನ ಇಟಗಿ ಗ್ರಾಮದವರು. ಅವರು ಸಾಹಿತ್ಯ ರಚನೆ, ಸಂಶೋಧನೆ, ಸಂಪಾದನೆ, ವಿಮರ್ಶೆಯನ್ನು ಕೈಗೊಂಡರು. ವೀರಶೈವ ದರ್ಶನ ತತ್ವ ಸಿದ್ಧಾಂತ ಶೋಧದ ಕೃತಿ ಲಿಂಗಪೂಜೆ ಸಿಂಧೂ ನಾಗರಿಕತೆಯ ಕಾಲದಿಂದಲೂ ಪ್ರಚಲಿತದಲ್ಲಿತ್ತೆಂಬುದರ ಬಗ್ಗೆ ಉಲ್ಲೇಖವನ್ನು ಕೊಡುತ್ತಾರೆ. ವಚನ ಸಂಕಲನ ಸಂಪಾದನೆ ಮಾಡುವುದಕ್ಕೆ ಶಾಸನ ಸಾಹಿತ್ಯ, ಸಂಸ್ಕೃತಿ ಸಾಹಿತ್ಯ, ಶಾಸ್ತ್ರ ಸಾಹಿತ್ಯ, ಇತಿಹಾಸ ಸಾಹಿತ್ಯ ಮುಂತಾದವುಗಳನ್ನು ಬಳಸಿಕೊಂಡು ಒಬ್ಬ ಉತ್ತಮ ಇತಿಹಾಸ ಸಂಶೋಧಕರಾಗಿ ಹೊರಹೊಮ್ಮಿದರು. ಇವರು ಒಟ್ಟು 40 ಸುಧರ್ಣವ ಲೇಖನಗಳ ಸಂಪಾದನೆಯನ್ನು ಮಾಡಿದರು. 17 ಬೇರೆ-ಬೇರೆ ವಿಷಯದ ಮೇಲೆ ಲೇಖನಗಳನ್ನು ಬರೆದರು. ಹಳಗನ್ನಡದಲ್ಲಿ ವಿಶಿಷ್ಟವಾದ ಹಿಡಿತವನ್ನು ಸಾಧಿಸಿದ್ದರು. ಅಲ್ಲದೆ, ಕರಿಬಸವೇಶ್ವರ ಶಿವಾಚಾರ್ಯ ವಿರಚಿತ ಸ್ವರವಾಚನ, ಚಾಮರಸನ ಪ್ರಭುಲಿಂಗ ಲೀಲೆ, ಬುದ್ಧಮ್ಮ ಸ್ವಾಮಿ ಸಂಕಲಿಸಿದ ಸ್ವರವಾಚನಗಳು, ಚಂದ್ರಹಾಸ ಚರಿತೆ, ಅಲ್ಲಮಪ್ರಭು ವಚನ ಸಂಪುಟ, ಜಾನಪದ ಸಂಪದ, ಸಂಶೋಧನಾ ಸಂಪದ ಇನ್ನೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಹಿತ್ಯ ಸೇವೆಗೆ ಹುಬ್ಬಳ್ಳಿಯ ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ ದೊರಕಿದೆ.

ಡಾ. ಬಿ.ವಿ. ಮಲ್ಲಾಪೂರರವರ 'ವೀರಶೈವ ದರ್ಶನ' ಸಂಶೋಧನಾ ಕೃತಿ ಬಹಳಷ್ಟು ವಚನ ಹಾಗೂ ಶಾಸ್ತ್ರಗಳ ಆಧಾರದ ಮೇಲೆ ಮೂಡಿಬಂದಿದೆ. ಸಂಪಾದನಾ ಕಾರ್ಯ ಹೇಳಿದಷ್ಟು ಸುಲಭವಲ್ಲ. ಮಲ್ಲಾಪೂರರವರು ಸರಳ, ಸಜ್ಜನಿಕೆ ಸ್ವಭಾವದ ನಿಗರ್ವೇ, ಪ್ರತಿಭಾ ಸಂಪನ್ನ ವ್ಯಕ್ತಿಯಾಗಿದ್ದರು. ಅಭ್ಯಾಸ ಪೂರ್ಣ ಪಾಠ, ಆಕರ್ಷಕ ಬೋಧನಾ ಶೈಲಿ, ಅಧ್ಯಯನಶೀಲ, ಒಬ್ಬ ಮಹಾನ್ ಆದರ್ಶ ಉಪನ್ಯಾಸಕ, ಸಾಹಿತಿ ನಮ್ಮ ಜಿಲ್ಲೆಯವರೇ ಎಂಬುದು ನಮ್ಮ ಹೆಮ್ಮೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜೈಹೋ ಕನರ್ಾಟಕ ಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷರಾದ  ಇರ್ಫಾನ್ ಡಂಬಳ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಡಾ. ಶರಣು ಗೋಗೇರಿ ಹಾಗೂ ಅವರ ತಂಡ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಗೆ ಸೇವೆಗೈದ ಮಹನೀಯರ ಬಗ್ಗೆ ಅತ್ಯುತ್ತಮವಾದ ರೀತಿಯಲ್ಲಿ ಅವರನ್ನು ನೆನೆಸಿಕೊಂಡು, ಅವರ ಬಗ್ಗೆ ಕಾರ್ಯಕ್ರಮ ನಡೆಸುತ್ತಿರುವುದು ಉತ್ತಮವಾದ ಕಾರ್ಯವಾಗಿದೆ. ಇದರೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಯೊಂದು ವಾರ್ಡಗೆ ತೆರಳಿ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ಮಾಡಬೇಕು. ಅವರೊಂದಿಗೆ ನಮ್ಮ ಸಂಘಟನೆಯ ಸರ್ವ ಸದಸ್ಯರು ಸೇರಿ ಸಂಪೂರ್ಣವಾದ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ. ಶರಣು ಗೋಗೇರಿಯವರು ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಹುಟ್ಟಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಸಾಹಿತಿಗಳನ್ನು ಹಾಗೂ ಕಲಾವಿದರನ್ನು ಗುರುತಿಸಿ ಅವರ ಸಾಹಿತ್ಯಿಕ ಕೊಡುಗೆಯನ್ನು ಇಂದಿನ ಪೀಳಿಗೆಗೆ ತಿಳಿಸುವುದರೊಂದಿಗೆ ಅವರ ಸ್ಮರಣೆಯನ್ನು ಮಾಡಿ ಗೌರವವನ್ನು ಸಲ್ಲಿಸುವುದು ಜಿಲ್ಲಾ ಕಸಾಪದ ಕರ್ತವ್ಯವಾಗಿದೆ. ಈಗಾಗಲೇ ಎಂ.ಎಸ್. ಸುಂಕಾಪೂರ, ಗಿರಡ್ಡಿ ಗೋವಿಂದರಾಜ, ಸೋಮಶೇಖರ ಇಮ್ರಾಪೂರ, ಎಂ.ಡಿ. ಗೋಗೇರಿ ಹಲವಾರು ಸಾಹಿತಿಗಳ ಬಗ್ಗೆ ಕಾರ್ಯಕ್ರಮಗಳನ್ನು ಮಾಡಿದ್ದು, ಇದರೊಂದಿಗೆ ನಮ್ಮ ಜಿಲ್ಲೆಯ ಇನ್ನೋರ್ವ ಶ್ರೇಷ್ಠ ಸಾಹಿತಿ, ಆದರ್ಶ ಉಪನ್ಯಾಸಕರಾದ ಡಾ. ಬಿ.ವಿ. ಮಲ್ಲಾಪೂರರವರನ್ನು ಸ್ಮರಿಸಿಕೊಳ್ಳುವುದರೊಂದಿಗೆ ಅವರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದಾನಮ್ಮ ತೆಗ್ಗಿನಕೇರಿಯವರು ಕವನ ವಾಚನವನ್ನು ಮಾಡಿದರು.  ಡಿ.ಸಿ. ನದಾಫ್ ಇವರಿಂದ ಜಾನಪದ ಸಂಗೀತ ಗೀತಗಾಯನ ನೆರವೇರಿತು. ಪ್ರಾರಂಭದಲ್ಲಿ  ಡಿ.ಸಿ. ನದಾಫ್ ಪ್ರಾಥರ್ಿಸಿದರು. ಹಿರಿಯ ಸಾಹಿತಿಗಳಾದ  ಅಂದಾನಪ್ಪ ವಿಭೂತಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಮಂಗಳೂರ ನಿರೂಪಿಸಿದರು.  ಕಸಾಪ ಸಂಘಟನಾ ಕಾರ್ಯದಶರ್ಿ ರವಿರಾಜ ಪವಾರ ವಂದಿಸಿದರು. 

ಈ ಸಂದರ್ಭದಲ್ಲಿ ಶಂಕರಣ್ಣ ಅಂಗಡಿ, ಕೆ.ವಿ. ಕುಂದಗೋಳ, ಅ.ಓಂ. ಪಾಟೀಲ, ರತ್ನಕ್ಕ ಪಾಟೀಲ, ಜಯಶ್ರೀ ಶ್ರೀಗಿರಿ, ಎಚ್.ಜಿ. ಚವಡಿ, ಟಿ.ಡಿ. ನದಾಫ್, ಜ್ಯೋತಿ ಹೇರಲಗಿ, ಪ್ರ.ತೋ. ನಾರಾಯಣಪೂರ, ಬಸವರಾಜ ವಾರಿ, ಜೆ.ಎ. ಪಾಟೀಲ, ಶಂಕರ ಗುರುಬಸಣ್ಣವರ, ಎಂ.ಎ. ಡಂಬಳ, ಆರ್.ಡಿ. ಕಪ್ಪಲಿ, ರಾಕೇಶ ಹಿರೇಮನಿ, ಏಕನಾಥ ಹಾವನೂರ, ಎಸ್.ಎಫ್. ಭಜಂತ್ರಿ, ದತ್ತಪ್ರಸನ್ನ ಪಾಟೀಲ, ರಾಜಶೇಖರ ಕರಡಿ, ಜಿ.ಎಸ್. ಯತ್ನಟ್ಟಿ, ಜೆ.ಬಿ. ಅಂಗಡಿ, ಬಿ.ಎಫ್. ಪೂಜಾರ, ಆನಂದ ಕಲ್ಮಠ, ಸಂತೋಷ ಕುರಿ ಮುಂತಾದವರು ಉಪಸ್ಥಿತರಿದ್ದರು.