ಜಮಖಂಡಿ 1: ಡಾ, ಬಾಬಾ ಸಾಹೇಬ ಅಂಬೇಡ್ಕರ್‌ರವರು ದೇಶದಲ್ಲಿ ಇರುವ ಕೆಳವರ್ಗದ ಜನರು ಸಹ ಸಮಾನತೆಯಿಂದ ಬದುಕಬೇಕೆಂದು ಸಂವಿಧಾನವನ್ನು ನೀಡಿದ್ದಾರೆ ಎಂದು ಅಂಬೇಡ್ಕರ್ ಅವರ ಮೊಮ್ಮಗ ಡಾ, ರಾಜರತ್ನ ಅಂಬೇಡ್ಕರ್ ಹೇಳಿದರು.
ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ನಡೆದ ಡಾ.ಬಿ,ಆರ್,ಅಂಬೇಡ್ಕರ್ ಅವರ 134 ನೇ ಜಯಂತಿಯೋತ್ಸವದ ಅಂಗವಾಗಿ ಅಂಬೇಡ್ಕರ್ ಹಬ್ಬ ಹಾಗೂ ಬೃಹತ್ ಜನಜಾಗೃತಿ ಸಮಾವೇಶ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಚಮ್ಮಾರ, ಹಡಪದ, ಮಾದಿಗ ಪ್ರತಿಯೊಂದು ಸಮಾಜದ ಮಹಿಳೆಯರು ತಮ್ಮ ಮನಸಿನಲ್ಲಿ ಕನಸನ್ನು ನೆನಪಿಸಿಕೊಳ್ಳುತ್ತಿದ್ದರು. ನಮ್ಮ ಮಕ್ಕಳು ಕೂಡಾ ಉನ್ನತ ಸ್ಥಾನದ ಅಧಿಕಾರಿಗಳು ಆಗಬೇಕೆಂಬ ಕನಸು ಕಾಣುತ್ತಿದ್ದರು. ಆದರೆ ಬಾಬಾ ಸಾಹೇಬರು ಚಮ್ಮಾರ, ಹೂಗಾರ, ಮಾದಿಗ ಹಾಗೂ ಇನ್ನು ಕೆಲವರ್ಗದ ಮಕ್ಕಳು ಆಗಿದರು ಸಹ ಅವರು ಉನ್ನತ ಅಧಿಕಾರಿಗಳು ಆಗಬೇಕು. ಎಲ್ಲರಿಗೂ ದೇಶದಲ್ಲಿ ಕೆಲಸ ಮಾಡುವ ಜೊತೆಗೆ ಸಮಾನತೆ ಬರಬೇಕೆಂದು ಸಂವಿಧಾನದಲ್ಲಿ ಬರೆದಿದ್ದಾರೆ. ಜಾತಿಯಿಂದ ತುಳಿತಕ್ಕೆ ಒಳಪಟ್ಟ ಮಕ್ಕಳು ಸಹ ಸುಪ್ರೀಂಕೋರ್ಟ್ ನ್ಯಾಯಾಧೀಶರು, ವಕೀಲರು, ಡಾಕ್ಟರ್, ಇಂಜೀನಿಯರಗಳು
ಯುನ್ಯಾಟೆಡ ದೇಶದಲ್ಲಿ ನಡೆಯುವ ಸಮೇಳನದಲ್ಲಿ ಬೇರೆ ದೇಶಗಳಿಂದ 147 ಸದಸ್ಯರು ಆಗಮಿಸಿದರು. ಅದರಲ್ಲಿ ಚೀನಾ ದೇಶದ ಸದ್ಯಸರೊಬ್ಬರು ಡಾ,ಬಾಬಾ ಸಾಹೇಬರ ಕೊರಳಲ್ಲಿ ಇರುವ ಭಾರತ ದೇಶದ ಐಡಿ ಕಾರ್ಡನ್ನು ನೋಡಿ ಕೇಳಿತ್ತಾರೆ. ನೀವು ಅಂಬೇಡ್ಕರ್ ಅವರ ದೇಶದವರು ಎಂದು ಅವರನ್ನು ಕೇಳುತ್ತಾರೆ. ಆವಾಗ ಅಂಬೇಡ್ಕರ ಅವರು ಹೇಳುತ್ತಾರೆ ಹೌದು ಅಂತಾ. ಅಂದರೆ ವಿದೇಶದಲ್ಲಿಯೂ ಕೂಡಾ ಭಾರತ ದೇಶ ಎಂದರೆ ಡಾ,ಬಾಬಾ ಸಾಹೇಬರ ದೇಶ ಎಂದು ಕೊಂಡಾಡುತ್ತಾರೆ. ಅವಾಗ ಡಾ,ಬಿ,ಆರ್,ಅಂಬೇಡ್ಕರ್ ಹೆಸರು ಕೇಳಿ ಅಲ್ಲಿದ್ದ ವಿದೇಶಿಗರು ದಿಗ್ಗಭ್ರಮೆಯಾಗುತ್ತಾರೆ. ಅಂದರೆ ಬಾಬಾ ಸಾಹೇಬರು ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಅಂಬೇಡ್ಕರ್ ಅವರು ಅನೇಕ ಹುದ್ದೆಯನ್ನು ಅಲಂಕರಿಸಿದ್ದರು. ಮೈಸೂರಿನ ರಾಜರು 9ಎಕ್ಕರೆ ಭೂಮಿಯನ್ನು ಉಳಿಮಿಗೆಂದು ನೀಡಿದರು. ಯಾವುದೇ ಹಣ, ಆಸ್ತಿಗೆ ಆಸೆಗೆ ಒಳಪಡಲ್ಲಿಲ್ಲ. ಅವರೊಬ್ಬರು ಸಾದಾಸಿದಾ ವ್ಯಕ್ತಿಯಾಗಿದ್ದರು. ದೇಶದ ಜನರು ಸಮಾನತೆಯಿಂದ ಇರಬೇಕೆಂಬ ಕನಸು ಕಂಡಿದರು. ಬುದ್ದ ಧರ್ಮದಲ್ಲಿ ಎಲ್ಲರು ಕೆಲಸ ಮಾಡಬೇಕು. ದೇಶದಲ್ಲಿನ ಮಕ್ಕಳು ವಿದ್ಯಾವಂತರು ಆಗಬೇಕೆಂದು ಅವರ ಕನಸು ಆಗಿತು ಎಂದರು.
ಕುಡಚಿ ಶಾಸಕ ಮಹೇಶ ತಮ್ಮನ್ನವರ, ಮಾಜಿ ಶಾಸಕ ಆನಂದ ನ್ಯಾಮಗೌಡ, ಉದ್ಯಮಿ ತೊಫಿಕ ಪಾರ್ಥನಳ್ಳಿ, ತಾ,ಪಂ, ಇಒ ಸಂಜು ಜುನ್ನೂರ ಮಾತನಾಡಿದರು, ಸಿದ್ದು ಮೀಶಿ, ರಾಹುಲ್ ಕಲೂತಿ, ಸುಶೀಲಕುಮಾರ ಬೆಳಗಲಿ, ರಿಯಾಜ ತೆಲಸಂಗ, ಈಶ್ವರ ವಾಳೇನ್ನವರ, ನಾಗಪ್ಪ ಸನದಿ, ಅಜೇಯ ಕಡಪಟ್ಟಿ, ಯಮನೂರ ಮೂಲಂಗಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಯಮನಪ್ಪ ಗುಣದಾಳ ಪ್ರಾಸ್ತಾವಿಕ ಮಾತನಾಡಿದರು. ಕರಣಕುಮಾರ ಮೌರ್ಯ, ಮಮತಾ ನಧಾಪ ನಿರೂಪಿಸಿದರು. ಶಶಿಧರ ಮೀಶಿ, ಪವಣ ಸುತ್ತಾರ ವಂದಿಸಿದರು. ಸಾಂಯಕಾಲ ಸಮಯದಲ್ಲಿ ಡಾ,ಬಿ,ಆರ್,ಅಂಬೇಡ್ಕರ್ ಅವರ ಮೂರ್ತಿಯೊಂದಿಗೆ ಡಿಜೆ ಜೊತೆಗೆ ಭವ್ಯವಾದ ಮೆರವಣಿಗೆ ಪ್ರಮುಖ ರಸ್ತೆಯ ಮೂಲಕ ಸಂಚರಿಸಿತು. ಅಂಬೇಡ್ಕರ್ ಅವರ ಡಿಜೆ ಹಾಡುಗಳಿಗೆ ಮಹಿಳೆಯರು, ಯುವಕರು ಕುಣಿದು ಕುಪ್ಪಳಿಸಿದರು.