ರಾಷ್ಟ್ರೀಯ ಪುರಸ್ಕಾರ ಶಿಕ್ಷಣ ಶಿಷ್ಯವೇತನಕ್ಕೆ ಧಾರವಾಡ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಸಾಧನೆ

Dharwad rural students achieve high marks for National Award for Education Scholarship

ರಾಷ್ಟ್ರೀಯ ಪುರಸ್ಕಾರ ಶಿಕ್ಷಣ ಶಿಷ್ಯವೇತನಕ್ಕೆ ಧಾರವಾಡ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಸಾಧನೆ 

ಧಾರವಾಡ 04: ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಣಕಾಸು ಪುರಸ್ಕಾರ ಒದಗಿಸುವ ರಾಷ್ಟ್ರಮಟ್ಟದಲ್ಲಿ ಏಕ ರೂಪದಲ್ಲಿ ನಡೆಯುವ ಕೇಂದ್ರ ಸರ್ಕಾರದ ಎನ್‌ಎಂಎಂಎಸ್ ರಾಷ್ಟ್ರೀಯ ಪುರಸ್ಕಾರ ಶಿಕ್ಷಣ ಶಿಷ್ಯವೇತನ' ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಧಾರವಾಡ ಗ್ರಾಮೀಣ ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಅರ್ಹತೆ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. 

2024-25ನೇ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿಗೆಓದುವ ಮಕ್ಕಳಿಗಾಗಿ ನಡೆದ ಪರೀಕ್ಷೆಗೆತಾಲ್ಲೂಕಿನ1,400 ವಿದ್ಯಾರ್ಥಿಗಳು ಹಾಜರಾಗಿದ್ದರು.ಆಯ್ಕೆಯಾಗಿರುವಧಾರವಾಡಜಿಲ್ಲೆಯ191 ವಿದ್ಯಾರ್ಥಿಗಳ ಪೈಕಿ ಧಾರವಾಡಗ್ರಾಮೀಣತಾಲ್ಲೂಕಿನ75 ವಿದ್ಯಾರ್ಥಿಗಳು ನಿಗದಿತಅರ್ಹತೆ ಪಡೆಯುವ ಮೂಲಕ ಪುರಸ್ಕಾರಕ್ಕೆಆಯ್ಕೆಯಾಗಿದ್ದಾರೆ. 

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಮತ್ತು ಶಿಕ್ಷಣ ಸಂಯೋಜಕರು ಹಾಗೂ ಎನ್‌.ಎಂ.ಎಂ.ಎಸ್‌. ನೋಡಲ್‌ಅಧಿಕಾರಿಯಾದಬಸವರಾಜ ಛಬ್ಬಿ, ಬಿಇಓ, ಬಿಆರಸಿ ತಂಡಆರಂಭವಾದಾಗಿನಿಂದಲೂಪರೀಕ್ಷೆಪೂರ್ವ ಸಿದ್ದತೆ ತಾಲ್ಲೂಕಿನ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳೇ ಅರ್ಹತೆ ಪಡೆಯುತ್ತಪ್ರಯತ್ನದ ಫಲ ಬಂದಿದೆ.ಈ ಬಾರಿಯೂಜಿಲ್ಲಾ ಮಟ್ಟದಲ್ಲಿಉತ್ತಮ ಸಾಧನೆಗೈದಿರುವುದು ಹೆಮ್ಮೆಯ ಸಂಗತಿ' ಎಂದರು. 

ಸರ್ಕಾರಿ ಹಿರಿಯ ಪ್ರಾಥಮಿಕಕನ್ನಡ ಹೆಣ್ಣು ಮಕ್ಕಳ ಶಾಲೆ ಗರಗದರಕ್ಷಿತ ಭೀಮನಗೌಡ ಪಾಟೀಲ್ 124 ಅಂಕ ಪಡೆದು ಜಿಲ್ಲೆಯಲ್ಲಿಯೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ. 

ಸಂಪನ್ಮೂಲ ಶಿಕ್ಷಕರುಗಳಿಗೆ ಸ್ಪರ್ಧಾಯಶಸ್ಸು ಪುಸ್ತಕಗಳು ಮತ್ತು ಈ ಪರೀಕ್ಷೆಗೆ ಸಂಬಂಧಿಸಿದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸಲಾಗುತ್ತದೆ.ಆ ಶಿಕ್ಷಕರು ಶಾಲಾ ಹಂತದಲ್ಲಿ 8ನೇ ತರಗತಿಯ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಕಾಳಜಿ ಪೂರ್ವಕವಾಗಿತರಬೇತಿ ನೀಡಿದ ಫಲವಾಗಿ ಹಾಗೂ ತಾಲೂಕಾ ಮಟ್ಟದ ವಿದ್ಯಾರ್ಥಿಗಳಿಗೆ ಎನ್‌ಎಂಎಂಎಸ್ ಪರೀಕ್ಷೆಯಕುರಿತುಕಾರ್ಯಗಾರ ಮಾಡಲಾಯಿತು.ಇದರ ಫಲವಾಗಿ ತಾಲ್ಲೂಕಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಪುರಸ್ಕಾರ ಶಿಷ್ಯವೇತನಕ್ಕೆ ಆಯ್ಕೆಯಾಗಲು ಸಾಧ್ಯವಾಗಿದೆಎಂದರು. 

ಪರೀಕ್ಷೆಯಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪುರಸ್ಕಾರ ಶಿಷ್ಯವೇತನಕ್ಕೆ ಅರ್ಹತೆ ಗಳಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅಗತ್ಯಇರುವಎಲ್ಲರೀತಿಯ ಸಹಕಾರ ನೀಡಲಿದೆಎಂದುಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದ್ದಾರೆ.