ಗಡಿ ಸಂಪರ್ಕ ರಸ್ತೆಗಳ ಡಾಂಬರಿಕರಣಕ್ಕೆ ಆಗ್ರಹ

Demand for asphalting of border connection roads

ಸಂಬರಗಿ 23: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಇರುವ ರಸ್ತೆ ಕರ್ನಾಟಕ ಸರಕಾರ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಡಾಂಬರಿಕರಣ ಮಾಡಿದ್ದಾರೆ. ಆದರೆ ಮಹಾರಾಷ್ಟ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಇರುವ ಸಂಪರ್ಕಿಸುವ ರಸ್ತೆಗಳು ಹಾಳಾಗಿವೆ. ದಿನ ನಿತ್ಯ ಅಪಘಾತ ಪ್ರಮಾಣ ಹೆಚ್ಚಾಗಿದ್ದು, ಮಹಾರಾಷ್ಟ್ರ ಸರ್ಕಾರ ಗಡಿ ಸಂಪರ್ಕ ರಸ್ತೆಗಳನ್ನು ಡಾಂಬರಿಕರಣ ಮಾಡಬೇಕೆಂದು ವಾಹನ ಸಂಚಾರ ಪ್ರಯಾಣಿಕರು ಆಗ್ರಹಿಸಿದ್ದಾರೆ. 

ಕಳೆದ ಮೂರು ದಿನಗಳಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯ ಮಧ್ಯದಲ್ಲಿ ಭಾರಿ ಮಳೆಯಾದ ಕಾರಣ ರಸ್ತೆಯ ಮೇಲೆ ಗುಂಡಿ ರೋಡ ಹೆಚ್ಚಾಗಿದೆ. ಆ ಗುಂಡಿಯಲ್ಲಿ ಮಳೆಯ ನೀರು ನಿಂತು ರಸ್ತೆ ಇದೆಯೋ ಅಥವಾ ಗುಂಡಿ ಇದೆಯೋ ಎಂದು ತಿಳಿಯುತ್ತಿಲ್ಲ. ಆ ಗುಂಡಿಯಲ್ಲಿ ನೀರು ನಿಂತ ನಂತರ ವಾಹನ ಪ್ರಯಾಣಿಕರು ಜೋರಾಗಿ ಬಂದ ನಂತರ ಅಪಘಾತವಾಗುವ ಸಂಭವ ಇರುತ್ತದೆ. ರಸ್ತೆ ದುರಸ್ತಿಗೊಂಡ ನಂತರ ಮಾತ್ರ ವಾಹನ ಸಂಚಾರ ಸುಗಮವಾಗುತ್ತದೆ. ಕರ್ನಾಟಕ ಸರ್ಕಾರ ಸಾಂಗಲಿ ಹಾಗೂ ಕೊಲ್ಹಾಪೂರ ಜಿಲ್ಲೆ ಮಹಾರಾಷ್ಟ್ರಕ್ಕೆ ಸಂಪರ್ಕ ಇರುವ ರಸ್ತೆಗಳನ್ನು ಡಾಂಬರಿಕರಣ ಮಾಡಿದ್ದಾರೆ.  

ವಿಶೇಷವಾಗಿ ಮಹಾರಾಷ್ಟ್ರ ಸರ್ಕಾರ ಜತ್ತ ತಾಲೂಕಿನಿಂದ ಅಥಣಿ ತಾಲೂಕಿಗೆ ಗಡಿ ಸಂಪರ್ಕ ಗ್ರಾಮಗಳಾಗಿರುವ ಉಮರಾಣಿ-ರಾಮತೀರ್ಥ, ಉಮರಾಣಿ-ಕಕಮರಿ, ಸಿಂಧೂರ-ಬೇಡರಹಟ್ಟಿ, ಗೂಗ್ವಾಡ-ಬಳ್ಳಿಗೇರಿ, ಡಪಳಾಪೂರ-ಅನಂತಪೂರ. ಕವಟೆಮಹಾಂಕಾಳ ತಾಲೂಕಿನಿಂದ ಅಥಣಿ ತಾಲೂಕಿಗೆ ಸಂಪರ್ಕ ರಸ್ತೆಗಳು ಲೋನಾರವಾಡಿ-ಖಿಳೇಗಾಂವ, ಚಾಬೂಕ್ಸರವಾಡಿ-ಪಾಂಡೆಗಾಂವ, ಕಂಗನೋಳಿ-ಪಾಂಡೆಗಾಂವ ಸೇರಿದಂತಹ ಇನ್ನಿತರ ಕರ್ನಾಟಕ ರಸ್ತೆಗಳು ಗಡಿಗಳವರೆಗೆ ಡಾಂಬರಿಕರಣ ಪೂರ್ಣಗೊಳಿಸಿದ್ದಾರೆ. ಆದರೆ ಮಹಾರಾಷ್ಟ್ರ ಸರ್ಕಾರ ತಮ್ಮ ಗಡಿಗಳವರೆಗೆ ಅಥಣಿ ತಾಲೂಕಿನ ಯಾವುದೇ ಸಂಪರ್ಕ ರಸ್ತೆಗಳು ಡಾಂಬರಿಕರಣ ಮಾಡಿಲ್ಲ. 

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜತ್ತ, ಕವಟೆಮಹಾಂಕಾಳ, ಮಿರಜ ಕ್ಷೇತ್ರ ಶಾಸಕರು ಗಮನ ಹರಿಸಿ ತಮ್ಮ ಗಡಿಯವರೆಗೆ ರಸ್ತೆ ಡಾಂಬರಿಕರಣ ಮಾಡಿ ವಾಹನ ಸಂಚಾರಕ್ಕೆ ಅನುಮಾಡಿಕೊಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. 

ರಸ್ತೆಗಾಗಿ ನಾವು ಬೀದಿಗಿಳಿದು ಹೋರಾಟ ಮಾಡಿದ ನಂತರ ಕರ್ನಾಟಕ ಸರ್ಕಾರ ತಮ್ಮ ರಾಜ್ಯದ ಗಡಿಯವರೆಗೆ ಸಂಪರ್ಕ ರಸ್ತೆಗಳನ್ನು ಡಾಂಬರಿಕರಣ ಮಾಡಿದ್ದಾರೆ. ಆದರೆ ಮಹಾರಾಷ್ಟ್ರದ ಸರ್ಕಾರ ಕರ್ನಾಟಕದ ಸಂಪರ್ಕ ರಸ್ತೆಗಳನ್ನು ಡಾಂಬರಿಕರಣ ಮಾಡಲು ಮಲತಾಯಿ ಧೋರಣೆ ತೋರಿಸುತ್ತಿದೆ. ಮಹಾರಾಷ್ಟ್ರ ಜತ್ತ, ಕವಟೆಮಹಾಂಕಾಳ, ಮಿರಜ ಶಾಸಕರು ಗಮನ ಹರಿಸಿ ಮಹಾರಾಷ್ಟ್ರ-ಕರ್ನಾಟಕ ಸಂಪರ್ಕ ರಸ್ತೆಗಳ ಡಾಂಬರಿಕರಣ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.  

ಕಿರಣ ಮಿಸಾಳ  

ಗಡಿಭಾಗದ ಹೋರಾಟಗಾರರು ಬೆಳಗಾವಿ ಜಿಲ್ಲಾ ರೈತ ಸಂಘದ ಸಂಚಾಲಕ