ರಾಣೇಬೆನ್ನೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂದಿನ ಕಾಂಗ್ರೇಸ್ ಪಕ್ಷ ತಿದ್ದುಪಡಿ ಮಾಡಬೇಕಾಗಿತ್ತು. ಆದರೆ ಅವರು ಮಾಡದೇಇರುವ ಕಾರ್ಯವನ್ನು ಭಾರತೀಯ ಜನತಾ ಪಕ್ಷವು ಮಾಡಬೇಕಾಯಿತು. ಮಾಡುವುದು ಇಂದಿನ ಅನಿವಾರ್ಯವು ಸಹವಾಗಿದೆ. ಎಂದು ಬಿಜೆಪಿ ಮುಖಂಡ ಡಾ|| ಬಿ.ಎಸ್.ಕೇಲಗಾರ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ನಡೆದ ಅರಿವು ಮತ್ತು ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಧರ್ಮದ ಮೇಲೆ ದೇಶದ ವಿಭಜನೆಗೆ ಕಾಂಗ್ರೇಸ್ ಕಾರಣವಾಗಿದೆ. ಭಾರತದ ಅಲ್ಪಸಂಖ್ಯಾತರಿಗೆ ಸಮಾನ ಸ್ಥಾನ ಮಾನ ನೀಡಲಾಗಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಮುಖ್ಯಮಂತ್ರಿಗಳು ಹಾಗೂ ಸ್ಪೀಕರ್ ಸೇರಿದಂತೆ ಎಲ್ಲಾ ಉನ್ನತ ಹುದ್ದೆಗಳನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಇದನ್ನು ಬಹುಸಂಖ್ಯಾತರು ವಿರೋಧಿಸಿಲ್ಲ. ಆದರೆ ನೆರೆ ರಾಷ್ಟ್ರಗಳಲ್ಲಿ ಹಿಂಸೆ ಅನುಭವಿಸಿ ತಮ್ಮದೇ ತಾಯ್ನಾಡಿಗೆ ವಾಪಸ್ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡದೇ ವಿರೋಧ ಮಾಡಲಾಗುತ್ತಿದೆ ಎಂದ ಅವರು ರಕ್ಷಣೆ ಕೋರಿ ಬಂದ ನಿರಾಶ್ರಿತರಿಗೆ ನೆಲೆ ಕೊಟ್ಟಿರುವ ದೇಶ ನಮ್ಮದಾಗಿದೆ. ಆಶ್ರಯ ನೀಡಿ ಬಂದವರಿಗೆ ರಕ್ಷಣೆ ನೀಡಿರುವ ದೇಶ ಭಾರತವಾಗಿದೆ ಎಂದು ವಿವರಿಸಿ ಮಾತನಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಹಾವೇರಿ ಜಿಲ್ಲಾ ಸಂಚಾಲಕ ಮುರಿಗೆಪ್ಪ ಶೆಟ್ಟರ್ ಮಾತನಾಡಿ ಇದು ಯಾವ ಅಲ್ಪಸಂಖ್ಯಾತರ ಪೌರತ್ವವನ್ನು ಕಸಿದುಕೊಳ್ಳುತ್ತಿಲ್ಲ.
ಬದಲಾಗಿ ಪೌರತ್ವವನ್ನು ನೀಡಲಾಗುತ್ತಿದೆ. ಆದ್ದರಿಂದ ಇಡೀ ಭಾರತಾದ್ಯಂತ ಭಾರತೀಯ ಜನತಾ ಪಾಟರ್ಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಲ್ಲಿ ಪ್ರತಿಯೊಬ್ಬ ನಾಗರೀಕರು ಪಾಲ್ಗೊಂಡು ಕಾಯ್ದೆ ಜಾರಿಗೆ ತಂದಿರುವ ಸದುದ್ದೇಶದವನ್ನು ಅರ್ಥ ಮಾಡಿಕೊಂಡು ಜನಜಾಗೃತಿಗೊಳಿಸಿ ಶಾಂತಿ-ಸುವ್ಯವಸ್ಥೆಯಿಂದ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ, ನಗರ ಘಟಕ ಅಧ್ಯಕ್ಷ ದೀಪಕ ಹರಪನಹಳ್ಳಿ, ಸಹ ಸಂಚಾಲಕ ಯುವರಾಜ ಬಾರಾಟಕ್ಕೆ, ಕಿರಣ ಬೇವಿನಹಳ್ಳಿ ಕಾಲೇಜು ಪ್ರಾಚಾರ್ಯ ಎಂ.ವಿ.ಎಲಿಗಾರ ಸೇರಿದಂತೆ ಉಪನ್ಯಾಸಕರು, ಕಾಲೇಜಿನ ನೂರಾರು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು