ಬಳ್ಳಾರಿ: 'ವಿದ್ಯುನ್ಮಾನ ಸಾಕ್ಷಿ' ವಿಷಯಗಳ ಅಗತ್ಯ: ನ್ಯಾ.ಫಣೀಂದ್ರ

ಲೋಕದರ್ಶನ ವರದಿ

ಬಳ್ಳಾರಿ 23: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸೈಬರ್ಕ್ರೈಂಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂದು ನಡೆಯುತ್ತಿರುವ ಬಹುತೇಕ ಅಪರಾಧಗಳಲ್ಲಿ ವಿದ್ಯುನ್ಮಾನ ಸಾಧನಗಳನ್ನೇ ಬಳಸಿ ಮಾಡಲಾಗುತ್ತಿದೆ. ಈ ಹಿನ್ನೆಲೆ ನಾವು ವಿದ್ಯುನ್ಮಾನ ಸಾಕ್ಷಿಗಳ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಕನರ್ಾಟಕ ಹೈಕೋರ್ಟ್  ನ್ಯಾಯಮೂರ್ತಿ  ಕೆ.ಎನ್.ಫಣೀಂದ್ರ ಹೇಳಿದರು.

ಕನರ್ಾಟಕ ನ್ಯಾಯಾಂಗ ಅಕಾಡೆಮಿ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನ್ಯಾಯಾಂಗ ಅಧಿಕಾರಿ, ಪೊಲೀಸ್ ಅಧಿಕಾರಿ, ಫಿರ್ಯಾದಿಗಳಿಗೆ,ಜಿಲ್ಲಾ ನ್ಯಾಯಾಂಗ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ವಿದ್ಯಾನ್ಮಾನ ಸಾಕ್ಷಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೈಬರ್ಕ್ರೈಂ ಜಾಲ ದಿನೇ ದಿನೇ ವ್ಯಾಪಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅವುಗಳ ಪ್ರಮಾಣವೇ ಜಾಸ್ತಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಲಕ್ಷಿಸುವ ಮತ್ತು ಅಸಡ್ಡೆ ತೋರುವುದರ ಬದಲು ಅವುಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾಗಬೇಕು ಎಂದು ಹೇಳಿದ ಅವರು ಮಾಹಿತಿ ತಂತ್ರಜ್ಞಾನ ಕಾಯ್ದೆ ಬಂದು 19 ವರ್ಷಗಳಾಗುತ್ತ ಬಂದರೂ ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯತೆ ಇಂದೆಂದಿಗಿಂತಲೂ ಹೆಚ್ಚು ಇದೆ ಮತ್ತು ಕಡಿವಾಣ ಹಾಕುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕಾರ್ಯನಿರ್ವಹಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಬೇರೇ ರೀತಿಯ ಸಾಕ್ಷಿಗಳು ಬರುವುದೇ ಇಲ್ಲ; 

ನ್ಯಾಯಾಲಯಗಳು ಕಾಗದರಹಿತವಾಗಿ ಕಾರ್ಯನಿರ್ವಹಿಸಲಿವೆ ಮತ್ತು ತನಿಖೆಗಳನ್ನು ಕೂಡ ತನಿಖಾಧಿಕಾರಿಗಳು ಕಾಗದರಹಿತವಾಗಿ ನಿರ್ವಹಿಸುವ ಕಾಲಗಳು ಬರಲಿವೆ ಎಂಬ ಅಭಿಪ್ರಾಯವನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ ಹೈಕೋರ್ಟ  ನ್ಯಾ.ಫಣೀಂದ್ರ ಅವರು ವಿದ್ಯುನ್ಮಾನ ಸಾಕ್ಷಿಗಳ ಸಂಬಂಧಿಸಿದ ಕಾಯ್ದೆ-ಕಾನೂನು ಕೂಡ ನನ್ನ ಪ್ರಕಾರ ಸಮರ್ಪಕವಾಗಿಲ್ಲ; ಅದರ ತಿದ್ದುಪಡಿಗೆ ಸಲಹೆಗಳನ್ನು ಕೊಡಬೇಕು. ಕಾನೂನಾತ್ಮಕವಾಗಿ ಹೇಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದಕ್ಕೆ ಸಂಬಂಧಿಸಿದಂತೆ ಈ ಕಾರ್ಯಾಗಾರದಲ್ಲಿ ಮುಕ್ತವಾಗಿ ಚಚರ್ೆ ಮಾಡಲಾಗುತ್ತದೆ ಎಂದರು.

`ಸಿಐಡಿ ಸೈಬರ್ಕ್ರೈಂ ಡಿಎಸ್ಪಿ ಎಂ.ಡಿ.ಶರತ್ ಅವರು ವಿದ್ಯುನ್ಮಾನ ಸಾಕ್ಷ್ಯಗಳ ಸಂಗ್ರಹ ಮತ್ತು ರಕ್ಷಣೆ,ಕ್ರೈಂ ತನಿಖೆ, ವಿದ್ಯುನ್ಮಾನ ಸಾಕ್ಷ್ಯಗಳ ತನಿಖೆ ಮತ್ತು ವಶ, ಪ್ರಾಥಮಿಕ ಮತ್ತು ದ್ವಿತೀಯ ವಿದ್ಯುನ್ಮಾನ ಸಾಕ್ಷ್ಯಗಳು, ಎಸ್ಒಪಿ ಮಹತ್ವ ಮತ್ತು ತನಿಖೆ, ವಿದ್ಯುನ್ಮಾನ ಸಾಕ್ಷ್ಯಗಳ ಅಗತ್ಯತೆ ಮತ್ತು ಮಹತ್ವ, ಸಿಡಿಆರ್ ಪರಿಚಯ ಮತ್ತು ವಿಶ್ಲೇಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅವರು ಕಾರ್ಯಾಗಾರದಲ್ಲಿ ಸವಿವರವಾಗಿ ವಿವರಿಸಿದರು.

ಬೆಂಗಳೂರಿನ ನ್ಯಾಯವಾದಿ ಸಂದೇಶ ಜೆ.ಚೌಟಾ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿ ನಿರ್ದೇಶಕಿ ಪ್ರಭಾವತಿ ಹಿರೇಮಠ ಅವರು ವಿದ್ಯುನ್ಮಾನ ಸಾಕ್ಷಿಗಳ ಉತ್ಪಾದನೆ, ಪ್ರವೇಶಿಸುವಿಕೆ ಮತ್ತು ಪ್ರಶಂಸೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತಿಳಿಸಿದರು.