ಬಳ್ಳಾರಿ 13: ಜೆಡಿಎಸ್ ಪಕ್ಷದಿಂದ ಹಲವು ಶಾಸಕರು ರಾಜೀನಾಮೆ ನೀಡಲು ಹೊರಟ್ಟಿದ್ದಾರೆಂಬ ವಿಷಯ ಕಾಲ್ಪನಿಕವಾದದ್ದು ಭಿನ್ನಾಭಿಪ್ರಾಯದ ಮಾತು ಇರುವುದು ನಿಜ ನಾಯಕತ್ವದ ವಿರುದ್ದ ಬಿಟ್ಟು ಹೋದವರು ವೆಂಟಿಲೇಟರ್ ನಲ್ಲಿದ್ದಾರೆ. ಪಕ್ಷ ವಿರೋದಿ ಚಟುವಟಿಕೆ ಮಾಡುವ ಶಾಸಕರ ವಿರುದ್ದ ದೇವೇಗೌಡರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಿದ್ದೆವೆ ಎಂದು ಜೆಡಿಎಸ್ ರಾಜ್ಯ ಘಟಕದ ಅದ್ಯಕ್ಷ ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ಸರ್ಕಾರಿ ಅಥಿತಿ ಗೃಹದಲ್ಲಿ ಸುದ್ಧಿಗಾರರೊಂದಿಗೆ ಮಾತಾನಾಡಿ ನಮ್ಮ ಪಕ್ಷದ ಶಾಸಕರಗಳು ರಾಜೀನಾಮೆ ನೀಡಲು ಬಿಜೆಪಿ ಪ್ರಚೋದನೆ ಇರಬಹುದು ಎಂದರು.
ರಾಜ್ಯದಲ್ಲಿ ಆಸ್ಥಿರತೆ ಕಾಡುತಿದೆ. ಅಭಿವೃದ್ಧಿ ಆಗುತ್ತಿಲ್ಲ ರಾಜ್ಯದ ಪರಿಸ್ಥಿತಿಯ ಬಗ್ಗೆ ಆಡಳಿತ ನೆಡೆಸುವವರು ಏನು ನೆಡೆಯತ್ತಿದೆ ಎಂಬುದನ್ನು ವಿರೋದ ಪಕ್ಷವಾದ ನಮಗೂ ಅಲ್ಲದಿದ್ದರೂ ಜನತೆಗೆ ಉತ್ತರ ಕೊಡಲಿ ಎಂದರು. ಕೇಂದ್ರ ಸರ್ಕಾರ ದೇಶದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಬೇಕಾಗಿದೆ ಎಂದರು. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಜೆಡಿಎಸ್ ಪಕ್ಷದ ಎಲ್ಲಾ ಘಟಕಗಳನ್ನು ಪುನರ್ ರಚಿಸಲಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಮೀನಳ್ಳಿ ತಾಯಣ್ಣ, ಕಿರಣ್ ಕುಮಾರ್, ವಿಜಯ್ ಕುಮಾರ್ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.