ಸಿಂದಗಿ 02: ಅಖಂಡ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ ಬಸವಣ್ಣನವರು ತಮ್ಮ ವಚನ ಸಾಹಿತ್ಯ ಮೂಲಕ ಸಾಮಾಜಿ ನ್ಯಾಯ, ದಾಸೋಹ, ಸಮಾನತೆ ಹೀಗೆ ಹತ್ತು ಹಲವಾರು ಆಚಾರ ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ನಾವು ಅರಿತು ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಬುಧವಾರ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕಾ ಆಡಳಿತದಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಬರೆದಂತ ಸಾವಿರಾರು ವಚನಗಳನ್ನು ಓದಲಿಕ್ಕಾಗಲಿಲ್ಲ. ಅವರು ಬರೆದು ಕೆಲವು ವಚನಗಳನ್ನು ನಾವು ಓದಿದೆವೆಂದರೆ ಜೀವನ ಸಾಗಿಸಲು ಸಾಧ್ಯ. ಪ್ರಚಲಿತ ವಿದ್ಯಮಾನದಲ್ಲಿ ಅವರ ವಚನ ಪ್ರಸ್ತುತಇವೆ.
ಅರ
ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ತಹಶೀಲ್ದಾರ ಡಾ. ಪ್ರದೀಪಕುಮಾರ ಹಿರೇಮಠ, ರಾಷ್ಟ್ರೀಯ ಬಸವದಳ ಸಮಿತಿಯ ತಾಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಅಶೋಕ ಅಲ್ಲಾಪೂರ, ಅಶೋಕ ತೆಲ್ಲೂರ, ವಾಯ್.ಸಿ. ಮಯೂರ ಅವರು ವೇದಿಕೆ ಮೇಲೆ ಇದ್ದರು.
ಸಾಹಿತಿ ಅಶೋಕ ಬಿರಾದಾರ ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಉಪ ನೋಂದಣಾಧಿಕಾರಿ ಎಂ.ಆರ್. ಪಾಟೀಲ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಅಮರೇಶ ಚೌಗುಲೆ, ಡಾ.ರ.ವಿ. ಗೋಲಾ, ಸಿದ್ದಬಸವ ಕುಂಬಾರ, ಆರ್.ಆರ್. ಪಾಟೀಲ, ಗುರು ಬಸರಕೋಡ, ಶಿವಾನಂದ ಕಲಬುರ್ಗಿ, ಗುರು ತಾರಾಪೂರ, ದಾನಪ್ಪ ಜೋಗೂರ, ಮುತ್ತು ಮುಂಡೆವಾಡಗಿ, ಶಿವಕುಮಾರ ಶಿವಸಿಂಪಿಗೇರ, ಆರ್.ಪಿ. ಬಿರಾದಾರ, ಎಂ.ಎಂ. ಹಂಗರಗಿ, ಐ.ಎ. ಮಕಾಂದಾರ, ಗಂಗಾಧರ ಸೋಮನಾಯಕ, ರಾಘವೇಂದ್ರ ಜೋಶಿ, ಶಶಿರೇಖಾ ತಾರನಾಳ, ವಿಜಯಲಕ್ಷ್ಮಿ ಶಹಾಪೂರ, ಸ್ನೇಹಾ ಕೊಪ್ಪಾ, ಎಂ.ಜಿ. ಮಾಲಗಾರ, ಸಿ.ಬಿ. ಬಾಬಾನಗರ, ಆಸ್ಪಾಕ ಕೋಲಾರ, ಚೇತನ ಬೋಸಗಿ, ಜಗದೀಶ ಶಹಾಪೂರ ಸೇರಿದಂತೆ ರಾಷ್ಟ್ರೀಯ ಬಸವದಳ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.