ಲೋಕದರ್ಶನ ವರದಿ
ವಿಶ್ವದ ಮಹಾನ್ ದಾರ್ಶನಿಕ ಬಸವಣ್ಣ : ಅರವಿಂದ ಜತ್ತಿ
ಬೈಲಹೊಂಗಲ, 05 : ಕನ್ನಡ ನಾಡಿನ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರು ವಿಶ್ವದ ಮಹಾನ್ ದಾರ್ಶನಿಕ ಎಂದು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಹೇಳಿದರು. ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025ರ ನಿಮಿತ್ತ ಪಟ್ಟಣದ ಚೆನ್ನಮ್ಮಾ ಸಮಾಧಿ ರಸ್ತೆಯಲ್ಲಿರುವ ಗಣಾಚಾರಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಲೋಕಾರೆ್ಣ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಕಲ ಜೀವರಾಶಿಗೆ ಲೇಸನ್ನು ಬಯಸಿ, ನುಡಿದಂತೆ ನಡೆದು ತೋರಿಸಿ, ಸಾತ್ವಿಕ ಬದುಕಿನ ಎಲ್ಲ ತತ್ವಗಳನ್ನು ತಿಳಿಸಿ, ವಿಶ್ವಮಾನವತ್ವವನ್ನು ಸಾರಿ ಹೇಳಿದ ಬಸವಣ್ಣನವರು ಎಲ್ಲ ಕವಿಗಳಿಗೆ ಪ್ರೇರಣೆಯಾಗಲಿ ಎಂದು ಅವರು ಅಭಿಪ್ರಾಯಪಟ್ಟರು. ಲೋಕಾನುಭವ ಮತ್ತು ಶಿವಾನುಭವಗಳ ಮಹಾಸಂಗಮವೇ ವಚನ. ಕವಿತೆಗೆ ಭಾವ, ವಚನಕ್ಕೆ ಅನುಭಾವ ಮುಖ್ಯ ಎಂದು ಅವರು ಹೇಳಿದರು. ಎಲ್ಲ ಕಾಲಕ್ಕೂ ಸಲ್ಲುವ, ಹೃದಯಕ್ಕೆ ಮುಟ್ಟುವ ಶ್ರೇಷ್ಠ ಸಾಹಿತ್ಯವನ್ನು ರಚಿಸುವ ಸೃಜನಶೀಲತೆಯನ್ನು ಕವಿಗಳು ಬೆಳೆಸಿಕೊಳ್ಳುವಂತೆ ಅವರು ಕಿವಿಮಾತು ಹೇಳಿದರು. ರಾಜ್ಯಮಟ್ಟದ ಕವಿಗೋಷ್ಠಿಯ ಮುಖ್ಯ ಸಂಯೋಜಕರು, ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಪಾಸ್ತಾವಿಕವಾಗಿ ಮಾತನಾಡಿ 1964 ರಲ್ಲಿ ಸ್ಥಾಪನೆಯಾದ ಬಸವ ಸಮಿತಿಯು ಬಸವಾದಿ ಶರಣರ ಜೀವನ-ಸಾಧನೆ, ತತ್ವ-ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವ ಮಹತ್ಕಾರ್ಯ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ದೇಶ-ವಿದೇಶದ 50 ಭಾಷೆಗಳಲ್ಲಿ ವಚನಗಳನ್ನು ಅನುವಾದ ಮಾಡುವುದರ ಮೂಲಕ ಕನ್ನಡ ನಾಡಿನ ಹೆಮ್ಮೆಯ ವಚನ ಸಾಹಿತ್ಯದ ಪ್ರಸಾರ ಮಾಡುತ್ತಿರುವುದು ಸಮಿತಿಯ ಹೆಗ್ಗಳಿಕೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿ ಬಸವಾದಿ ಶರಣರ ಕುರಿತು ಕವನ ವಾಚಿಸಿದ ಕವಿಗಳ ಉತ್ಸಾಹ, ಆಸಕ್ತಿ ಮೆಚ್ಚುವಂತದ್ದು ಎಂದು ಹೇಳಿದರು. ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು ಉದಯೋನ್ಮುಖ ಕವಿಗಳು ವಚನ ಅಧ್ಯಯನ ಮಾಡುವುದರಿಂದ ನಾವಿನ್ಯಯುತ ಕಾವ್ಯರಚನೆಗೆ ಸ್ಪೂರ್ತಿ ಪಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭೆಯ ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಡಾ. ಎ.ಎನ್. ಬಾಳಿ, ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲ್ಲೆ ಮಹಿಳಾ ಘಟಕದ ಅಧ್ಯಕ್ಷರಾದ ಪ್ರೇಮಕ್ಕ ಅಂಗಡಿ, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿದ್ಯಾವಿಷಯತ್ ಸದಸ್ಯರಾದ ಡಾ.ಚಂದ್ರಶೇಖರ ಗಣಾಚಾರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಸಂತೋಷ ಕೊಳವಿ, ಜಾಗತಿಕ ಲಿಂಗಾಯತ ಮಹಾಸಭಾದ ಬೈಲಹೊಂಗಲ ನಗರ ಘಟಕ ಅಧ್ಯಕ್ಷರಾದ ಮಹೇಶ ಕೋಟಗಿ, ಕನ್ನಡ ಜನಪದ ಪರಿಷತ್ತಿನ ತಾಲೂಕಾಧ್ಯಕ್ಷರಾದ ಚಂದ್ರಶೇಖರ ರುದ್ರ್ಪ ಕೊಪ್ಪದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜ್ಯ ವಿವಿಧೆಡೆಯಿಂದ ಆಗಮಿಸಿದ ರಾಜು ಎಂ. ಯಳಮೇಲಿ, ಬಸವರಾಜ ಚೋಳೆನಹಳ್ಳಿ, ಶಂಕರಬಾಯಿ ನಿಂಬಾಳಕರ, ಸುಭಾಷ ಬಾಬು ಬಸ್ತವಾಡ, ಗೀತಾ ಅಶೋಕ ಶೇಠಿ, ಬಿ.ಡಿ.ಎಸ್. ರಾಜಪ್ಪ, ಶೈಲಜಾ ಎಂ. ಕೋರಿಶೆಟ್ಟರ, ಅರುಣಕುಮಾರ ರಾಜಮಾನೆ, ಅಶ್ವಿನಿ ಬಸವರಾಜ ಚಿಪ್ಪಲಕಟ್ಟಿ ಮಹಾಂತೇಶ ಹ ಸೊಪ್ಪಿನವರು, ಸಂದೀಪ ಎಂ.ಪಿ., ಯಶವಂತ ಮೇತಿ, ಶೇಖರಯ್ಯ ಟಿ. ಹೆಚ್. ಎಂ., ಆತ್ಮಾನಂದ ಅ. ಗೆದ್ದಿಕೇರಿ, ಅರುಣ ರೇವಣೆಪ್ಪ, ಬಂಕಾಪುರ, ಬಸಪ್ಪ ಹೊ.ಶೀಗಿಹಳ್ಳಿ, ಆನಂದ ಯಲ್ಲಪ್ಪ ಕೊಂಡಗುರಿ, ಗಂಗವ್ವ ಗು. ಮಠಪತಿ, ಶೀಲಾ ವಿ. ಕೋರಿಮಠ, ಶಿವಾನಂದ ಗು. ಮಠಪತಿ, ಯಂಕಪ್ಪ ಯ. ಅಂಬಿಗೇರ, ಅಕ್ಕಮಹಾದೇವಿ ನಾಡಗೌಡ, ಪ್ರೀತಿ ಪ್ರದೀಪ ತುಳಜಣ್ಣವರ, ಡಾ. ಭವ್ಯ ಅಶೋಕ ಸಂಪಗಾರ, ಮಲ್ಲಿಕಾರ್ಜುನ ಹ. ಕೆರೂಡಿ, ಹೇಮಾ ಮೊರಬ, ಗೌರಾ ಉ. ಹಾಲಭಾವಿ, ಯಶವಂತ ಭರಮಣ್ಣ ಉಚಗಾಂವಕರ, ಮಹಾಂತೇಶ ವೈ ಗೋನಕೊಪ್ಪ, ವಿಜಯಲಕ್ಷ್ಮಿ ಎಂ. ತಿರಕಣ್ಣವರ, ಬಿ.ಬಿ. ಇಟ್ಟಣ್ಣವರ, ನಾಗಯ್ಯ ಈಶ್ವರಯ್ಯ ಹುಲೆಪ್ಪನವರಮಠ, ಬಿ.ಕೆ.ಹೊಂಗಲ, ಚಿನ್ನಪ್ಪಗೌಡ ಮ. ಪಾಟೀಲ, ದಾನಮ್ಮ ವಿ. ಅಂಗಡಿ, ಕೇಶವ ಜಿ., ಮಧುಮತಿ ಈಶ್ವರ ಸಣಕಲ್ಲ, ಶಶಿಕಲಾ ಎಸ್ ಕುಲಕರ್ಣಿ, ಡಾ. ಮಹಾಂತೇಶ ಬಸಪ್ಪ ಹಳಪೇಟಿ, ಭೀಮಸೇನ ಚಿಂಚಲಿ, ನೇಹಾ ಶ್ರೀನಿವಾಸ ಬಡಿಗೇರ, ವೀಣಾ ಮಂಜುನಾಥ, ಲಲಿತಾ ಮಹಾಂತೇಶ ಅರಳಿ, ಮಲ್ಲಪ್ಪ ಈರ್ಪ ಚಾಯಪ್ಪಗೋಳ, ಯಲ್ಲಪ್ಪ ಕಲ್ಲಪ್ಪ ಕೊಣ್ಣೂರ, ಗೌರಿ ಯಲ್ಲನಗೌಡ ಮೇಳೇದ, ವಿರೂಪಾಕ್ಷಿ ಕಮತೆ, ಬಸವಣ್ಣೆಪ್ಪ ಭೀ. ಕಾದ್ರೊಳ್ಳಿ, ಭೀಮಾ ಶಿವಾನಂದ ಕುರ್ಲಗೇರಿ, ಮಮತಾ ಮಲ್ಲಾಗೌಡ್ರ, ಜ್ಯೋತಿ ಮಾಳಿ, ನಾಗನಗೌಡ ಕಲ್ಲನಗೌಡ ಹಾದಿಮನಿ, ಬಾಳಗೌಡ ಶಂಕರ ದೊಡಬಂಗಿ, ಪುಷ್ಪಲತಾ ಭಾವಿಮನಿ, ವಿಜಯರೂಪಾ ತಂಬಾಕದ, ಸಾಗರ ಚನ್ನಪ್ಪ ಹುನಗುಂದ, ದೀಪಾ ಶಿವಾನಂದ ನರೇಂದ್ರ, ಸುಶ್ಮಿತಾ ರಾಘವೇಂದ್ರ ಮರೇದ, ಪವಿತ್ರಾ ಈರ್ಪ ನರೇಂದ್ರ, ವೀರಮ್ಮ ಎಸ್. ಹಿರೇಬಿದರಿ, ಮಧು ಚಂದ್ರಶೇಖರ ಚನ್ನಂಗಿ, ಚಂದ್ರಶೇಖರ ನಿಂ. ಚನ್ನಂಗಿ, ಡಾ.ಮಲ್ಲಿಕಾರ್ಜುನ ಛಬ್ಬಿ, ಸುಧಾ ಕಬ್ಬೂರ, ಸುವರ್ಣಾ ಮಾಳಗಿಮನಿ, ರಾಮಕೃಷ್ಣ ಗೋಖಲೆ, ಅಫ್ರಿನ್ ಮುಸ್ತಫಾ ಮೊಖಾಶಿ, ಮಹಾಂತೇಶ ಬಾಳಿಗಟ್ಟಿ, ಮೈಲಾರ್ಪ ಗೋವನ್ನವರ, ಗುರುಸ್ವಾಮಿ ಹಿರೇಮಠ, ಅಡಿವೆಪ್ಪ ಇಟಗಿ, ಮಹಾಂತೇಶ ಮುದಕನಗೌಡರ, ರೇಷ್ಮಾ ಕೋಳಿ, ಚೇತನ ಕವಿ-ಕವಯಿತ್ರಿಯರು ಕವನ ವಾಚಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಕೋಳಿ ನಿರೂಪಿಸಿದರು. ಚಿಕ್ಕಬೆಳ್ಳಿಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಇಬ್ರಾಹಿಮ್ ಎಮ್. ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.