ಬಸವಣ್ಣನವರ ತತ್ವಾದರ್ಶಗಳು ತಳಸಮುದಾಯದಲ್ಲಿ ಜೀವಂತವಾಗಿವೆ

Basavanna's philosophies are alive in the grassroots community

ಹಾವೇರಿ 02  : 12ನೇ ಶತಮಾನದಲ್ಲಿ ಜಾತಿಭೂತವನ್ನು ತೊಲಗಿಸಬೇಕೆಂದು ನಿರ್ಧರಿಸಿದ್ದ ಬಸವಣ್ಣನವರು ಸಮಗಾರ ಹರಳಯ್ಯನ ಮಗ ಶೀಲವಂತ ಹಾಗೂ ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯವತಿಯ ವಿವಾಹವನ್ನು ತಾವೇ ಮುಂದು ನಿಂತು ನೆರವೇರಿಸುತ್ತಾರೆ.

ಇದನ್ನು ಸಹಿಸದ ಸಂಪ್ರದಾಯವಾದಿಗಳು  ಶರಣರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಆಗ ನಡೆದುದೆ ಕಲ್ಯಾಣ ಕ್ರಾಂತಿ ಎಂದು  ಸಮಗಾರ ಹರಳಯ್ಯ (ಚಮ್ಮಾರ) ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ ಬೆಟಗೇರಿ ಹೇಳಿದರು.ಬುಧವಾರ ಇಲ್ಲಿನ ಬೆಟಗೇರಿ ಬಿಲ್ಡಿಂಗ್ನಲ್ಲಿ  ಸಮಗಾರ ಹರಳಯ್ಯ (ಚಮ್ಮಾರ) ಸಂಘದ ರಾಜ್ಯ  ಹಾಗೂ ಜಿಲ್ಲಾ- ತಾಲೂಕಾ ಘಟಕಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಲ್ಯಾಣ ಕ್ರಾಂತಿ ನಡೆಯಲು ಪ್ರಮುಖ ಕಾರಣಕರ್ತರು ಸಮಗಾರ ಹರಳಯ್ಯನವರು, ಸಮಕಾಲಿನ ಶರಣರಲ್ಲಿ ಗುರುತಿಸಿಕೊಂಡ ಹರಳಯ್ಯನವರ ಆದರ್ಶ ಭಕ್ತಿ ಇಂದಿನ ಯುವ ಪೀಳಿಗೆಯಲ್ಲಿ ಮೂಡಿಸಿಬೇಕು. ಸಮಾಜಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರಿಗೆ ಉತ್ತಮ ಸಂಸ್ಕಾರ ನೀಡಬೇಕೆಂದರು.ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ-ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ ಜಾತಿ ಕಂದಕಗಳನ್ನು ದೂರ ಮಾಡುವ ಮೂಲಕ ಬಸವಣ್ಣವರ ಕ್ರಾಂತಿಯಿಂದ ಇಂದು ಸಣ್ಣ ಸಮಾಜಗಳು ಸಮಾನತೆ ನಿಟ್ಟಿನಲ್ಲಿ ಬದುಕುವಂತಾಗಿದೆ. ಅಂದು ಬಸವಣ್ಣನವರು  ಆರಂಭಿಸಿದ ಸಮ ಸಮಾಜ ನಿರ್ಮಾಣದ ಚಳುವಳಿ ಬಹ ದೊಡ್ಡ ಆಂದೋಲನವನ್ನೇ ಹುಟ್ಟುಹಾಕಿತು. 

ಶರಣ ಸಮಗಾರ ಹರಳಯ್ಯನವರು 12 ನೇಶತಮಾನದಲ್ಲಿ ತಮ್ಮ ತೊಡೆಯ ಚರ್ಮದಿಂದ ನಿರ್ಮಿಸಿದ್ದ ಪಾದರಕ್ಷೆಗಳು ಈಗಲೂ ಬಿಜನಳ್ಳಿಯಲ್ಲಿದ್ದು, ಕಲ್ಯಾಣಕ್ರಾಂತಿಗೆ ಸಾಕ್ಷಿಯಾಗಿವೆ. ಬಸವಣ್ಣನವರ ತತ್ವಾದರ್ಶಗಳು ತಳಸಮುದಾಯದಲ್ಲಿ ಜೀವಂತವಾಗಿವೆ ಎಂದರು.ಮುಖ್ಯ ಅತಿಥಿಗಳಾಗಿ ಮಾದೇವಪ್ಪ ವಾಳದ, ಉತ್ತಪ್ಪ ತೇರದಾಳ, ಮಾತನಾಡಿದರು. ಶ್ರೀದೇವಿ ತೇರದಾಳ್ ಅವರನ್ನು ಸನ್ಮಾನಿಸಲಾಯಿತು. ಧರ್ಮರಾಜ್ ದೊಡ್ಡಮನಿ ಸ್ವಾಗತಿಸಿದರು. ಪೃಥ್ವಿರಾಜ್ ಬೆಟಿಗೇರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಲಿತಮ್ಮ ಹಂಜಗಿ, ಬಸವರಾಜ ಸಾತಪತಿ, ರೂಪೇಶ್ ಬಳ್ಳಾರಿ, ಪರಶುರಾಮ್ ಬಾತಗಾವಿ, ಮಂಜುನಾಥ ರಾಯಭಾಗ, ಸುನಿಲ್ ಬೆಟಗೇರಿ, ದೇವೇಂದ್ರ​‍್ಪ ಅರಕೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಭೂಮಿಕಾ, ಸಂಜನಾ ಬೆಟಿಗೇರಿ ಪ್ರಾರ್ಥಿಸಿದರು.