ಜಮಖಂಡಿ 02: ನಾವು ಶರೀರವನ್ನು ಗೆಲ್ಲಬೇಕು. ತನು ಎಂದರೆ ಶರೀರ ಅದನ್ನು ಒಂದೇ ಜಾಗದಲ್ಲಿ ಕುಳಿತರೆ ಅದು ನಮ್ಮ ಜೀವನಕ್ಕೆ ಸಾಧನೆ ಮಾಡಲು ಸಾಧ್ಯ. ಪರಮಾತ್ಮ ಮೂರು ವಿಧಗಳಲ್ಲಿ ತನುವಿನ, ಮನವ ಧನ ಪರೀಕ್ಷೆ ಮಾಡಿದ್ದಾನೆ ಎಂದು ಹುಬ್ಬಳಿ ಹಾಗೂ ವಿಜಯಪೂರದ ಶ್ರೀ ಷಣ್ಮುಖಾರೂಡ ಮಠದ ಶ್ರೀ ಅಭಿನವ ಸಿದ್ದಾರೂಡ ಮಹಾಸ್ವಾಮಿಗಳು ಹೇಳಿದರು.
ನಗರದ ಓಲೇಮಠದ ಸಹಯೋಗದಲ್ಲಿ ನಡೆದ ಬಸವ ಜಯಂತಿ ನಿಮಿತ್ತ ಶರಣರ ವಚನ ಪ್ರವಚನ ಮತ್ತು ಸದ್ಭಾವನಾ ಪಾದಯಾತ್ರೆ ಅಂಗವಾಗಿ ಸಂಜೆ ನಡೆದ ವಚನ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಲ್ಲಿ ಇಲ್ಲಿ ಸುತ್ತಾಡುವ ಮನಸ್ಸು ಗೆಲ್ಲಬೇಕಾದರೆ ಒಂದೇ ಕಡೆ ಜಾಗೃತಗೊಳಿಸಬೇಕು. ನಮ್ಮ ಭಾರತ ಕಾರ್ಮೋಡದಲ್ಲಿ ಮೊಳಗಿದೆ. ಗಡಿ ಭಾಗದಲ್ಲಿ ನಮ್ಮ ಸೈನಿಕರು ಜೀವದ ಹಂಗು ತೊರೆದು ದೇಶವನ್ನು ರಕ್ಷಿಸುತ್ತಿದ್ದಾರೆ. ಅವರ ಬಗ್ಗೆ ಅಭಿಮಾನವಿರಬೇಕು. ದೇಶದ ಕೃಷಿಕ, ಸೈನಿಕ, ಶಿಕ್ಷಕ ಇವರು ಅನರ್ಗ್ಯರತ್ನಗಳು ಎಂದರು.
ಚಿತ್ರ ನಟ ಚೇತನ ಮಾತನಾಡಿ. ಆದರ್ಶವಾದ ಸಿದ್ದಾಂತದಲ್ಲಿ ಉತ್ತಮ ಸಮಾಜವಿದೆ. ಬುದ್ದ, ಬಸವ, ತತ್ವ ಸಮಾಜ ಸಮಾನತೆ ಕಲ್ಪನೆ ನ್ಯಾಯ ಪರಿಕಲ್ಪನೆ, ಸಂವಿಧಾನ ಹೇಳುತ್ತದೆ. ಬಸವ ತತ್ವ ಸಿದ್ದಾಂತ ಸಮಾನತೆಯನ್ನು ತೋರುತ್ತದೆ ಎಂದರು.
ರೋಟರಿ ಸಂಸ್ಥೆಯ ಹಿರಿಯ ಸದಸ್ಯ ಅಶೋಕ ಕುಲ್ಹಳಿಕರ, ನಿವೃತ್ತ ಪ್ರಾಚಾರ್ಯ ಆರ್, ಎನ್, ಮಡಿವಾಳರ, ಹುಣಶ್ಯಾಳದ ನಿವೃತ್ತ ಶಿಕ್ಷಕ ಸಿ,ಬಿ, ಮೇಟಿ, ಕನ್ನಡ ಸಂಘದ ಮಾಜಿ ಅಧ್ಯಕ್ಷ ರುದ್ರಯ್ಯ ಕರಡಿ ಮಾತನಾಡಿದರು,
ಇದೇ ಸಂದರ್ಭದಲ್ಲಿ ಕಲಾವಿದ ವಿನಾಯಕ ಸುತಾರ ಸಂತನೆಂದರೆ ಯಾರು ಎಂಬ ಹಾಡಿನ ಮೂಲಕ ಶ್ರೀ ಆನಂದ ದೇವರ ಚಿತ್ರ ಬಿಡಿಸಿ ಸೇರಿದ ಜನರ ಮೆಚ್ಚುಗೆಗೆ ಪಾತ್ರರಾದರು.
ಬಿಗ್ ಬಾಸ್ ಖ್ಯಾತಿಯ ಹಣಮಂತು ವೇದಿಕೆಗೆ ಆಗಮಿಸುತ್ತಿದ್ದಂತೆ ಯುವಕ, ಯುವತಿಯರು ಅಭಿಮಾನಿಗಳು ಅವರನ್ನು ಸ್ವಾಗತಿಸಿರುವ ಪರಿ ಜನರ ಮನಮುಟ್ಟಿಸುವಂತಿತು. ಶ್ರೀಗಳ ಆರ್ಶೀವಾದ ಪಡೆದ ಹಣಮಂತು “ಕೇಳ ಜಾನ ಶಿವದ್ಯಾನ ಮಾಡಣ್ಣ” ಎಂಬ ಗಾಯನಕ್ಕೆ ಯುವ ಸಮೂಹ ಪುಲ್ ಫಿದಾ ಆಗಿ ಸಿಳ್ಳೆ ಚಪ್ಪಾಳೆ ಹಾಕಿ ಸಂಭ್ರಮಿಸಿದರು.
ವೇದಿಕೆಯಲ್ಲಿ ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಡಾ. ಕೆ.ಆಯ್ ಗುರಮಠ, ಡಾ. ಆರ್.ವ್ಹಿ ಮೆಟಗುಡ್ಡ,
ಈರಣ್ಣ ಕಾಸರ, ಈರಣಗೌಡ ಪಾಟೀಲ, ಆನಂದ ಪುಕಾಳೆ, ಗೋಪಾಲಕೃಷ್ಣ ವಿಠ್ಠಲಪ್ರಭು, ಅನೀಲ ಸುಣಗದ, ಅಬಾಕಾಯಿ ತೇಲಿ, ಸುಲೋಚನ ಮಡಿವಾಳರ, ಸೌಂದರ್ಯ ವರ್ಧಕಿಯರ ಮಹಿಳಾ ಮಂಡಳದ ಅಧ್ಯಕ್ಷೆ ಶಿವಲೀಲಾ ಎಸ್ ಉಪಾಧ್ಯಕ್ಷೆ ಕಾಂಚನಾ ಪುಕಾಳೆ, ರೇವಣಸಿದ್ದಯ್ಯ ಹಿರೇಮಠ, ಬಸವರಾಜ ಹೊಳೇಪ್ಪಗೋಳ ಇದ್ದರು.ಶಿಕ್ಷಕ ಶಿವಾನಂದ ಕಲ್ಯಾಣಿ ಸ್ವಾಗತಿಸಿ ನಿರೂಪಿಸಿದರು. ಶ್ರೀ ಆನಂದ ದೇವರು ಶರಣು ಸಮರ್ಿಸಿದರು.