ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ : ಸ್ವಾತಿ ಬ್ಯಾಡಗಿ ಮನೆಗೆ ಭೇಟಿ

BJP Women's Front: Visit to Swati Byadgi's house

ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ : ಸ್ವಾತಿ ಬ್ಯಾಡಗಿ ಮನೆಗೆ ಭೇಟಿ 

ಹಾವೇರಿ 19: ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ ಇತ್ತೀಚೆಗೆ ಹತ್ಯೆಯಾದ  ಮಾಸೂರು ಗ್ರಾಮದ ಯುವತಿ ಸ್ವಾತಿ ಬ್ಯಾಡಗಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತೈಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸಿಮಗೌಡ್ರ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿದ್ಯಾ ಶೆಟ್ಟಿ, ಶ್ರೀಮತಿ ಲಲಿತಾ ಗುಂಡೆನಹಳ್ಳಿ,ಸರೋಜಾ ಉಳ್ಳಾಗಡ್ಡಿ,ಕಲಾವತಿ ಬಡಿಗೇರ,ಕಾವ್ಯ ಪಾಟೀಲ, ಕೋಕಿಲಾ,ದೀಪಾ ಆನ್ವೇರಿ,ಮಧು ಪಾಟೀಲ,ಸುಜಾತ ಆರಾಧ್ಯಮಟ,ಅಕ್ಷತಾ ಮೇಗಳಮನಿ,ಚೆನ್ನಮ್ಮ ಗುರುಪಾದಮಠ,ನೀಲಮ್ಮ ನೀಡಗುಂದಿ,ಪಾರ್ವತಿ ಪಾಟೀಲ,ಮಮತಾ ಕಟ್ಟೆಪ್ಪನವರ,ಸರೋಜಾ ಸೇರಿದಂತೆ ಅನೇಕರಿದ್ದರು.