ಎಸ್‌ಎಸ್‌ಎಲ್‌ಸಿಯಲ್ಲಿ ಅಖಿಲ್ ಅಹ್ಮದ್ ನದಾಫ್ ರಾಜ್ಯಕ್ಕೆ ಪ್ರಥಮ
ವಿಜಯಪುರ 04: ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಅಖಿಲ್ ಅಹ್ಮದ್ ನದಾಫ್ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರಜ್ವಲ್ ಪತ್ತಾರ ಅವರನ್ನು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ವಿಜಯಪುರ ಜಿಲ್ಲಾ ಘಟಕ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು. ಮೈಸೂರು ಪೇಟ ತೊಡಿಸಿ ಸಿಹಿ ತಿನಿಸುವ ಮೂಲಕ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಗೌರವ ಸಮರೆ್ಣ ಮಾಡಲಾಯಿತು. ನೇತೃತ್ವ ವಹಿಸಿದ್ದ ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ, ವಿಜಯಪುರ ಪ್ರತಿಭಾನ್ವಿತರ ತವರೂರು, ಪ್ರತಿಭೆಯ ನೆಲೆ, ಈ ಪವಿತ್ರ ಪ್ರತಿಭೆಯ ನೆಲದಲ್ಲಿ ಅಖಿಲ್‌ಅಹ್ಮದ್, ಪ್ರಜ್ವಲ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಅಗ್ರ ರಾ್ಯಂಕ್ ಪಡೆದು ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಶಿವರಾಜ್ ಬಿರಾದಾರ ಮಾತನಾಡಿ, ಶಿಕ್ಷಣ ಬಾಳಿನ ಬೆಳಕು, ಶಿಕ್ಷಣದಿಂದಲೇ ಭವಿಷ್ಯ ಉಜ್ವಲವಾಗಲು ಸಾಧ್ಯ, ಶಿಕ್ಷಕರ ಪುತ್ರ ಇಂದು ರಾಜ್ಯಕ್ಕೆ ಪ್ರಥಮ ರಾ್ಯಂಕ್ ಪಡೆದಿರುವುದು ಒಂದು ರೀತಿ ನಮಗೆ ಹೆಮ್ಮೆ ತರಿಸಿದೆ, ಪ್ರತಿಭೆಯ ಪರಂಪರೆ ವಿಜಯಪುರ ಜಿಲ್ಲೆಯಲ್ಲಿ ಹೀಗೆ ಮುಂದುವರೆಯಲಿ, ಉಳಿದ ವಿದ್ಯಾರ್ಥಿಗಳು ಸಹ ಸಾಧಕ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆದು ಮುನ್ನಡೆಯಬೇಕು, ಕಡಿಮೆ ಅಂಕ ಬಂದರೆ ಕುಗ್ಗಬಾರದು, ಇಷ್ಟಪಟ್ಟು ಓದಿ ಮುಂದೆ ಉತ್ತಮ ಅಂಕ ಗಳಿಸುವತ್ತ ಲಕ್ಷ್ಯ ವಹಿಸಬೇಕು ಹೊರತು ಮಾನಸಿಕವಾಗಿ ಕುಗ್ಗಬಾರದು ಎಂದು ಕಿವಿಮಾತು ಹೇಳಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಕೋಶಾಧ್ಯಕ್ಷ ಜುಬೇರ ಕೆರೂರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಹಡಲಗೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ ಕಮತಗಿ, ಸಂದೀಪ ದೇಶಪಾಂಡೆ, ಮೋಹನ್ ಹೊನ್ನಕೇರಿ, ಶ್ರೀಶೈಲ ಬಿರಾದಾರ, ಬಿ.ಟಿ. ಗೌಡರ, ಎನ್.ಎಸ್. ಪದರೆಡ್ಡಿ, ಬಸಯ್ಯ ಹಿರೇಮಠ, ಬಿ.ಎಂ. ಕಡಿ ಮೊದಲಾದವರು ಪಾಲ್ಗೊಂಡಿದ್ದರು.