ಜಾತಿ ಗಣತಿಯಲ್ಲಿ ಪರಿಶಿಷ್ಟ ಜಾತಿ ಎಂದು ಸ್ಪಷ್ಟವಾಗಿ ದಾಖಲಿಸಲು ಶಿವಕುಮಾರ್ ಮನವಿ
ಬಳ್ಳಾರಿ 03: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಗಣತಿ ವೇಳೆ ಸಿಂಧೋಳ್ಳು, ಬೇಡ, ಬುಡ್ಗಜಂಗಮ, ದಕ್ಕಲಿಗ, ಹಂದಿ ಜೋಗಿ, ಸಿಳ್ಳೇಕ್ಯಾತ, ದೊಂಬರು, ಚನ್ನದಾಸರು, ಸುಡುಗಾಡು ಸಿದ್ಧರು ಗಣತಿಕಾರ್ಯದ ವೇಳೆ ಅರ್ಜಿಗಳನ್ನು ಭರ್ತಿ ಮಾಡುವಾಗ ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಎಂದು ಕಡ್ಡಾಯವಾಗಿ ಬರೆಸಬೇಕೆಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ವೈ. ಶಿವಕುಮಾರ್ ತಿಳಿಸಿದರು.ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾವೀಗಾಗಲೇ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದು ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ, ಅಲೆಮಾರಿ ಬುಡಕಟ್ಟು ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟಗಳು ಸಲಹೆ ನೀಡಿದಂತೆ ಸಮುದಾಯದ ಜನರು ಜಾತಿ ಗಣತಿಯಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಿಸಬೇಕೆಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್‌ಅವರಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ವರದಿ ನೀಡಲು ಏಕ ಸದಸ್ಯಆಯೋಗರಚನೆ ಮಾಡಿದ್ದು, ಆಯೋಗದ ಶಿಫಾರಸ್ಸಿನ ಅನ್ವಯ ಒಳಮಿಸಲಾತಿ ಕಲ್ಪಿಸುವ ಸಂಬಂಧ ಸಮೀಕ್ಷೆಯನ್ನು ನಡೆಸಲು ಸರ್ಕಾರತೀರ್ಮಾನ ಮಾಡಿದೆ. ಈ ಸಮೀಕ್ಷೆ ಮೇ 5 ರಿಂದಆರಂಭವಾಗಲಿದೆ ಎಂದರು.ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆಜಾತಿಗಣತಿಕಾರ್ಯಕ್ಕೆ ಸರ್ಕಾರ ದಿಟ್ಟಕ್ರಮಕೈಗೊಂಡಿದೆ. ಈ ಅವಧಿಯಲ್ಲಿ ಈಗಾಗಲೇ ಸೂಚಿಸಿದ ಜಿಲ್ಲೆಯ ಸಮುದಾಯದಜನರುಅತ್ಯಂತಜವಾಬ್ದಾರಿಯುತವಾಗಿ ವರ್ತಿಸಬೇಕು.ಜಾತಿಗಣತಿಕಾರ್ಯ ಪೂರ್ಣಗೊಳ್ಳುವವರೆಗೂ ಜಾತ್ರೆಗಳು, ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿತೊಡಗಬಾರದು. ಜಾತಿಗಣತಿಕಾರ್ಯ ಪೂರ್ಣಗೊಂಡು ಒಳ ಮೀಸಲು ಜಾರಿಯಾಗುವವರೆಗೂ ನಾವೆಲ್ಲ ಮನೆಯಲ್ಲಿದ್ದು, ಗಣತಿದಾರರು ಬಂದಾಗಅವರೊಂದಿಗೆ ಸೇರಿ ಬಡಾವಣೆ ಸುತ್ತಬೇಕು.
ಸಮುದಾಯದವರು ಪರಿಶಿಷ್ಟ ಜಾತಿಗೆ ಸೇರಿದಎಲ್ಲರೂ ಪರಿಶಿಷ್ಟ ಜಾತಿಯಂದುಕಡ್ಡಾಯವಾಗಿ ಬರೆಸಬೇಕು.ಜಿಲ್ಲೆ, ತಾಲ್ಲೂಕು.ಪಟ್ಟಣಗಳಲ್ಲಿ ಗ್ರಾಮ, ಪಟ್ಟಣ. ಹೋಬಳಿ, ವಾರ್ಡ್ಗಳಲ್ಲಿ, ಕಾಲೋನಿಯಗಳಲ್ಲಿ, ನಗರಗಳಲ್ಲಿ ನಮ್ಮಜಿಲ್ಲಾ ಮಟ್ಟದಅಲೆಮಾರಿ ಸಮುದಾಯದಜನರಲ್ಲಿಜಾಗೃತಿ ಮೂಡಿಸಬೇಕು.
ಸುದ್ದಿಗೋಷ್ಠಿಯಲ್ಲಿ ಉಭಯ ಸಂಘಟನೆಗಳ ಪದಾಧಿಕಾರಿಗಳಾದ ಡಿ. ರಂಗಯ್ಯ, ಸುಬ್ಬಣ್ಣ, ರಾಮಾಂಜಿನಿ, ಹುಚ್ಚಪ್ಪ, ಹನುಮಂತಪ್ಪ, ಗಾದಿಲಿಂಗ, ಹುಲುಗನ್ನ, ಅಜಪ್ಪ, ಕೆ.ಚನ್ನಬಸಪ್ಪ, ವೆಂಕಟೇಶ್, ಶೈಲಾ ಸೀತಾರಾಮ್, ಕಂಡಪ್ಪ ಸೇರಿದಂತೆ ವಿವಿಧ ಎಸ್.ಸಿ.ಅಲೆಮಾರಿ ಸಮುದಾಗಳ ಮುಖಂಡರು ಹಾಗೂ ಇನ್ನಿತರರು ಇದ್ದರು.