ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ; ಶಿಕ್ಷಣಾಧಿಕಾರಿಗಳಿಂದ ಸನ್ಮಾನ
ಕಾಗವಾಡ, 03: ತಾಲೂಕಿನಲ್ಲಿ ಸನ್ 2024-2025 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಗವಾಡ ವಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ದಿ. 02ರಂದು ಸನ್ಮಾನಿಸಲಾಯಿತು.
ಈ ವೇಳೆ ಬಿಇಓ ಎಂ.ಆರ್. ಮುಂಜೆ ಮಾತನಾಡಿ, ಕಾಗವಾಡ ವಲಯದಲ್ಲಿ ಒಟ್ಟಿ 2390 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1392 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, ಶೇ. 62ಅ ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ತಾಲೂಕಿಗೆ ಎಸ್. ಮಂಗಸೂಳಿ ಪ್ರೌಢ ವಿಭಾಗ ಶಾಲೆಯ ವಿದ್ಯಾರ್ಥಿನಿ ಸುಹಾನಾ ಅಕೀಲ ಮುಲ್ಲಾ 621 (ಶೇ. 99.63ಅ) ಅಂಕಗಳು ಪಡೆದು ಪ್ರಥಮ ಸ್ಥಾನ, ಶಿರಗುಪ್ಪಿಯ ಶ್ರೀ ಪಾರೀಸಾ ಸಾತಗೌಡ ಗುಂಡವಾಡ ಕನ್ನಡ ಪ್ರೌಢ ಶಾಲೆಯ ಸೃಷ್ಟಿ ಬಾಬಾಸಾಹೇಬ ಅಕಿವಾಟೆ, 620 ಶೇ. 99.2 ಅಂಕಗಳೊಂದಿಗೆ ದ್ವೀತಿಯ ಸ್ಥಾನ ಮತ್ತು ಐನಾಪೂರದ ಶಾಂತಿ ಸಾಗರ ವಿದ್ಯಾಪೀಠ ಇಂಗ್ಲೀಷ ಪ್ರೌಢ ಶಾಲೆಯ ಸಂಜನಾ ಭರತೇಶ ಪಾಟೀಲ 618 (ಶೇ. 98.88ಅ) ಅಂಕಗಳು, ಉಗಾರ ಬಿಕೆಯ ಜೆ.ಜಿ. ಎಜ್ಯೂಕೇಷನ್ ಟ್ರಸ್ಟ್ ಕನ್ನಡ ಪ್ರೌಢ ಶಾಲೆಯ ಶ್ರಾವಣಿ ಶ್ರೇಣಿಕ ಹಂಜೆ 618 (ಶೇ.98.88ಅ) ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆಂದು ತಿಳಿಸಿದರು.
ಈ ಸಮುಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ವರ್ಗದವರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.