‘ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ

International Workers' Day

‘ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ

ಬ್ಯಾಡಗಿ  03: ಪ್ರತಿ ರಾಷ್ಟ್ರದ ಆರ್ಥಿಕ ಪ್ರಗತಿಯ ಹಿಂದಿನ ನಿಜವಾದ ಶಕ್ತಿಯೇ ಕಾರ್ಮಿಕರು. ಇವರಿಲ್ಲದೆ ಯಾವುದೇ ಕ್ಷೇತ್ರದ ಅಭಿವೃದ್ಧಿಯನ್ನು ಕಲ್ಪಿಸಲಾಗದು. ಕಾರ್ಮಿಕರ ಶ್ರಮದ ಗೌರವಕ್ಕಾಗಿ, ಅವರ ಹಕ್ಕುಗಳ ರಕ್ಷಣೆಗಾಗಿ ಮತ್ತು ಅವರ ಕೊಡುಗೆಯನ್ನು ಗುರುತಿಸಲು ಪ್ರತಿವರ್ಷ ಮೇ 1 ರಂದು ‘ಅಂತಾರಾಷ್ಟ್ರೀಯ ಕಾರ್ಮಿಕ ದಿನ’ವನ್ನು ಆಚರಿಸಲಾಗುತ್ತದೆ ಎಂದು ಹಿರಿಯ ನ್ಯಾಯವಾಧೀಶ ಅಮೂಲ್ ಹಿರೆಕೂಡಿ ಹೇಳಿದರು.ಶುಕ್ರವಾರ ಅವರು ಸ್ಥಳೀಯ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಹಾಗೂ ಅಂತರರಾಷ್ಟ್ರೀಯ ಕಾರ್ಮಿಕ  ದಿನಾಚರಣೆ. ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.ಈ ದಿನವು ಕಾರ್ಮಿಕರ ಶ್ರಮವನ್ನು ಗೌರವಿಸುವುದರ ಜೊತೆಗೆ, ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಉತ್ತಮ ಕೆಲಸದ ಪರಿಸ್ಥಿತಿಗಳ ಅಗತ್ಯವನ್ನು ಒತ್ತಿಹೇಳುವುದು. ಕಾರ್ಮಿಕರಿಗೆ ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ವಾತಾವರಣ, ಸಮಂಜಸವಾದ ಕೆಲಸದ ಸಮಯ ಮತ್ತು ಶೋಷಣೆಯಿಂದ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಈ ದಿನ ಹೊಂದಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ನ್ಯಾಯವಾದಿ ಸಂಘದ ಅಧ್ಯಕ್ಷ ಆರ್ ಸಿ ಶಿಡೇನೂರ ವಹಿಸಿದ್ದರು. ವೇದಿಕೆಯಲ್ಲಿ ಸಿವಿಲ್ ನ್ಯಾಯಾಧೀಶ ಸುರೇಶ್ ವಗ್ಗನವರ,ರಾಜಣ್ಣ ನ್ಯಾಮತಿ ಸಹಾಯಕ ಸರ್ಕಾರಿ ಅನಿಯೋಜಕರು ರಾಜಣ್ಣ ನ್ಯಾಮತಿ, ಸಹಾಯಕ ಸರ್ಕಾರಿ ಅಭಿಯೋಜಕ ಕೆ ಆರ್ ಲಮಾಣಿ, ನ್ಯಾಯವಾದಿ ಸಂಘದ ಪದಾಧಿಕಾರಿಗಳಾದಜಿ ಬೀ ಯಲ್ಗಚ್ಚ, ಎಚ್ ಜಿ ಮುಳುಗುಂದ, ಎಂ ಎಸ್ ಕುಮ್ಮೂರ, ಎಂಜೆ ಮುಲ್ಲಾ,   ಎಫ್ ಎಮ್ ಮುಳುಗುಂದ, ಸುರೇಶ್ ಕಟೇನಹಳ್ಳಿ, ಭಾರತಿ ಎಸ್ ಕುಲಕರ್ಣಿ , ಶ್ರೀನಿವಾಸ ಕೊಣ್ಣೂರ, ಎಸ್ ಎಚ್ಚ್‌ ಗುಂಡಪ್ಪನವರ, ಎಂ ಏ ಅಗಸರ ಸೇರಿದಂತೆ ಇತರರಿದ್ದರು