ಕೇಂದ್ರ ಸರಕಾರದಿಂದ ಐತಿಹಾಸಿಕವಾಗಿ ಜನ ಗಣತಿಯೊಂದಿಗೆ ಜಾತಿ ಗಣತಿ

Caste census along with population census historically conducted by the central government

ಕೇಂದ್ರ ಸರಕಾರದಿಂದ ಐತಿಹಾಸಿಕವಾಗಿ ಜನ ಗಣತಿಯೊಂದಿಗೆ ಜಾತಿ ಗಣತಿ

ಗದಗ 05 :-  ಕೇಂದ್ರ ಸರಕಾರದಿಂದ ಐತಿಹಾಸಿಕವಾಗಿ ಜನ ಗಣತಿಯೊಂದಿಗೆ ಜಾತಿ ಗಣತಿಯನ್ನು ಕೂಡಾ ಕೈಗೊಳ್ಳುವ ಮಹಾತ್ವಾಕಾಂಕ್ಷಿ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಸಮಸ್ತ ರಾಷ್ಟ್ರವ್ಯಾಪಿ ರಹವಾಸಿಯಾಗಿರುವ ಸಮಸ್ತ ನಾಗರಿಕರ ನಿಖರವಾದ ಜನಗಣತಿಯೊಂದಿಗೆ ಜಾತಿ ಗಣತಿಯ ಮಾಹಿತಿಯನ್ನು ಧಾಖಲಿಸಲು ನೆರವುದಾಯಕವಾಗಿರುತ್ತದೆ. 

ಅದರಂತೆ ನಮ್ಮ ದೈವಜ್ಞ ಬ್ರಾಹ್ಮಣ ಸಮುದಾಯದಲ್ಲಿಯೂ ಸಮಸ್ತ ರಾಜ್ಯವ್ಯಾಪಿಯಾಗಿ 28 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಬ್ರಹತ್ ಸಮಾಜವಾಗಿದ್ದು, ಆದರೆ ನಿಖರವಾದ ಅಧಿಕೃತವಾದ ಜನಸಂಖ್ಯೆಯ ಅಂಕಿ ಸಂಖ್ಯೆಗಳ ಕೊರತೆಯಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಸೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ನೈತಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿ ಉಳಿದಿರುತ್ತದೆ.ಇದಕ್ಕೆ ಉತ್ತಮ ನಿರ್ದೇಶನವೆಂಬಂತೆ ಇತ್ತೀಚಿಗಷ್ಟೇ ಘನ್ ರಾಜ್ಯ ಸರಕಾರದಿಂದ ಕೈಗೊಳ್ಳಲಾದ ಜಾತಿ ಗಣತಿಯ ಅಂಕಿ ಸಂಖ್ಯೆಗಳಲ್ಲಿ ನಮ್ಮ ಹಿಂದೂ ದೈವಜ್ಞ ಬ್ರಾಹ್ಮಣ ಸಮಾಜದವರು ಸಮಸ್ತ ಕರ್ನಾಟಕ ರಾಜ್ಯದಲ್ಲಿಯೇ ಕೇವಲ 80155 ಎಂದು ನಮೂದಾಗಿರುತ್ತದೆ. ಆದರೆ ನೈಜ್ಯತೆಯಲ್ಲಿ ಸಮಸ್ತ ರಾಜ್ಯದಲ್ಲಿ 28 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ದೈವಜ್ಞ ಬ್ರಾಹ್ಮಣರು ಹೊಂದಿರುವರು.ಆದರೆ ಈ ಹಿಂದೆ ನಮ್ಮ ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯರು ತಮ್ಮ ಮಕ್ಕಳ ಶಾಲಾ ಧಾಖಲೆಯಲ್ಲಿ ತಪ್ಪಾಗಿ ವಿಶ್ವ ಬ್ರಾಹ್ಮಣ, ಅಕ್ಕಸಾಲಿಗ, ವಿಶ್ವಕರ್ಮ, ಪತ್ತಾರ, ಹೀಗೆ ಇನ್ನೂ ಮುಂತಾದ ಜಾತಿಗಳ ಹೆಸರನ್ನು ತಪ್ಪಾಗಿ ನಮೂದಿಸಿ ತಮ್ಮ ಮೂಲ ಜಾತಿ ಹಿಂದೂ ದೈವಜ್ಞ ಬ್ರಾಹ್ಮಣ ಎಂದು ನಮೂದಿಸದೇ ಇರುವುದರಿಂದ ಹಲವಾರು ಪ್ರಗತಿಪರ ಸಾಮಾಜಿಕ, ಆರ್ಥಿಕ ಸೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗಿರುವರು.  

ಆದುದರಿಂದ ಒಳ ಮೀಸಲಾತಿ ಜಾರಿ ಕುರಿತು ರಾಜ್ಯ ಸರಕಾರದಿಂದ ತೀರ್ಮಾನಿಸಿದೆ. ಅದು ಎರಡು ರೀತಿಯ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ  ಮನೆ ಮನೆಗೆ ತೆರಳಿ ಜಾತಿ ಸಮೀಕ್ಷೆ ಮಾಡಲಿದ್ದಾರೆ. ಸಮೀಕ್ಷೆಯ ಸಂಧರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಮುದಾಯದವರು ಜಾತಿ ಅಂಕಣ (ಕಾಲಂ ) ದಲ್ಲಿ ಹಿಂದೂ ದೈವಜ್ಞ ಬ್ರಾಹ್ಮಣ ಎಂದು ಮಾತ್ರ ಬರೆಯಿಸಿರಿ ನಮ್ಮ ಸಮುದಾಯ ಅನಾದಿ ಕಾಲದಿಂದಲೂ ಅತ್ಯಂತ ಹಿಂದುಳಿದ ಸಮಾಜ ಆಗಿದೆ. ನಾವು ಸರಕಾರಿ ಸೌಲಭ್ಯ ಪಡೆಯುವುದರಲ್ಲಿ ವಿಫಲರಾಗಿರುತ್ತೇವೆ. ಇತರೆ ಅನ್ಯ ಸಮುದಾಯದಂತೆ ನಮ್ಮ ದೈವಜ್ಞ ಬ್ರಾಹ್ಮಣ ಸಮಾಜದವರು ಅಭಿವೃದ್ಧಿ ಪಥದತ್ ಸಾಗಲು  

ಸಮಸ್ತ ಕರ್ನಾಟಕ ರಾಜ್ಯವ್ಯಾಪಿ ರಹವಾಸಿಯಾಗಿರುವ ಹಿಂದೂ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರು ಜಾತಿ ಗಣತಿಯ ಸಂಧರ್ಭದಲ್ಲಿ ಕಡ್ಡಾಯವಾಗಿ ಹಿಂದೂ ದೈವಜ್ಞ ಬ್ರಾಹ್ಮಣ ಎಂದು ಬರೆಯಿಸಿ ಇದರಿಂದ ನಮ್ಮ ದೈವಜ್ಞ ಬ್ರಾಹ್ಮಣ ಸಮುದಾಯಕ್ಕೆ ದೊರಕುವ ಸರಕಾರಿ ಸೌಲಭ್ಯಗಳನ್ನು ಪಡೆಯಲು ನಮಗೆ ಹಾಗೂ ನಮ್ಮ ಮುಂದಿನ ಜನಸಮುದಾಯಕ್ಕೆ ವ ಮುಂದಿನ ಪೀಳಿಗೆಗೆ ನೆರವುದಾಯಕವಾಗಲೂ ಅಖಿಲ ಕರ್ನಾಟಕ ದೈವಜ್ಞ ಮಹಾಸಭಾ (ರಿ) ಗದಗ ಇದರ ರಾಜ್ಯಾಧ್ಯೇಕ್ಷರಾದ ರಾಘವೇಂದ್ರ ಪಾಲನಕರ ಪ್ರಕಟಣೆಯ ಮೂಲಕ ಜನಾಗ್ರಹವನ್ನು ವ್ಯಕ್ತಪಡಿಸುವ ಮೂಲಕ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರಲ್ಲಿ ವಿನಂತಿಸಿರುತ್ತಾರೆ.