ಲೋಕದರ್ಶನ ವರದಿ
ಉಗರಗೋಳ 02: ನಾಡಿನ ಉದ್ದಗಲಕ್ಕೂ ಜಾತ್ರೆಗಳು ರಾರಾಜಿಸುತ್ತಿದ್ದು, ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸತ್ಸಂಪ್ರದಾಯಗಳು, ಶಕ್ತಿದೇವತೆಗಳ ಅವತಾರಗಳು, ಸಿದ್ಧಿಪುರುಷರ, ಶರಣರ, ಸಾಧುಸಂತರ ತತ್ವಸಿದ್ಧಾಂಗಳನ್ನು ಪ್ರತಿಯೊಬ್ಬರು ನಾಮಸ್ಮರಣೆ ಮಾಡುವದರಿಂದ ದುಃಖವೆಲ್ಲಾ ದೂರವಾಗಿ ಜೀವನವೆಲ್ಲಾ ಆನಂದಮಯವಾಗುತ್ತದೆ ಎಂದು ಬಾಗಲಕೋಟೆಯ ಪರಮಹಂಸ ಪರಮರಾಮಾರೂಢ ಮಹಾಸ್ವಾಮಿಗಳು ಹೇಳಿದರು.
ಸವದತ್ತಿ ತಲೂಕಿನ ಉಗರಗೋಳ ಗ್ರಾಮದ ರಾಮಾರೂಢ ಮಠದಲ್ಲಿ ರವಿವಾರ ರಂದು, ನಿರಂತರ 5 ದಿನಗಳವರೆಗೆ ವಿಶ್ವಶಾಂತಿಗಾಗಿ ಪ್ರಾಥರ್ಿಸಿ ನಡೆಯುತ್ತಿರುವ 20ನೇ ಸತ್ಸಂಗ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಅಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸರ್ವಧಮರ್ಿಯರು ತಮ್ಮಯ ಹೃದಯದಲ್ಲಿ ಮೊದಲು ಸ್ಥಾನವನ್ನು ಗುರು ಹಾಗೂ ಪರಮಾತ್ಮನಿಗೆ ನೀಡಿ, ಪರಮಾತ್ಮನ ಕಡೆ ಮುಖ ಮಾಡಿ, ಸುಜ್ಞಾನದ ಜ್ಞಾನ ಸಂಪಾದಿಸಿಕೊಂಡು ಮುಕ್ತಿ ಮಾರ್ಗದತ್ತ ಸಾಗಿ ಎಂದು ಹೇಳಿದರು. ಸಂಗಳ ಶಿವಾನಂದಮಠದ ಚಿದಾನಂದ ಮಾತನಾಡಿ ಜೀವನದ ಜಂಜಾಟದಲ್ಲಿ ದುಃಖದಿಂದ ದೂರವಿರಲು ಹಾಗೂ ಶಾಂತಿಯ ಜ್ಯೋತಿ ಕಾಣಲು ಗುರುವಿನ ಮಾರ್ಗದರ್ಶನ ಅವಶ್ಯ ಎಂದರು.
ಇಬ್ರಾಂಹಿಪೂರ ಶಿವಾನಂದಮಠದ ಅಭಿನವ ರೇವಣಶಿದ್ಧ ಶ್ರೀಗಳು ಮಾತನಾಡಿ ಸಂಸಾರವೆಂಬುದು ದು:ಖದ ಮನೆ, ಶಾಂತಿ, ನೆಮ್ಮದಿ, ಮೋಕ್ಷಕ್ಕಾಗಿ ಪರಿಶುದ್ದ ಮನಸ್ಸಿನಿಂದ ದೇವರ ಧ್ಯಾನ ಮಾಡಿ ಎಂದರು.
ಉಗರಗೋಳದ ರಾಮಾರೂಢ ಮಠದ ಬ್ರಹ್ಮಾರೂಢ ಶ್ರೀಗಳು, ಘಟಪ್ರಭಾದ ಭೀಮಾನಂದ ಶ್ರೀಗಳು, ಯರನಾಳದ ರಾಮಾನಂದ ಶ್ರೀಗಳು, ಜಾಂಗಟಿಳದ ಸತ್ಯಾನಂದ ಶಾಸ್ತ್ರಿಗಳು, ಗ್ರಾಪಂ ಅಧ್ಯಕ್ಷ ಕೃಷ್ಟಪ್ಪ.ರಾ. ಲಮಾಣಿ, ತಾಪಂ ಸದಸ್ಯ ಪ್ರಕಾಶ ಲಮಾಣಿ, ಡಾ, ಎಸ್ ಎಸ್ ಕುರಟ್ಟಿ, ಯಲ್ಲಪ್ಪ ಸಂಬರಗಿ, ದಯಾನಂದ ಮಾಳನ್ನವರ, ನಾಗಪ್ಪ ಗರಗದ, ಮೈಲಾರಪ್ಪ ಶಿದ್ದಕ್ಕನವರ, ಶಿಕ್ಷಕ ಆನಂದ ಭೋವಿ, ಬಾಬಣ್ಣ ಹನಸಿ, ವಾಯ್ ವಾಯ್ ಕಾಳಪ್ಪನವರ, ಚಿಕ್ಕರಾಮಾರೂಢ ಕಾಳಪ್ಪನವರ.ಎಸ್ ಸಂಗಳದ.ಅಜ್ಜಪ್ಪ ಕೊಪ್ಪದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಇದ್ದರು. ಆರೂಢ ಜ್ಯೋತಿ ಸಂಗೀತ ಬಳಗದಿಂದ ಸಂಗೀತ ಸೇವೆ ಜರುಗಿತು.
ಶಿವಪ್ಪಯ್ಯ ಶಿವಯೋಗಿಗಳ ಮಠದ ಸಂಸ್ಕ್ರತ ವೇಧಪಾಠ ಶಾಲೆಯ ವಿಧ್ಯಾಥರ್ಿಗಳಿಂದ ವೇದ ಘೋಷ, ನಾಗಪ್ಪ ಬಡೆಪ್ಪನವರ ಸ್ವಾಗತಿಸಿದರು. ಮುತ್ತಯ್ಯ ತೊರಗಲ್ಮಠ ನಿರೂಪಿಸಿ ವಂದಿಸಿದರು.